newsfirstkannada.com

ಮೋದಿಯನ್ನು ಭೇಟಿ ಮಾಡಿದ ಜರ್ಮನ್ ಗಾಯಕಿ.. ಕಸ್ಸಂಡ್ರಾ ಮೇ ಸ್ಪಿಟ್‌ಮನ್ ಹಾಡಿಗೆ ತಾಳ ಹಾಕಿದ್ರು ಪ್ರಧಾನಿ

Share :

Published February 28, 2024 at 7:10am

    ವಿಶೇಷ ಭಕ್ತಿಗೀತೆಗಳನ್ನು ಹಾಡಿದ ಜರ್ಮನ್​ ಗಾಯಕಿ

    ತಾಯಿಯ ಜೊತೆಗೆ ಗಾಯಕಿ ಪ್ರಧಾನಿ ಮೋದಿಯನ್ನು ಭೇಟಿ

    ಭಾರತೀಯರಿಗೆ ಹತ್ತಿರವಾದ ಗಾಯಕಿ ಕಸ್ಸಂಡ್ರಾ ಮೇ ಸ್ಪಿಟ್‌ಮನ್

ಪ್ರಧಾನಿ ನರೇಂದ್ರ ಮೋದಿಯವರು ಜರ್ಮನ್ ಗಾಯಕಿ ಕಸ್ಸಂಡ್ರಾ ಮೇ ಸ್ಪಿಟ್‌ಮನ್ ಅವರನ್ನು ಭೇಟಿಯಾಗಿದ್ದಾರೆ. ತಮಿಳುನಾಡಿನ ಪಲ್ಲದಮ್​ನಲ್ಲಿ ಗಾಯಕಿ ಜೊತೆಗೆ ಕುಳಿತುಕೊಂಡು ಮಾತನಾಡಿದ್ದಾರೆ. ಈ ವೇಳೆ ಕಸ್ಸಂಡ್ರಾ ತಾಯಿ ಸ್ಪಿಟ್‌ಮನ್ ಕೂಡ ಜೊತೆಯಲ್ಲಿದ್ದರು.

ಕಸ್ಸಂಡ್ರಾ ಅವರು ಅನೇಕ ಭಾರತೀಯ ಭಾಷೆಗಳಲ್ಲಿ ವಿಶೇಷ ಭಕ್ತಿಗೀತೆಗಳನ್ನು ಹಾಡುತ್ತಾರೆ. ಪ್ರಧಾನಿ ತಮ್ಮ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮವೊಂದರಲ್ಲಿ ಈ ಗಾಯಕಿಯ ಬಗ್ಗೆ ಪ್ರಸ್ತಾಪಿಸಿದ್ದರು. ನಿನ್ನೆ ಅವರು ಪ್ರಧಾನಿ ಮೋದಿಯವರ ಮುಂದೆ ‘ಅಚ್ಯುತಂ ಕೇಶವಂ’ ಮತ್ತು ತಮಿಳು ಹಾಡನ್ನು ಹಾಡಿದ್ದಾರೆ. ಪ್ರಧಾನಿ ಕೂಡ ಇವರ ಹಾಡು ಕೇಳುತ್ತಾ ಟೇಬಲ್​ಗೆ ಬಡಿಯುತ್ತಾ ಹಾಡನ್ನು ಎಂಜಾಯ್​ ಮಾಡಿದ್ದಾರೆ.

ಮೋದಿಯವರು ಜರ್ಮನ್ ಗಾಯಕಿ ಕಸ್ಸಂಡ್ರಾ ಮೇ ಸ್ಪಿಟ್‌ಮನ್ ಅವರನ್ನು ಭೇಟಿ ಮಾಡಿದ ಸಂಗತಿಯನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗುತ್ತಿದೆ. ಅನೇಕರು ಈ ವಿಡಿಯೋ ನೋಡಿ ಕಾಮೆಂಟ್​ ಬರೆಯುತ್ತಿದ್ದಾರೆ.

ಇನ್ನು ಈ ಜರ್ಮನ್​ ಮೂಲದ ಸಿಂಗರ್​ಗೆ ಭಾರತದಲ್ಲಿ ಅನೇಕ ಫ್ಯಾನ್ಸ್​ ಇದ್ದಾರೆ. ಈ ಗಾಯಕಿ ಕನ್ನಡದ ‘ಕಾಂತಾರ’ ಸಿನಿಮಾದ ಹಾಡು ಸೇರಿ ಭಾರತದ ವಿವಿಧ ಭಾಷೆಗಳಲ್ಲಿ ಹಾಡಿದ್ದಾರೆ. ಇತ್ತೀಚೆಗೆ ರಾಮಮಂದಿರ ಉದ್ಘಾಟನೆ ಸಮಯದಲ್ಲಿ ‘ರಾಮ್​ ಆಯೆಂಗೆ’ ಹಾಡು ಹಾಡಿ ಮತ್ತಷ್ಟು ಭಾರತೀಯರ ಹತ್ತಿರವಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿಯನ್ನು ಭೇಟಿ ಮಾಡಿದ ಜರ್ಮನ್ ಗಾಯಕಿ.. ಕಸ್ಸಂಡ್ರಾ ಮೇ ಸ್ಪಿಟ್‌ಮನ್ ಹಾಡಿಗೆ ತಾಳ ಹಾಕಿದ್ರು ಪ್ರಧಾನಿ

https://newsfirstlive.com/wp-content/uploads/2024/02/Modi-1.jpg

Load More