newsfirstkannada.com

ಮಗಳನ್ನು ನೆನೆದು ಬಿಕ್ಕಿಬಿಕ್ಕಿ ಅತ್ತ ತಾಯಿ; ನೇಹಾ ಬಗ್ಗೆ ಗೀತಾ ಹಿರೇಮಠ ಹೇಳಿದ್ದೇನು?

Share :

Published April 20, 2024 at 7:08pm

Update April 20, 2024 at 7:10pm

    ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ನೇಹಾ ಹಿರೇಮಠ ಕೊಲೆ ಕೇಸ್​​

    ತನ್ನ ಅಳಲು ತೋಡಿಕೊಂಡ ನೇಹಾಳ ತಾಯಿ ಗೀತಾ ಹಿರೇಮಠ!

    ನನ್ನ ಮಗಳನ್ನು ಕೊಂದವನನ್ನು ಗಲ್ಲಿಗೇರಿಸಿ ಎಂದು ಪಟ್ಟು ಹಿಡಿದ್ರು

ಹುಬ್ಬಳ್ಳಿ: ಮಗಳು ನೇಹಾ ಹಿರೇಮಠ ಸಾವಿನ ಬಗ್ಗೆ ತಾಯಿ ಗೀತಾ ಹಿರೀಮಠ ಮಾತಾಡಿದ್ದಾರೆ. ನನ್ನ ಮಗಳು ಯಾವ ತಪ್ಪು ಮಾಡಿದ್ದಳು ಎಂದು ಅವನು ಕೊಂದ. ಅವನಿಗೆ ಗಲ್ಲು ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ.

ಇನ್ನು, ಫಯಾಜ್​​ ತಂದೆ, ತಾಯಿ ಕ್ಷಮೆ ಕೇಳಿದ ಬಗ್ಗೆ ಮಾತಾಡಿದ ಗೀತಾ, ಯಾರು ಕ್ಷಮೆ ಕೇಳಿದ್ರೂ ನನ್ನ ಮಗಳು ವಾಪಸ್​ ಬರಲ್ಲ. ನನ್ನ ಕಣ್ಣ ಮುಂದೆಯೇ ಮಗಳನ್ನು ಚಾಕುವಿಂದ ಇರಿದು ಕೊಂದು ಹಾಕಿದ. ನನ್ನಿಂದ ಕೇವಲ 10 ಹೆಜ್ಜೆ ದೂರದಲ್ಲಿ ಮಗಳಿದ್ದಳು ಎಂದರು.

ನಾನು ಎಂದಿನಂತೆಯೇ ಅವಳನ್ನು ಕರೆದುಕೊಂಡು ಬರಲು ಕಾರಿನಲ್ಲಿ ಕ್ಯಾಂಪಸ್​ಗೆ ಹೋದೆ. ಡಿಗ್ರಿ ಮಾಡುತ್ತಿದ್ದ ಅವನು, ಇವಳು ಇಬ್ಬರು ಕ್ಲಾಸ್​ಮೇಟ್ಸ್​​. ಯಾವಾಗಲೂ ಮದುವೆ ಆಗು, ಲವ್​ ಮಾಡು ಎಂದು ಹಿಂದೆ ಬಿದ್ದಿದ್ದ ಎಂದು ನೇಹಾ ನನ್ನ ಬಳಿ ಹೇಳಿಕೊಂಡಿದ್ದಳು. ನಾನು ಓದುತ್ತೇನೆ ಎಂದಿದ್ದಕ್ಕೆ ಮಾಸ್ಟರ್ಸ್​ಗೆ ಸೇರಿಸಿದ್ದೆವು. 6 ತಿಂಗಳು ಮನೆಯಲ್ಲೇ ಇದ್ದಳು. ಈಗ ಕಾಲೇಜಿಗೆ ಮತ್ತೆ ಹೋಗುವಾಗ ಹೀಗೆ ಆಗಿದೆ ಎಂದರು.

ನಾವು ಕಾಲೇಜು ಎಂದಮೇಲೆ ಹುಡುಗರು ರೇಗಿಸೋದು ಇದ್ದಿದ್ದೇ ಎಂದು ಸುಮ್ಮನಿದ್ದೆವು. ಇನ್ನೇನು ಫೈನಲ್​​ ಡಿಗ್ರಿ ಪರೀಕ್ಷೆ ಮುಗಿಯುತ್ತಿದೆ ಎಂದು ಸೈಲೆಂಟ್​ ಆಗಿ ಇದ್ದೆವು. ಕೊನೆಗೂ ಮಗಳು ನಮ್ಮನ್ನು ಬಿಟ್ಟು ಹೋದಳು. ಅವನು ಬದುಕೋಕೆ ಲಾಯಕ್ಕು, ಸಾಯಿಸಿಬಿಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಒಬ್ಬರಿಗೊಬ್ಬರು ಬಹಳ ಪ್ರೀತಿಸುತ್ತಿದ್ದರು.. ನೇಹಾ, ಫಯಾಜ್​ ಲವ್​ ಸ್ಟೋರಿ ಬಿಚ್ಚಿಟ್ಟ ಹಂತಕನ ತಾಯಿ!​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಗಳನ್ನು ನೆನೆದು ಬಿಕ್ಕಿಬಿಕ್ಕಿ ಅತ್ತ ತಾಯಿ; ನೇಹಾ ಬಗ್ಗೆ ಗೀತಾ ಹಿರೇಮಠ ಹೇಳಿದ್ದೇನು?

https://newsfirstlive.com/wp-content/uploads/2024/04/Neha_Geetha-Hiremath.jpg

Load More