newsfirstkannada.com

ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಭಾರೀ ಸಿದ್ಧತೆ.. ರೆಡಿಯಾಗ್ತಿವೆ ಕ್ವಿಂಟಾಲ್​ಗಟ್ಟಲೆ ರೊಟ್ಟಿ, ಶೇಂಗಾ ಹೋಳಿಗೆ

Share :

Published January 21, 2024 at 9:06am

    ಗವಿಸಿದ್ದೇಶ್ವರ ಅಜ್ಜನ ದರ್ಶನ ಪಡೆಯಲಿದ್ದಾರೆ ಲಕ್ಷಾಂತರ ಭಕ್ತರು

    ಭಕ್ತರಿಗಾಗಿ ಈಗಾಗಲೇ ಮಹಾಪ್ರಸಾದವನ್ನ ತಯಾರಿಸಲಾಗುತ್ತಿದೆ

    ಶ್ರೀಗವಿಸಿದ್ದೇಶ್ವರ ಅಜ್ಜನ ಜಾತ್ರೆ ಎಂದರೆ ಅದು ಭೂ ಲೋಕದ ಸ್ವರ್ಗ!

ಕೊಪ್ಪಳ: ದಕ್ಷಿಣ ಭಾರತದ ಕುಂಬಮೇಳವೆಂದೇ ಪ್ರಸಿದ್ಧಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಅದ್ಧೂರಿಯಾಗಿ ನಡೆಯಲಿದೆ. ಲಕ್ಷಾಂತರ ಭಕ್ತರು ಗವಿಸಿದ್ದೇಶ್ವರನ ದರ್ಶನ ಪಡೆದು ಪಾವನರಾಗಲಿದ್ದು ಜಾತ್ರೆಗೆ ಬರುವ ಭಕ್ತರಿಗಾಗಿ ಈಗಾಗಲೇ ಮಹಾಪ್ರಸಾದವನ್ನ ತಯಾರಿಸಲಾಗುತ್ತಿದೆ.

ಗವಿಸಿದ್ದೇಶ್ವರ ಅಜ್ಜನ ಜಾತ್ರೆ ಎಂದರೆ ಅದು ಭೂ ಲೋಕದ ಸ್ವರ್ಗ ಎಂದು ಜಾತ್ರೆಗೆ ಬರುವ ಭಕ್ತರು ವರ್ಣಿಸುತ್ತಾರೆ. ಜಾತ್ರೆಯನ್ನು ಸ್ವತಹ ಭಕ್ತರೇ ನಡೆಸುವುದು ಗವಿಸಿದ್ದಪ್ಪ ಅಜ್ಜನ ಜಾತ್ರೆಯ ವಿಶೇಷವಾಗಿದೆ. ಅದರಲ್ಲೂ ಜಾತ್ರೆಯಲ್ಲಿ ಮಹಾಪ್ರಸಾದದ ದಾಸೋಹ ಎಲ್ಲರ ಗಮನವನ್ನು ಸೆಳೆಯುತ್ತದೆ.

ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ಮಹಾ ದಾಸೋಹ ಇರುತ್ತದೆ. ಇದು ಭಕ್ತರ ನಡೆಸುವ ದಾಸೋಹವಾಗಿದ್ದು, ಹೀಗಾಗಿ ಈ ಬಾರಿ ಅಗಳಕೆರಾ ಗ್ರಾಮದಲ್ಲಿ ಈಗಾಗಲೇ ಎಳ್ಳಿನ ಹೋಳಿಗೆ, ಶೇಂಗಾ ಹೋಳಿಗೆಗಳನ್ನ ದೊಡ್ಡ ಮಟ್ಟದಲ್ಲಿ ಮಹಿಳೆಯರು ತಯಾರಿಸುತ್ತಿದ್ದಾರೆ.

ಕಳೆದೆರಡು ದಿನಗಳಿಂದ ಸುಮಾರು ಒಂದೂವರೆ ಕ್ವಿಂಟಾಲ್ ಶೇಂಗಾ ಹೋಳಿಗೆ, ಅರ್ಧ ಕ್ವಿಂಟಾಲ್ ಜೋಳದ ರೊಟ್ಟಿಯನ್ನು ಗ್ರಾಮದ ನೂರಾರು ಮಹಿಳೆಯರು ಸ್ವಯಂ ಪ್ರೇರಿತರಾಗಿ ಸ್ವಂತ ಖರ್ಚಿನಲ್ಲಿ ಜಾತ್ರೆಗಾಗಿಯೇ ತಯಾರಿಸುತ್ತಿದ್ದಾರೆ. ಗ್ರಾಮದ ಸ್ವಾಮಿ ವಿವೇಕಾನಂದ ಸಂಘದ ಯುವಕರ ಸಹಾಯದೊಂದಿಗೆ ಶೇಂಗಾ ಹೋಳಿಗೆಗಳನ್ನ ತಯಾರಿಸಲಾಗುತ್ತಿದ್ದು, ಮಹಾಪ್ರಸಾದವಾಗಿ ಜಾತ್ರೆಗೆ ಬರುವ ಭಕ್ತರಿಗೆ ನೀಡಲಾಗುತ್ತದೆ.

ಜನವರಿ 27ರಂದು ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಅಂದು ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಜಾತ್ರೆ ಸಮಯದಲ್ಲಿ ಪ್ರತಿ ದಿನ ಭಕ್ತರು ಶ್ರೀ ಮಠಕ್ಕೆ ಆಗಮಿಸುತ್ತಾರೆ. ಜ.23ರಿಂದ 29ರವರೆಗೆ ಗವಿಸಿದ್ದೇಶ್ವರ ಸಂಸ್ಥಾನ ಶ್ರೀ ಗವಿಮಠದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಭಾರೀ ಸಿದ್ಧತೆ.. ರೆಡಿಯಾಗ್ತಿವೆ ಕ್ವಿಂಟಾಲ್​ಗಟ್ಟಲೆ ರೊಟ್ಟಿ, ಶೇಂಗಾ ಹೋಳಿಗೆ

https://newsfirstlive.com/wp-content/uploads/2024/01/KPL_GAVISIDDESHWARA_2.jpg

Load More