/newsfirstlive-kannada/media/post_attachments/wp-content/uploads/2024/06/Noel-Robinson.jpg)
ಜರ್ಮನಿ ಕಲಾವಿದ ನಿಯೋಲ್​ ರಾಬಿನ್​ ಸನ್​ ಬೆಂಗಳೂರಿನತ್ತ ಕಾಲಿಟ್ಟಿದ್ದಾರೆ. ಸಿಲಿಕಾನ್​ ಸಿಟಿಯಲ್ಲಿ ಅಡ್ಡಾವುದರ ಜೊತೆಗೆ ಡ್ಯಾನ್ಸ್​ ವಿಡಿಯೋ ಮಾಡುತ್ತಾ ತಮಾಷೆ ಮಾಡುತ್ತಿರುತ್ತಾರೆ. ಅದರಂತೆಯೇ ವಿಧಾನ ಸೌಧದ ಮುಂದೆ ಆಟೋ ಚಾಲಕ ಎದುರು ನಿಯೋಲ್​ ತಮಾಷೆ ಮಾಡಲು ಹೋಗಿದ್ದಾರೆ. ನೇರವಾಗಿ ಆಟೋ ನುಗ್ಗುಲು ಯತ್ನಿಸಿದ್ದಾರೆ. ಇದನ್ನು ಕಂಡು ಆಟೋ ಚಾಲಕ ಭಯಬಿದ್ದಿದ್ದಾರೆ.
ಇದನ್ನೂ ಓದಿ: ಒಡಲು ತುಂಬಿಸುತ್ತಿದ್ದಾಳೆ ಕಾವೇರಿ.. KRS ಡ್ಯಾಂನ ಇಂದಿನ ನೀರಿನ ಮಟ್ಟ ಎಷ್ಟಿದೆ?
ಟಿಕ್​ಟಾಕ್​ ಮೂಲಕ ಜನಪ್ರಿಯತೆ ಪಡೆದ ನಿಯೋಲ್​ ರಾಬಿನ್​ಸನ್​ ಇನ್​ಸ್ಟಾಗ್ರಾಂನಲ್ಲಿ ರೀಲ್ಸ್​ ಬಿಡುತ್ತಿರುತ್ತಾರೆ. ಅದರಂತೆಯೇ ವಿಧಾನ ಸೌಧದ ಬಳಿ ಬಂದ ಅವರು ಗುಂಟುರು ಖಾರಂ ಸಿನಿಮಾದ ‘ಕುರ್ಚಿ ಮಾಡತ ಪೆಟ್ಟಿ’ ಹಾಡಿಗೆ ಡ್ಯಾನ್ಸ್​ ಮಾಡಿದ್ದಾರೆ. ಅಲ್ಲೇ ಇದ್ದ ಆಟೋ ರಿಕ್ಷಾದ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಇದನ್ನು ಕಂಡು ಆಟೋ ಚಾಲಕ ತಡೆದಿದ್ದು, ಬಳಿಕ ಅವರೊಂದಿಗೆ ಹೆಜ್ಜೆ ಹಾಕಿದ್ದಾರೆ.
View this post on Instagram
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ನಿಯೋಲ್​​ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಮಜಾ ಮಾಡುತ್ತಿದ್ದೇನೆ ಎಂದು ಬರೆದುಕೊಳ್ಳುವ ಮೂಲಕ ಇನ್​​ಸ್ಟಾದಲ್ಲಿ ವಿಡಿಯೋ ಶೇರ್​ ಮಾಡಿದ್ದಾರೆ. ಸದ್ಯ ನಿಯೋಲ್​ ಹಂಚಿಕೊಂಡ ವಿಡಿಯೋ 4 ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us