newsfirstkannada.com

ಗೇಮಿಂಗ್ ಆ್ಯಪ್‌ನಲ್ಲಿ ಮಕ್ಕಳ ಬ್ರೇನ್ ವಾಶ್; ಕೊನೆಗೂ ಸಿಕ್ಕಿ ಬಿದ್ದ ಮತಾಂತರದ ಮಾಸ್ಟರ್ ಮೈಂಡ್

Share :

Published June 12, 2023 at 8:54am

    ಮತಾಂತರದ ಮಾಸ್ಟರ್ ಮೈಂಡ್ ಪೊಲೀಸರ ವಶ

    ಗೇಮಿಂಗ್ ಆ್ಯಪ್‌ ಆಡುತ್ತಿದ್ದ ಮಕ್ಕಳ ಬ್ರೇನ್ ವಾಶ್

    ಮನೆಯಲ್ಲಿ ನಮಾಜ್ ಮಾಡಲು ಮಕ್ಕಳಿಗೆ ಒತ್ತಡ

ಥಾಣೆ: ಪುಟಾಣಿ ಮಕ್ಕಳ ಕೈಯಲ್ಲಿ ಮೊಬೈಲ್ ಇದ್ರೆ ಏನೋ ಆಟ ಆಡಿಕೊಂಡು ಇರ್ಲಿ ಅಂತಾ ಪೋಷಕರು ಸುಮ್ಮನಿರ್ತಾರೆ. ಅದೇ ಮಕ್ಕಳು ಗೇಮಿಂಗ್ ಆ್ಯಪ್‌ ಗೀಳಿಗೆ ಬಿದ್ರೆ ಅಪಾಯ. ಹೀಗೆ ಗೇಮಿಂಗ್ ಆ್ಯಪ್‌ ಆಡುತ್ತಿದ್ದ ಮಕ್ಕಳ ಬ್ರೇನ್ ವಾಶ್ ಮಾಡಿ ಮತಾಂತರ ಮಾಡುತ್ತಿದ್ದ ಪ್ರಕರಣ ಇತ್ತೀಚಿಗೆ ದೇಶಾದ್ಯಂತ ಸುದ್ದಿಯಾಗಿತ್ತು. ಇವತ್ತು ಆ ಮತಾಂತರ ಪ್ರಕರಣದ ಮಾಸ್ಟರ್‌ ಮೈಂಡ್‌ ಸಿಕ್ಕಿಬಿದ್ದಿದ್ದು, ಗಾಜಿಯಾಬಾದ್‌ ಮಕ್ಕಳು ಪೋಷಕರು ನಿಜಕ್ಕೂ ನಿಟ್ಟುಸಿರು ಬಿಟ್ಟಿದ್ದಾರೆ.

ಇತ್ತೀಚಿಗೆ ಉತ್ತರಪ್ರದೇಶ ರಾಜ್ಯದ ಗಾಜಿಯಾಬಾದ್‌ನ ಪೋಷಕರು ಅಕ್ಷರಶಃ ಕಂಗಾಲಾಗಿದ್ದರು. ಯಾಕಂದ್ರೆ, ಮಕ್ಕಳನ್ನು ಗೆಲ್ಲಿಸುವುದಾಗಿ ಹೇಳ್ತಿದ್ದ ಗೇಮಿಂಗ್ ಆ್ಯಪ್‌ಗಳು ಮತಾಂತರಕ್ಕೆ ಮುಂದಾಗಿದ್ದವು. ಗೇಮಿಂಗ್ ಆ್ಯಪ್‌ನ ಖದೀಮರು ಕುರಾನ್ ಪಠಣ ಮಾಡಿದರೆ ಗೇಮಿಂಗ್ ಆ್ಯಪ್ ಗೇಮ್‌ನಲ್ಲಿ ಗೆಲ್ಲುವಂತೆ ನೋಡಿಕೊಂಡಿದ್ದರು. ಮನೆಯಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡುವಂತೆ ಮಕ್ಕಳ ಮೇಲೆ ಒತ್ತಡ ಏರಲಾಗಿತ್ತು.

ಮಕ್ಕಳ ಕೈಯಲ್ಲಿದ್ದ ಮೊಬೈಲ್‌ಗೆ ವಾಟ್ಸಾಪ್‌ನಲ್ಲಿ ಜಿಮ್‌ ಟೈಮ್ ಅನ್ನೋ ಕೋಡ್‌ ವರ್ಡ್‌ ಮೆಸೇಜ್ ಬರುತ್ತಾ ಇತ್ತು. ಜಿಮ್ ಟೈಮ್ ಅಂದ್ರೆ ನಮಾಜ್ ಸಮಯ. ಬೇರೆ, ಬೇರೆ ಧರ್ಮದ ಮಕ್ಕಳು ಮನೆಯಲ್ಲಿ ಪೋಷಕರ ಎದುರು ನಮಾಜ್ ಮಾಡುತ್ತಿದ್ದರು. ಇದನ್ನು ನೋಡಿ ಆತಂಕಗೊಂಡ ಪೋಷಕರು ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದರು.

ಎಳೆಯ ಮಕ್ಕಳ ಬ್ರೇನ್ ವಾಶ್‌ ಮಾಡಿ ಮತಾಂತರ ಮಾಡುತ್ತಿದ್ದ ಈ ಪ್ರಕರಣ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು. ಕಳೆದ ವಾರವಷ್ಟೇ ಉತ್ತರಪ್ರದೇಶ ಪೊಲೀಸರು ಮೌಲ್ವಿ ಸೇರಿದಂತೆ ಇಬ್ಬರು ಆರೋಪಿಗಲನ್ನು ಬಂಧಿಸಿದ್ದರು. ಇದೀಗ ಮಹಾರಾಷ್ಟ್ರದ ಮುಂಬ್ರಾದಲ್ಲಿ ಪ್ರಮುಖ ಆರೋಪಿಯನ್ನು ಪೋಲಿಸರು ಪತ್ತೆ ಮಾಡಿದ್ದಾರೆ.

ಮತಾಂತರದ ಮಾಸ್ಟರ್ ಮೈಂಡ್ ಶಹನವಾಜ್ ಖಾನ್ ಅಲಿಯಾಸ್ ಬಡ್ಡೋ ಎಂಬುವವರನ್ನ ಬಂಧಿಸಲಾಗಿದೆ. ಶಹನವಾಜ್ ಖಾನ್ ಮಹಾರಾಷ್ಟ್ರದ ಮುಂಬ್ರಾ ನಿವಾಸಿ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿದ್ದ ಈತನನ್ನ ಗಾಜಿಯಾಬಾದ್‌ ಪೊಲೀಸರು ಸಾಕಷ್ಟು ಹುಡುಕಾಟ ನಡೆಸುತ್ತಿದ್ದರು. ಈ ಗೇಮಿಂಗ್ ಆ್ಯಪ್ ಮೂಲಕ ಮಕ್ಕಳನ್ನು ಮತಾಂತರಕ್ಕೆ ಉತ್ತೇಜನ ನೀಡುತ್ತಿದ್ದ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ಈತನ ವಿಚಾರಣೆಯ ಬಳಿಕ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗುವ ಸಾಧ್ಯತೆಯಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಗೇಮಿಂಗ್ ಆ್ಯಪ್‌ನಲ್ಲಿ ಮಕ್ಕಳ ಬ್ರೇನ್ ವಾಶ್; ಕೊನೆಗೂ ಸಿಕ್ಕಿ ಬಿದ್ದ ಮತಾಂತರದ ಮಾಸ್ಟರ್ ಮೈಂಡ್

https://newsfirstlive.com/wp-content/uploads/2023/06/Gamming-APP.jpg

Load More