/newsfirstlive-kannada/media/post_attachments/wp-content/uploads/2024/12/sharmitha-1.jpg)
ಕನ್ನಡ ಕಿರುತೆರೆಯ ಚೆಲುವೆ, ಸಂತೂರ್ ಮಮ್ಮಿ ತುಂಬಾ ಬ್ಯುಸಿ ಶೆಡ್ಯೂನಲ್ಲಿದ್ದಾರೆ. ಧಾರಾವಾಹಿ, ಸಿನಿಮಾ ಅಂತಾ ತಮ್ಮದೇ ಆದ ಲೋಕದಲ್ಲಿ ಮುಳುಗಿ ಹೋಗಿದ್ದ ನಟಿ ಶರ್ಮಿತಾ ಟೆಂಪಲ್ ರನ್ನಲ್ಲಿ ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ: ಅತಿಥಿ ಮಂಜು ಕಾಟಕ್ಕೆ ಕಣ್ಣೀರಿಟ್ಟ ಮ್ಯಾನೇಜರ್ ಭವ್ಯ ಗೌಡ; ರಿವೇಂಜ್ ಇದೆ ಎಂದು ರಜತ್ ವಾರ್ನಿಂಗ್
ಅಪರೂಪಕ್ಕೊಮ್ಮೆ ಶೂಟಿಂಗ್ನಿಂದ ಬಿಡುವು ಮಾಡಿಕೊಂಡು ಆಗಾಗ ಬೇರೆ ಬೇರೆ ಸ್ಥಳಗಳನ್ನು ಎಕ್ಸ್‌ಫ್ಲೋರ್ ಮಾಡ್ತಾ ಇರ್ತಾರೆ. ಇದೀಗ ನಟಿ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಗೀತಾ ಧಾರಾವಾಹಿಯಲ್ಲಿ ವಿಜಯ್ ತಾಯಿಯ ಪಾತ್ರದಲ್ಲಿ ನಟಿಸಿ ಎಲ್ಲರ ಮೆಚ್ಚುಗೆ ಗಳಿಸಿರೋ ನಟಿ ಶರ್ಮಿತಾ. ನಟಿ ಅವರು ರಿಯಲ್ ಲೈಫ್ನಲ್ಲಿ ಸಿಕ್ಕಾಪಟ್ಟೆ ಫ್ಯಾಷನೇಟ್ ಅಂತಾ ಎಲ್ಲರಿಗೂ ಗೊತ್ತೇ ಇದೆ.
ಆಗಾಗ ದಿ ಫ್ಯಾಸೇನಿಸ್ಟಿಕ್ ಲೇಡಿ ವಿಯಾಟ್ನಂ ಪ್ಲೇಸ್ನ ಅವರು ಫ್ರೆಂಡ್ಸ್ ಆ್ಯಂಡ್ ಫ್ಯಾಮಿಲಿ ಜೊತೆ ಎಕ್ಸ್ಪ್ಲೋರ್ ಮಾಡಿದ್ದರು. ಇದೀಗ ಕುಟುಂಬಸ್ಥರ ಜೊತೆಗೆ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದುಕೊಂಡಿದ್ದಾರೆ.
ಇನ್ನೂ, ನಟಿ ಶರ್ಮಿತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕುಟುಂಬಸ್ಥರ ಜೊತೆಗೆ ಕಾಶಿ ವಿಶ್ವನಾಥ ದೇವಾಲಯಕ್ಕೆ ಹೋಗಿದ್ದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅದರ ಜೊತೆಗೆ ಕಾಶಿಯ ಕಿರಿದಾದ ಹಾದಿಗಳನ್ನು ಅನ್ವೇಷಿಸುವುದು, ಅಲ್ಲಿನ ಪ್ರಾಚೀನ ಸಂಪ್ರದಾಯಗಳು ದೈನಂದಿನ ಜೀವನದ ಹುರುಪಿನೊಂದಿಗೆ ಬೆರೆತುಹೋಗುತ್ತವೆ. ಹಿಂದೂ ಧರ್ಮದ ಅತ್ಯಂತ ಪೂಜ್ಯ ಮತ್ತು ಪವಿತ್ರ ಸ್ಥಳಗಳಲ್ಲಿ ಒಂದಾದ ಕಾಶಿ ವಿಶ್ವನಾಥ ದೇವಾಲಯದ ದರ್ಶನವು ಆಧ್ಯಾತ್ಮಿಕವಾಗಿ ಶ್ರೀಮಂತ ಅನುಭವವಾಗಿದೆ.
View this post on Instagram
ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ವಾತಾವರಣವು ದೈವಿಕ ಶಕ್ತಿಯಿಂದ ಆವೇಶಗೊಂಡಿದೆ ಮತ್ತು ಭಗವಾನ್ ವಿಶ್ವನಾಥನ ವಿಗ್ರಹದ ದರ್ಶನವು ಆಳವಾದ ಸಂಪರ್ಕ ಮತ್ತು ಗೌರವದ ಕ್ಷಣವಾಗಿದೆ. ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿಗೆ ಸಾಕ್ಷಿಯಾಗುವುದು ಅಷ್ಟೇ ವಿಸ್ಮಯಕಾರಿಯಾಗಿದೆ. ಸೂರ್ಯಾಸ್ತದ ಸಮಯದಲ್ಲಿ ನಡೆಸಲಾಗುವ ಈ ದೈನಂದಿನ ಆಚರಣೆಯು ಸುಂದರವಾದ ಮತ್ತು ಆತ್ಮವನ್ನು ಪ್ರಚೋದಿಸುವ ಸಮಾರಂಭವಾಗಿದ್ದು, ಪುರೋಹಿತರು ಗಂಗೆಗೆ ಬೆಂಕಿಯೊಂದಿಗೆ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ, ಮಂತ್ರಗಳನ್ನು ಪಠಿಸುತ್ತಾರೆ ಮತ್ತು ಗಂಟೆಗಳನ್ನು ಬಾರಿಸುತ್ತಾರೆ. ಉರಿಯುತ್ತಿರುವ ದೀಪಗಳ ನೋಟ, ಘಂಟೆಗಳ ಸದ್ದು, ಕೀರ್ತನೆಗಳ ಲಯ ಮತ್ತು ಗಂಗೆಯಲ್ಲಿ ಆರತಿ ಜ್ವಾಲೆಯ ಪ್ರತಿಬಿಂಬವು ನಿಜವಾದ ಮಾಂತ್ರಿಕ ಅನುಭವವನ್ನು ಸೃಷ್ಟಿಸುತ್ತದೆ ಅಂತ ಬರೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ