/newsfirstlive-kannada/media/post_attachments/wp-content/uploads/2024/12/GEETA-SHIVARAJ-KUMAR.jpg)
ಗೀತಾ ಶಿವರಾಜ್​ಕುಮಾರ್​ ಸದ್ಯ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುತ್ತಿರು ಶಿವರಾಜ್​ಕುಮಾರ್ ಜೊತೆ ಇದ್ದಾರೆ. ಶಿವಣ್ಣನ ಆರೋಗ್ಯದಲ್ಲಿ ಏರುಪೇರಾಗಿರುವುದು ಗೀತಾ ಶಿವರಾಜ್​ ಕುಮಾರ್​ಗೆ ತಡೆಯಲಾಗದ ಸಂಕಟವನ್ನು ತಂದಿಟ್ಟಿದೆ. ಅದರ ಮೇಲೆ ಬರೆ ಎನ್ನುವಂತೆ ಇಂದು ಅವರ ಮುದ್ದಿನ ಶ್ವಾನ ಅವರನ್ನು ಅಗಲಿದೆ. ಅಗಲಿದ ನೆಚ್ಚಿನ ಶ್ವಾನದ ಕುರಿತು ಗೀತಾ ಶಿವರಾಜ್​ಕುಮಾರ್ ಭಾವನಾತ್ಮಕ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಅಭಿಮಾನಿ ದೇವರುಗಳ ಪೂಜಾ ಫಲ.. ಶಿವಣ್ಣನಿಗೆ ಪುನರ್ಜನ್ಮ! ಏನಾಗಿತ್ತು? ಆಪರೇಷನ್ ಹೇಗಾಯ್ತು?
ನಮ್ಮ ಮನೆಯಲ್ಲಿ ನಾವು ಐದು ಜನರಿಲ್ಲ, ಆರು ಜನರಿದ್ದೇವೆ. ಪ್ರೀತಿಯ ನೀಮೋವನ್ನು ನಾವು ಮನೆಯ ಸದ್ಯಸ್ಯನನ್ನಾಗಿ ಪರಿಗಣಿಸಿದ್ದೆವು. ಶಿವಣ್ಣ ಅಮೆರಿಕಾದಲ್ಲಿ ಚಿಕಿತ್ಸೆ ಪಡೆಯುವಾಗ ನೀಮೋ ದೇವರ ಹತ್ತಿರ ಹೋಗಿದ್ದಾನೆ. ಅವನ ನಿಸ್ವಾರ್ಥ ಪ್ರೀತಿಯನ್ನು ಯಾರಿಂದಲೂ ಕೂಡ ತುಂಬಲು ಸಾಧ್ಯವಿಲ್ಲ. ನಾವು ಅಮೆರಿಕಾಗೆ ಬಂದ ಮೇಲೆ ಅವನು ಹೊರಡಬೇಕು ಎಂದು ನಿರ್ಧರಿಸಿದ್ದ ಎನಿಸುತ್ತೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
/newsfirstlive-kannada/media/post_attachments/wp-content/uploads/2024/12/GEETA-SHIVARAJ-KUMAR-1.jpg)
ಗೀತಾ ಶಿವರಾಜ್​ಕುಮಾರ್ ಬರೆದಿರುವ ಸುದೀರ್ಘ ಪತ್ರದಲ್ಲಿ ನಿಮೋ ಅವರೊಂದಿಗೆ ಹೇಗಿದ್ದ. ಎಷ್ಟು ಹಚ್ಚಿಕೊಂಡಿದ್ದ ಎಂಬುದರ ಸಂಪೂರ್ಣವಾಗಿ ಅದರೊಂದಿಗಿನ ನೆನಪುಗಳಿಗೆ ಅಕ್ಷರರೂಪ ಕೊಟ್ಟಿದ್ದಾರೆ. ಕೊನೆಗೆ ನೀಮೋ ಸದಾ ನಮ್ಮೊಳಗೆ ಇದ್ದಾನೆ, ನನ್ನೊಳಗೆ ಇದ್ದಾನೆ, ಯಾವಾಗಲೂ ಇರ್ತಾನೆ.
ಇದನ್ನೂ ಓದಿ:ತ್ರಿಶಾ ಮಗ ಇನ್ನಿಲ್ಲ.. ಇನ್​​ಸ್ಟಾದಲ್ಲಿ ಭಾವುಕ ಪೋಸ್ಟ್ ಶೇರ್ ಮಾಡಿದ ಸ್ಟಾರ್ ನಟಿ
/newsfirstlive-kannada/media/post_attachments/wp-content/uploads/2024/12/GEETA-SHIVARAJ-KUMAR-2.jpg)
ಅವನು ಹೋಗಿದ್ದನ್ನು ನಾನು ಕಣ್ಣಿಂದ ನೋಡಲಿಲ್ಲ. ನೋಡಿದ್ದರೂ ಕೂಡ ಅದನ್ನು ನಾನು ಒಪ್ಪಿಕೊಳ್ಳುತ್ತಿರಲಿಲ್ಲ ಪ್ರಾಣಿಗಳು ನಮ್ಮನ್ನು ಬಿಟ್ಟು ಹೋಗುವಾಗ ನಮ್ಮ ನೋವನ್ನು ಕೂಡ ಅವು ಜೊತೆಗೆ ತೆಗೆದುಕೊಂಡು ಹೋಗುತ್ತವೆಯಂತೆ. ನನ್ನ ನೀಮೋ ಶಿವಣ್ಣನಿಗೆ ಇದ್ದ ನೋವನ್ನು ಶಾಶ್ವತವಾಗಿ ತೆಗೆದುಕೊಂಡು ಹೋಗಿದ್ದಾನೆ ಎಂದು ಗೀತಾ ಶಿವರಾಜ್​ಕುಮಾರ್ ತುಂಬಾ ಭಾವುಕರಾಗಿ ತಮ್ಮ ಪತ್ರವನ್ನು ಮುಗಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us