ಮದುವೆ ಮುನ್ನ ಈ ಪರೀಕ್ಷೆ ಮಾಡಲೇಬೇಕು
ಅಕ್ಟೋಬರ್ 1ರಿಂದ ಪರೀಕ್ಷೆಯಲ್ಲಿ ಭಾಗವಹಿಸಬೇಕು
14 ದಿನಗಳಲ್ಲಿ ನಾಗರಿಕರಿಗೆ ಸಿಗಲಿದೆ ಫಲಿತಾಂಶ
ಮದುವೆಗೂ ಮುನ್ನ ಅನುವಂಶಿಕ ಪರೀಕ್ಷೆ ಮಾಡಬೇಕು ಎಂಬ ಕಾನೂನನ್ನು ಅರಬ್ ಎಮಿರೇಟ್ ಆರೋಗ್ಯ ಇಲಾಖೆಯು ಕಡ್ಡಾಯಗೊಳಿಸಿದೆ. ಅಬುಧಾಬಿಯಲ್ಲಿ ಮದುವೆಯಾಗುವ ನಾಗರಿಕರು ಅಕ್ಟೋಬರ್ 1ರಿಂದ ಕಡ್ಡಾಯವಾಗಿ ಪರೀಕ್ಷೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದೆ.
ಅಬುಧಾಬಿ, ಅಲ್ ದಫ್ರಾ ಮತ್ತು ಅಲ್ ಐನ್ನ 22 ಪ್ರಾಥಮಿಕ ಆರೈಕೆ ಕೇಂದ್ರಗಳಲ್ಲಿ ಈ ಸೇವೆಯನ್ನು ನೀಡಲಾಗುವುದಾಗಿ ತಿಳಿಸಿದೆ. ಜೆನೆಟಿಕ್ ಪರೀಕ್ಷೆಯ ಫಲಿತಾಂಶವನ್ನು 14 ದಿನಗಳಲ್ಲಿ ನಾಗರಿಕರಿಗೆ ನೀಡುವುದಾಗಿ ಹೇಳಿದೆ.
ಇದನ್ನೂ ಓದಿ: ನಮ್ಮ ಮಕ್ಕಳು ತಪ್ಪು ಮಾಡಿಲ್ಲ, ದಯವಿಟ್ಟು ಬಿಟ್ಟುಬಿಡಿ -ನಾಗಮಂಗಲದಲ್ಲಿ ತಾಯಂದಿರು ಗೋಳಾಟ
ವಿವಾಹದ ಬಳಿಕ ದಂಪತಿಗಳಿಂದ ಮಕ್ಕಳಿಗೆ ಹರಡಬಹುದಾದ ಮತ್ತು ತಡೆಗಟ್ಟಬಹುದಾಗ ಅನುವಂಶಿಕ ಕಾಯಿಲೆಗಳನ್ನು ಗುರುತಿಸಲು ಮತ್ತು ತಡೆಗಟ್ಟಲು ಜೆನೆಟಿಕ್ ಟೆಸ್ಟ್ ಮಾಡಲು ಮುಂದಾಗಿದೆ.
ಇದನ್ನೂ ಓದಿ: ಮನೆಯಲ್ಲಿ ಹಾವು ಕಚ್ಚಿದ್ರೆ ದೇವಸ್ಥಾನದಲ್ಲಿ ಗಂಟೆ ಬಾರಿಸಿದ ಜನರು.. ಇಬ್ಬರ ಸಾವು; ಬೆಚ್ಚಿ ಬೀಳಿಸಿದ ದುರಂತ!
ಸಾಮಾನ್ಯವಾಗಿ ಅನುವಂಶಿಕ ಅಸ್ವಸ್ಥೆಗಳಿಂದ ಮಕ್ಕಳಲ್ಲಿ ದೃಷ್ಟಿ, ರಕ್ತ ಹೆಪ್ಪುಗಟ್ಟುವಿಕೆ, ಬೆಳವಣಿಗೆ ವಿಳಂಬ, ಅಂಗಾಂಗ ವೈಫಲ್ಯ, ಹಾರ್ಮೋನ್ ಅಸಮತೋಲನ ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಆರೋಗ್ಯ ಇಲಾಖೆಯು ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಪರೀಕ್ಷೆಗೆ ಮುಂದಾಗಿದೆ.
ಅನುವಂಶಿಕ ಎಂದರೇನು?
ಅನುವಂಶಿಕ ಕಾಯಿಲೆಯು ವಂಶವಾಹಿಗಳು. ಇವು ಕ್ರೋಮೋಸೋಮ್ಗಳಲ್ಲಿನ ವ್ಯತ್ಯಾಸದಿಂದ ಉಂಟಾಗುವ ಸಮಸ್ಯೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ