/newsfirstlive-kannada/media/post_attachments/wp-content/uploads/2024/11/work.jpg)
ಯಾವುದೇ ಕಂಪನಿ ಅಥವಾ ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ರಜೆ ಅವರ ಹಕ್ಕು. ಖಾಸಗಿ ಅಥವಾ ಸರ್ಕಾರಿ ಕಚೇರಿಗಳಲ್ಲಿ ಸಾಮಾನ್ಯವಾಗಿ ವಾರಕ್ಕೆ ಒಂದು ದಿನ ರಜೆ ಫಿಕ್ಸ್​ ಇರುತ್ತದೆ. ಇದರಿಂದ ಉದ್ಯೋಗಿಗಳ ಕೆಲಸದಲ್ಲಿನ ಕಾರ್ಯಕ್ಷಮತೆ, ಗುಣಮಟ್ಟದ ಕೆಲಸ ಮಾಡಬಹುದು. ವಾರಕ್ಕೆ ಒಂದು ದಿನದ ರಜೆಯಿಂದ ಉದ್ಯೋಗಿಗಳ ಆಯಾಸ, ದಣಿವು ಕಡಿಮೆಯಾಗುತ್ತದೆ.
ಇದನ್ನೂ ಓದಿ: ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.. ಒಂದು ವಾರದೊಳಗೆ ಅಪ್ಲೇ ಮಾಡಿ!
/newsfirstlive-kannada/media/post_attachments/wp-content/uploads/2024/11/leave.jpg)
ಮರುದಿನ ಕೆಲಸಕ್ಕೆ ಹಾಜರಾಗಿ ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂದು ವಾರಕ್ಕೆ ಒಂದು ದಿನ ರಜೆ ನಿಗದಿಪಡಿಸಲಾಗಿದೆ. ವಾರದ ರಜೆ ಅಲ್ಲದೆ, ಉದ್ಯೋಗಿ ತನಗೆ ಅಗತ್ಯವಿದ್ದಾಗ ರಜೆಗಾಗಿ ತನ್ನ ಟೀಂ ಲೀಡರ್​ ಬಳಿ ಮನವಿ ಮಾಡುವುದು ಸಾಮಾನ್ಯ. ಕೆಲವು ಬಾರಿ ರಜೆ ತೆಗೆದುಕೊಳ್ಳುವಾಗ ಕೆಲಸದ ಅವಶ್ಯಕತೆ, ಕಚೇರಿಯಲ್ಲಿ ಕೆಲಸಕ್ಕೆ ತೊಂದರೆಯಾಗದಂತೆ ರಜೆ ಪಡೆಯಬೇಕಾಗಬಹುದು. ರಜೆಯ ಪ್ರಮಾಣವನ್ನು ತನ್ನ ತಂಡದ ಮುಖ್ಯಸ್ಥನೊಂದಿಗೆ ಮೊದಲೇ ಚರ್ಚಿಸಿದ್ರೆ ಇನ್ನೂ ಒಳ್ಳೆಯದು.
/newsfirstlive-kannada/media/post_attachments/wp-content/uploads/2024/10/work.jpg)
ಆದರೆ ಇಲ್ಲಿ, Gen z ಉದ್ಯೋಗಿಯೊಬ್ಬರು ತಮ್ಮ ಬಾಸ್​ಗೆ ರಜೆಗಾಗಿ ಸಲ್ಲಿಸಿದ ಇ-ಮೇಲ್ ವೈರಲ್ ಅಗುತ್ತಿದೆ. ಇಲ್ಲಿ ತನ್ನ ಬಾಸ್​​ಗೆ ಉದ್ಯೋಗಿ ಕೇವಲ ಒನ್​ ಲೈನ್​ನಲ್ಲಿ ರಜೆ ಕೇಳಿದ್ದಾನೆ ಅಲ್ಲಲ್ಲ ರಜೆಯಲ್ಲಿದ್ದೇನೆ ಅಂತಷ್ಟೇ ಹೇಳಿದ್ದಾನೆ. ನಾನು ರಜೆಯಲ್ಲಿದ್ದೇನೆ ಎಂಬ ಸಂಕ್ಷಿಪ್ತ, ಒನ್ ಲೈನ್ ರಜೆಯ ಮನವಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. Gen Z ಉದ್ಯೋಗಿಯೊಬ್ಬರು ರಜೆಯ ಕುರಿತಾಗಿ ತಮ್ಮ ಬಾಸ್‌ಗೆ ತಿಳಿಸುವ ಇಮೇಲ್‌ನ ಸ್ಕ್ರೀನ್‌ಶಾಟ್ ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಹುಟ್ಟುಹಾಕಿದೆ.
/newsfirstlive-kannada/media/post_attachments/wp-content/uploads/2024/09/WORK-STRESS.jpg)
ಸಿದ್ಧಾರ್ಥ್ ಶಾ ಎಂಬುವವರು ತಮ್ಮ ಸಿಬ್ಬಂದಿ ರಜೆಗಾಗಿ ಮನವಿ ಸಲ್ಲಿಸಿದ್ದ ಇ-ಮೇಲ್ ಸ್ಕ್ರೀನ್​ ಶಾಟ್ ಅನ್ನು ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಇಮೇಲ್‌ನಲ್ಲಿ, ಉದ್ಯೋಗಿ "ಹಾಯ್ ಸಿದ್ಧಾರ್ಥ್, ನಾನು 2024ರ ನವೆಂಬರ್ 8ರಂದು ರಜೆಯಲ್ಲಿದ್ದೇನೆ. ಬೈ’ ಅಂತ ಇ-ಮೇಲ್ ಮಾಡಿದ್ದಾನೆ. ಇದಕ್ಕೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸಿದ್ದು , ಉದ್ಯೋಗಿಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಇದು ಶಿಷ್ಟಾಚಾರವಲ್ಲ ಅಂತ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದು ಅಸಂಬದ್ಧ ಎಂದರೆ, ಇನ್ನೂ ಕೆಲವರು ಉದ್ಯೋಗಿಗಳು ವೃತ್ತಿಪರತೆಯನ್ನು ಕಾಪಾಡಿಕೊಳ್ಳಬೇಕು. ರಜೆಗೆ ಅನುಮೋದನೆ ಪಡೆಯಬೇಕು ಅಂತ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ‘ಈಗಿನ ಪೀಳಿಗೆಯ ಅಶಿಸ್ತಿನ ಸಂಸ್ಕೃತಿ‘ ಅಂತ ಕಾಮೆಂಟ್ ಮಾಡಿದ್ದಾರೆ. ಒಬ್ಬ ಎಕ್ಸ್​ ಬಳಕೆದಾರರು ‘ರಜೆ ಹೀಗೆಯೇ ಕೇಳಬೇಕು ಏಕೆ ಬೇಡಿಕೊಳ್ಳುತ್ತೀರಾ ಅಂತ ಕಾಮೆಂಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us