newsfirstkannada.com

ನಮ್ಮ ತಂದೆ ಬಂಗಾರಪ್ಪ ನಡೆದ ದಾರಿಯಲ್ಲೇ ನಾವು ನಡೆಯುತ್ತೇವೆ- ಗೀತಾ ಶಿವರಾಜ್​ ಕುಮಾರ್

Share :

Published March 20, 2024 at 2:54pm

  ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಗೀತಾ ಭರ್ಜರಿ ಮತಬೇಟೆ

  ಪ್ರಚಾರಕ್ಕೆ ನಟರನ್ನು ಕರೆದಿಲ್ವಂತೆ ಗೀತಾ, ಯಾಕೆ ಗೊತ್ತಾ?

  ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಶಿವಣ್ಣನ ಪತ್ನಿ

ಶಿವಮೊಗ್ಗ ಲೋಕಸಭೆ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಗೀತಾ ಶಿವರಾಜ್​ ಕುಮಾರ್ ಭರ್ಜರಿ ಮತಬೇಟೆ ನಡೆಸಿದರು. ಗೀತಾ ಅವರಿಗೆ ಪತಿ ಶಿವಣ್ಣ, ಕಾಂಗ್ರೆಸ್ ಮುಖಂಡರಾದ ಬಿ.ಕೆ.ಸಂಗಮೇಶ್, ಗೋಪಾಲಕೃಷ್ಣ ಬೇಳೂರು ಸಾಥ್ ನೀಡಿದರು.

ಭದ್ರಾವತಿಯಲ್ಲಿ ಪ್ರಚಾರ ನಡೆಸಿ ಮಾತನಾಡಿದ ಅವರು.. ಕಾರ್ಯಕರ್ತರ ಉತ್ಸಾಹ ನೋಡಿ ನನಗೆ ತುಂಬಾ ಸಂತೋಷ ಆಗುತ್ತಿದೆ. ಕಾರೇಹಳ್ಳಿಯಿಂದ ಚುನಾವಣೆ ಪ್ರಚಾರ ಆರಂಭಿಸಿದ್ದೇವೆ. ಬೇಳೂರು ಗೋಪಾಲಕೃಷ್ಣ, ಬಿ.ಕೆ ಸಂಗಮೇಶ್ ನಮ್ಮ ಜೊತೆಗಿದ್ದಾರೆ. ಗೆಲ್ಲಬೇಕೆಂದು ಚುನಾವಣೆಗೆ ನಿಂತಿದ್ದೇನೆ. ವಾತಾವರಣ ತುಂಬಾ ಚೆನ್ನಾಗಿದೆ ಎಂದರು.

ಈಗಿನ ವಾತಾವರಣ ನೋಡಿದರೆ ನನ್ನ ಗೆಲುವಿಗೆ ಯಾವುದೇ ತೊಂದರೆ ಆಗುವುದಿಲ್ಲ. ಈ ಕ್ಷೇತ್ರದಲ್ಲಿ ಜನರು ನನ್ನನ್ನ ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ಇದೆ. ನಾವು ಫೈಟ್- ಗಿಟ್ ನೋಡುವುದಿಲ್ಲ. ಪಕ್ಷ ಏನು ಹೇಳುತ್ತೆ ಅದೇ ರೀತಿಯಲ್ಲಿ ಪ್ರಚಾರ ಆರಂಭಿಸಿದ್ದೇವೆ. ನಮ್ಮ ತಂದೆ ನಡೆದ ದಾರಿಯಲ್ಲೇ ನಾವು ನಡೆಯುತ್ತೇವೆ. ತಂದೆಯವರ ಸೇವೆ ನಮಗೆ ಅನುಕೂಲ ಆಗಲಿದೆ. ಪಂಚಾಯತ್ ಮಟ್ಟದಲ್ಲೂ ಪ್ರಚಾರ ಮಾಡಲು ಪ್ಲಾನ್ ಮಾಡಿದ್ದೇವೆ. ಸ್ಟಾರ್ ನಟರಿಗೆ ಆಹ್ವಾನ ನೀಡಿಲ್ಲ. ಬಿಸಿಲಿನಲ್ಲಿ ಅವರಿಗೂ ತೊಂದರೆ ಆಗುತ್ತೆ ಎಂದು ಆಹ್ವಾನ ನೀಡಿಲ್ಲ ಎಂದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಮ್ಮ ತಂದೆ ಬಂಗಾರಪ್ಪ ನಡೆದ ದಾರಿಯಲ್ಲೇ ನಾವು ನಡೆಯುತ್ತೇವೆ- ಗೀತಾ ಶಿವರಾಜ್​ ಕುಮಾರ್

https://newsfirstlive.com/wp-content/uploads/2024/03/SHIVANNA-3.jpg

Load More