ಮದುವೆಗೂ ಮುನ್ನ ಜೆನೆಟಿಕ್​ ಪರೀಕ್ಷೆ ಕಡ್ಡಾಯ.. ಆರೋಗ್ಯ ಇಲಾಖೆ ನಿರ್ಧಾರ

author-image
AS Harshith
Updated On
ಮದುವೆಗೂ ಮುನ್ನ ಜೆನೆಟಿಕ್​ ಪರೀಕ್ಷೆ ಕಡ್ಡಾಯ.. ಆರೋಗ್ಯ ಇಲಾಖೆ ನಿರ್ಧಾರ
Advertisment
  • ಮದುವೆ ಮುನ್ನ ಈ ಪರೀಕ್ಷೆ ಮಾಡಲೇಬೇಕು
  • ಅಕ್ಟೋಬರ್​ 1ರಿಂದ ಪರೀಕ್ಷೆಯಲ್ಲಿ ಭಾಗವಹಿಸಬೇಕು
  • 14 ದಿನಗಳಲ್ಲಿ ನಾಗರಿಕರಿಗೆ ಸಿಗಲಿದೆ ಫಲಿತಾಂಶ

ಮದುವೆಗೂ ಮುನ್ನ ಅನುವಂಶಿಕ ಪರೀಕ್ಷೆ ಮಾಡಬೇಕು ಎಂಬ ಕಾನೂನನ್ನು ಅರಬ್​ ಎಮಿರೇಟ್ ಆರೋಗ್ಯ ಇಲಾಖೆಯು ಕಡ್ಡಾಯಗೊಳಿಸಿದೆ. ಅಬುಧಾಬಿಯಲ್ಲಿ ಮದುವೆಯಾಗುವ ನಾಗರಿಕರು ಅಕ್ಟೋಬರ್​ 1ರಿಂದ ಕಡ್ಡಾಯವಾಗಿ ಪರೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದೆ.

ಅಬುಧಾಬಿ, ಅಲ್​​ ದಫ್ರಾ ಮತ್ತು ಅಲ್​​ ಐನ್​​ನ 22 ಪ್ರಾಥಮಿಕ ಆರೈಕೆ ಕೇಂದ್ರಗಳಲ್ಲಿ ಈ ಸೇವೆಯನ್ನು ನೀಡಲಾಗುವುದಾಗಿ ತಿಳಿಸಿದೆ. ಜೆನೆಟಿಕ್​ ಪರೀಕ್ಷೆಯ ಫಲಿತಾಂಶವನ್ನು 14 ದಿನಗಳಲ್ಲಿ ನಾಗರಿಕರಿಗೆ ನೀಡುವುದಾಗಿ ಹೇಳಿದೆ.

ಇದನ್ನೂ ಓದಿ: ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ದಯವಿಟ್ಟು ಬಿಟ್ಟುಬಿಡಿ -ನಾಗಮಂಗಲದಲ್ಲಿ ತಾಯಂದಿರು ಗೋಳಾಟ

ವಿವಾಹದ ಬಳಿಕ ದಂಪತಿಗಳಿಂದ ಮಕ್ಕಳಿಗೆ ಹರಡಬಹುದಾದ ಮತ್ತು ತಡೆಗಟ್ಟಬಹುದಾಗ ಅನುವಂಶಿಕ ಕಾಯಿಲೆಗಳನ್ನು ಗುರುತಿಸಲು ಮತ್ತು ತಡೆಗಟ್ಟಲು ಜೆನೆಟಿಕ್​ ಟೆಸ್ಟ್​ ಮಾಡಲು ಮುಂದಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಹಾವು ಕಚ್ಚಿದ್ರೆ ದೇವಸ್ಥಾನದಲ್ಲಿ ಗಂಟೆ ಬಾರಿಸಿದ ಜನರು.. ಇಬ್ಬರ ಸಾವು; ಬೆಚ್ಚಿ ಬೀಳಿಸಿದ ದುರಂತ!

ಸಾಮಾನ್ಯವಾಗಿ ಅನುವಂಶಿಕ ಅಸ್ವಸ್ಥೆಗಳಿಂದ ಮಕ್ಕಳಲ್ಲಿ ದೃಷ್ಟಿ, ರಕ್ತ ಹೆಪ್ಪುಗಟ್ಟುವಿಕೆ, ಬೆಳವಣಿಗೆ ವಿಳಂಬ, ಅಂಗಾಂಗ ವೈಫಲ್ಯ, ಹಾರ್ಮೋನ್​ ಅಸಮತೋಲನ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆರೋಗ್ಯ ಇಲಾಖೆಯು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪರೀಕ್ಷೆಗೆ ಮುಂದಾಗಿದೆ.

ಅನುವಂಶಿಕ ಎಂದರೇನು?

ಅನುವಂಶಿಕ ಕಾಯಿಲೆಯು ವಂಶವಾಹಿಗಳು. ಇವು ಕ್ರೋಮೋಸೋಮ್​​ಗಳಲ್ಲಿನ ವ್ಯತ್ಯಾಸದಿಂದ ಉಂಟಾಗುವ ಸಮಸ್ಯೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment