/newsfirstlive-kannada/media/post_attachments/wp-content/uploads/2025/07/Gayatri_Joshi.jpg)
ಕೇವಲ ಒಂದು ಸಿನಿಮಾದಲ್ಲಿ ಹೀರೋಯಿನ್ ಆಗಿ ಅಭಿನಯ ಮಾಡಿ ಮತ್ತೆ ಕಾಣದಂತೆ ಮರೆಯಾದವರು ಕೆಲವರು ಇದ್ದಾರೆ. ಈ ಲಿಸ್ಟ್ನಲ್ಲಿ ಬಾಲಿವುಡ್ನ ಮಾಡೆಲ್, ಬ್ಯೂಟಿಫುಲ್ ಹೀರೋಯಿನ್ ಕೂಡ ಒಬ್ಬರು. ಈ ನಟಿ ಶಾರುಖ್ ಖಾನ್ ಜೊತೆ ಒಂದೇ ಒಂದು ಸಿನಿಮಾ ಮಾಡಿದ್ದು. ಇದಾದ ಮೇಲೆ ಈ ಬ್ಯೂಟಿ ಹೀರೋಯಿನ್ ಸಾವಿರಾರು ಕೋಟಿ ರೂಪಾಯಿಗಳ ಒಡತಿಯಾಗಿದ್ದಾರೆ. ಇಷ್ಟಕ್ಕೂ ಯಾರು ಆ ಚೆಲುವೆ?.
ಈಗ ನಾವು ಹೇಳುತ್ತಿರುವುದು ಮಾಡೆಲ್ ಕಮ್ ನಟಿ ಗಾಯತ್ರಿ ಜೋಶಿ ಕುರಿತು. 2004ರಲ್ಲಿ ತೆರೆಗೆ ಬಂದಂತಹ ಸ್ವದೇಶ ಎನ್ನುವ ಸಿನಿಮಾದಲ್ಲಿ ಶಾರುಖ್ ಖಾನ್ ಅವರ ಜೊತೆ ಗಾಯತ್ರಿ ಜೋಶಿ ಅಭಿನಯ ಮಾಡಿದ್ದರು. ಗಾಯತ್ರಿ ಜೋಶಿ ಅವರ ಸಿನಿಮಾ ಇದೇ ಫಸ್ಟ್, ಇದೇ ಲಾಸ್ಟ್. ಆ ಮೇಲೆ ಇವರು ಯಾವ ಸಿನಿ ರಂಗದಲ್ಲೂ ಮೂವಿ ಮಾಡಿಲ್ಲ. ಇಂಡಸ್ಟ್ರಿಗೆ ಗುಡ್ಬೈ ಹೇಳಿ ಮದುವೆಯಾಗಿ ಫ್ಯಾಮಿಲಿ ಜೊತೆ ಕಾಲ ಕಳೆಯುತ್ತಿದ್ದಾರೆ. ಇಷ್ಟಕ್ಕೂ ಇವರು ಮದುವೆ ಆಗಿದ್ದು ಯಾರನ್ನ?.
ಗಾಯತ್ರಿ ಜೋಶಿ ಅವರು 2005ರಲ್ಲಿ ಒಬೆರಾಯ್ ರಿಯಲ್ಟಿ (Luxury Oberoi Realty Flats in Mumbai- Oberoi Realty) ಸಿಇಒ ವಿಕಾಸ್ ಒಬೆರಾಯ್ ಅವರನ್ನು ಮದುವೆ ಆಗುತ್ತಾರೆ. ವಿವಾಹ ಆದ ಮೇಲೆ ಹೀರೋಯಿನ್ ಕುಟುಂಬದ ಕಡೆಗೆ ಹೆಚ್ಚು ಗಮನ ಕೊಡಲು ಶುರು ಮಾಡಿದರು. ಮಾಡೆಲಿಂಗ್ ಹಾಗೂ ಸಿನಿಮಾ ಮರೆತೆಬಿಟ್ಟರು. ಆದರೆ ಈಗ ಗಾಯತ್ರಿ ಜೋಶಿ ಮತ್ತು ವಿಕಾಸ್ ಒಬೆರಾಯ್ಗೆ ಎರಡು ಮಕ್ಕಳು ಇದ್ದಾರೆ.
ಗಾಯತ್ರಿ ಜೋಶಿ ಕುಟುಂಬ ಮುಂಬೈನಲ್ಲಿ ಅದ್ಧೂರಿಯಾದ ಗ್ರ್ಯಾಂಡ್ ಆಗಿರೋ ಮನೆಯಲ್ಲಿ ವಾಸ ಇದ್ದಾರೆ. ಈಕೆಯ ಗಂಡ ವಿಕಾಸ್ ಒಬೆರಾಯ್ ತಂದೆ ರಣಬೀರ್ ಒಬೆರಾಯ್ ರಿಯಲ್ ಎಸ್ಟೇಟ್ ವ್ಯಾಪಾರಿ ಆಗಿದ್ದರು. ಈಗ ಅದೇ ವ್ಯಾಪಾರವನ್ನು ವಿಕಾಸ್ ಒಬೆರಾಯ್ ಮಾಡುತ್ತಿದ್ದು ಇದರಿಂದ ಸಾವಿರಾರು ಕೋಟಿ ರೂಪಾಯಿ ಆಸ್ತಿ ಸಂಪಾದನೆ ಮಾಡಿದ್ದಾರೆ.
ಒಬೆರಾಯ್ ರಿಯಲ್ಟಿ ಕಂಪನಿ ಮೂಲಕ ಮುಂಬೈನಲ್ಲಿ ದೊಡ್ಡ ದೊಡ್ಡ ಪ್ರಾಜೆಕ್ಟ್ಗಳನ್ನು ಮಾಡಿದರು. ಇದರಲ್ಲಿ ಪ್ರಮುಖವಾದದ್ದು ಎಂದರೆ 360 ವೆಸ್ಟ್ ಪ್ರಾಜೆಕ್ಟ್ ಆಗಿದೆ. ಈ ಪ್ರಾಜೆಕ್ಟ್ನಲ್ಲಿ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ನಿವಾಸಗಳನ್ನು ಖರೀದಿ ಮಾಡಿದ್ದಾರೆ. ಶಾಹಿದ್ ಕಪೂರ್, ಅಕ್ಷಯ್ ಕುಮಾರ್, ಅಭಿಷೇಕ್ ಬಚ್ಚನ್ ಸೇರಿದಂತೆ ಬಿಗ್ ಸ್ಟಾರ್ಸ್ ಮನೆಗಳನ್ನ ಕೊಂಡುಕೊಂಡರು.
ಇದನ್ನೂ ಓದಿ: ಭಾರತದಲ್ಲೇ ಮೊಟ್ಟ ಮೊದಲ ಕೇಸ್; ಮಹಿಳೆಯ ಗರ್ಭಕೋಶದ ಬದಲಿಗೆ ಲಿವರ್ನಲ್ಲಿ ಬೆಳೆಯುತ್ತಿರೋ ಭ್ರೂಣ!
ಈ ಪ್ರಾಜೆಕ್ಟ್ನ ಅಪಾರ್ಟ್ಮೆಂಟ್ನಲ್ಲಿ 4 ಬಿಹೆಚ್ಕೆ, 5 ಬಿಹೆಚ್ಕೆ ನಿವಾಸಗಳಿವೆ. ಒಂದು ಅಪಾರ್ಟ್ಮೆಂಟ್ ಸುಮಾರು 45 ಕೋಟಿ ರೂಪಾಯಿಯಿಂದ 57 ಕೋಟಿ ರೂಪಾಯಿ ಬೆಲೆ ಬಾಳುತ್ತದೆ. ಅರಮನೆಯಂತಹ ಮನೆಯಲ್ಲಿ ಗಾಯತ್ರಿ ಜೋಶಿ ಕುಟುಂಬ ವಾಸಿಸುತ್ತಿದೆ. Ritz–Carlton ಹೋಟೆಲ್ ಇರೋ ಪ್ರೀಮಿಯಂ ಪ್ರಾಜೆಕ್ಟ್ ಆಗಿದೆ.
ಒಂದೇ ಒಂದು ಸಿನಿಮಾ ಮಾಡಿದ ಗಾಯತ್ರಿ ಜೋಶಿ ಈಗ ದೊಡ್ಡ ಮಟ್ಟದಲ್ಲಿ ಲೈಫ್ ಲೀಡ್ ಮಾಡುತ್ತಿದ್ದಾರೆ. ಸಿನಿಮಾದಿಂದ ದೂರವಾದ ನಟಿ ಕೋಟಿ ಕೋಟಿ ಬೆಲೆ ಬಾಳೋ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಪ್ರಸ್ತುತ ವಿಕಾಸ್ ಒಬೆರಾಯ್ ಅವರ ಆಸ್ತಿ 45,000 ಕೋಟಿ ರೂಪಾಯಿಗಳು ಎಂದು ಹೇಳಲಾಗಿದೆ. ಇನ್ನು ಗಾಯತ್ರಿ ಜೋಶಿ ಅವರ ಜೀವನ ಪಯಾಣ ತಿಳಿದುಕೊಂಡವರು ಇದೊಂದು ಕಾಲ್ಪನಿಕ ಕಥೆನಾ ಎನ್ನುವ ಯೋಚನೆಯಲ್ಲಿ ಮುಳುಗುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ