ಹುಲಿಯಿಂದ ಮಾಲೀಕನ ಕಾಪಾಡಿದ ಜರ್ಮನ್ ಶೆಪರ್ಡ್​ ನಾಯಿ.. ಆದ್ರೆ ಆ ಮೇಲೆ ಆಗಿದ್ದೆ ದುಃಖಕರ

author-image
Bheemappa
Updated On
ಹುಲಿಯಿಂದ ಮಾಲೀಕನ ಕಾಪಾಡಿದ ಜರ್ಮನ್ ಶೆಪರ್ಡ್​ ನಾಯಿ.. ಆದ್ರೆ ಆ ಮೇಲೆ ಆಗಿದ್ದೆ ದುಃಖಕರ
Advertisment
  • ಪ್ರಾಣಪಣಕ್ಕಿಟ್ಟು ಹುಲಿ ಜೊತೆ ಹೋರಾಡಿದ ಜರ್ಮನ್ ಶೆಪರ್ಡ್
  • ವಾಕಿಂಗ್​ಗೆ ಜರ್ಮನ್ ಶೆಪರ್ಡ್ ಕರೆದುಕೊಂಡು ಹೋಗಿದ್ದರು
  • ಬೆಳಗ್ಗೆ ಎದ್ದು ವಾಕಿಂಗ್ ಮಾಡುವಾಗ ಅಟ್ಯಾಕ್ ಮಾಡಿದ ಹುಲಿ

ಭೋಪಾಲ್: ನಾಯಿ ಎಂದರೆ ಎಲ್ಲರಿಗೂ ಪ್ರೀತಿ. ಒಂದು ತುತ್ತು ಅನ್ನ ಹಾಕಿದ್ರೆ ಕೊನೆವರೆಗೂ ವಿಶ್ವಾಸದಿಂದ ಇರುತ್ತದೆ ಎನ್ನುವುದು ಮತ್ತೆ ಮತ್ತೆ ಸಾಭೀತು ಆಗುತ್ತಲೇ ಇರುತ್ತದೆ. ಸದ್ಯ ಇಲ್ಲೊಂದು ಘಟನೆಯಲ್ಲಿ ತನ್ನ ಮಾಲೀಕನ ಮೇಲೆ ಅಟ್ಯಾಕ್ ಮಾಡಲು ಬಂದಿದ್ದ ಹುಲಿ ಜೊತೆ ಕಾದಾಡಿ ಜರ್ಮನ್ ಶೆಪರ್ಡ್​ ನಾಯಿಯೊಂದು ಜೀವ ಕಳೆದುಕೊಂಡಿದೆ.

ಮಧ್ಯಪ್ರದೇಶದ ಉಮಾರಿಯಾ ಜಿಲ್ಲೆಯ ಭರ್ಹುತ್ ಗ್ರಾಮದ ನಿವಾಸಿ ಶಿವಂ ಬಾರ್ಗಯ್ಯ ಎನ್ನುವರು ಎಂದಿನಂತೆ ಬೆಳಗ್ಗೆ ಎದ್ದು ರಸ್ತೆಯಲ್ಲಿ ವಾಕಿಂಗ್ ಹೋಗುತ್ತಿದ್ದರು. ವಾಕಿಂಗ್ ಹೋಗಬೇಕಾದರೆ ಅವರು ಯಾವಗಲೂ ತಮ್ಮ ಮುದ್ದಿನ ಜರ್ಮನ್ ಶೆಫರ್ಡ್‌ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಅದರಂತೆ ಘಟನೆಯ ದಿನವೂ ಕರೆದುಕೊಂಡು ಹೋಗಿದ್ದರು.

ಇದನ್ನೂ ಓದಿ:ಡಿ.ಕೆ ಶಿವಕುಮಾರ್ ನಡೆ- ನುಡಿಯಿಂದ ರಾಜಕೀಯದಲ್ಲಿ ಸಂಚಲನ.. ಕಾಂಗ್ರೆಸ್​ ನಾಯಕರು ಹೇಳುವುದೇನು?

publive-image

ಮಾಲೀಕ ರಸ್ತೆಯಲ್ಲಿ ಹೋಗಬೇಕಾದರೆ ಹುಲಿ ಕಾಣಿಸಿಕೊಂಡಿದೆ. ಅದು ಮಾಲೀಕನ ಮೇಲೆ ಅಟ್ಯಾಕ್ ಮಾಡಲು ಮುಂದಾಗುತ್ತಿರುವಾಗ ಜರ್ಮನ್ ಶೆಫರ್ಡ್‌ ಮೊದಲೇ ನೋಡಿ ಬೊಗಳಲು ಪ್ರಾರಂಭಿಸಿ, ಹುಲಿ ಮೇಲೆ ಎರಗಿದೆ. ಈ ವೇಳೆ ಹುಲಿ, ನಾಯಿಯ ಮೇಲೆ ಪ್ರತಿ ದಾಳಿ ಮಾಡಿ ಬಾಯಲ್ಲಿ ಕಚ್ಚಿಕೊಂಡು ಕಾಡಿನ ಕಡೆಗೆ ಹೋಗುತ್ತಿತ್ತು. ಆದರೆ ನಾಯಿ ತನ್ನ ಪಟ್ಟು ಸಡಿಲಿಸದೇ ಹುಲಿ ಜೊತೆ ದಿಟ್ಟವಾಗಿ ಹೋರಾಡಿದೆ.

ಹುಲಿ ಬಾಯಿಂದ ಹೇಗೋ ನಾಯಿ ತನ್ನ ಜೀವ ಉಳಿಸಿಕೊಂಡಿದೆ. ಆದರೆ ಗಂಭೀರವಾದ ಗಾಯಗಳು ಆಗಿದ್ದರಿಂದ ನಾಯಿ ನಿತ್ರಾಣಕ್ಕೆ ಒಳಗಾಗಿತ್ತು. ತಕ್ಷಣ ಮಾಲೀಕ, ಜಿಲ್ಲಾಸ್ಪತ್ರೆಯ ಪಶುವೈದ್ಯರ ಬಳಿಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆಗೆ ಸ್ಪಂದಿಸದ ನಾಯಿ ಕೊನೆಗೆ ಜೀವ ಕಳೆದುಕೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment