/newsfirstlive-kannada/media/post_attachments/wp-content/uploads/2025/06/YASH-DAYAL-2.jpg)
ಆರ್ಸಿಬಿ ಸ್ಟಾರ್ ಯಶ್ ದಯಾಳ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಮಾಡಿದ ಆರೋಪ ಬೆನ್ನಲ್ಲೇ, ಇವತ್ತು ಮಹತ್ವದ ಬೆಳವಣಿಗೆಗಳು ನಡೆದಿವೆ.
ಇವತ್ತು ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಬೆನ್ನಲ್ಲೇ ಕ್ರಮ ತೆಗೆದುಕೊಂಡಿರುವ ಪೊಲೀಸರು ಯಶ್ ದಯಾಳ್ಗೆ ತನಿಕೆ ಬಂದು ಹೇಳಿಕೆ ನೀಡುವಂತೆ ನೋಟಿಸ್ ನೀಡಿದ್ದಾರೆ. ತನಿಖೆಗೆ ಸಹಕಾರ ನೀಡಬೇಕು. ಯಾವುದೇ ವಿಳಂಬ ಆಗಬಾರದು ಎಂದು ಪೊಲೀಸರು ತಮ್ಮ ನೋಟಿಸ್ನಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಮಹಿಳೆ ಆರೋಪ ಏನು..?
2019ರಿಂದ ಸೋಶಿಯಲ್ ಮೀಡಿಯಾ ಮೂಲಕ ದಯಾಳ್ ಜೊತೆ ನಾನು ಮಾತನಾಡಲು ಶುರುಮಾಡಿದೆ. ನಂತರ ಇನ್ಸ್ಟಾಗ್ರಾಮ್ನಲ್ಲಿ ನಮ್ಮಿಬ್ಬರ ಮಾತುಕತೆ ಜೋರಾಗಿತ್ತು. ಯಶ್ ನಮ್ಮ ಮದುವೆ ಬಗ್ಗೆ ಮಾತನಾಡಿದರು. ನಾನು ಅನೇಕ ನಗರಗಳಿಗೆ ಯಶ್ ಜೊತೆ ಸುತ್ತಾಟ ನಡೆಸಿದ್ದೇನೆ.
ಇದನ್ನೂ ಓದಿ: ಮಧ್ಯರಾತ್ರಿ 2 ಗಂಟೆ! 15 ಲಕ್ಷದ Hayabusa ಬೈಕ್ಗಳು ತುಂಬಿದ್ದ ಟ್ರಕ್ ಅಪಹರಣ.. ಕೊನೆಯಲ್ಲಿ ಕೇಸ್ಗೆ ರೋಚಕ ಟ್ವಿಸ್ಟ್..!
ಕಳೆದ ಐದು ವರ್ಷಗಳಲ್ಲಿ ನಮ್ಮಿಬ್ಬರ ಸಂಬಂಧ ತುಂಬಾ ಬದಲಾಗಿದೆ. ಕೆಲವು ದಿನಗಳ ಹಿಂದಿನಿಂದ ಯಶ್ ನನ್ನನ್ನು ನಿರ್ಲಕ್ಷ್ಯ ಮಾಡ್ತಿದ್ದಾರೆ. ಒಂದು ತಿಂಗಳ ಹಿಂದೆ ಯಶ್, ಸೋಶಿಯಲ್ ಮೀಡಿಯಾದಿಂದ ನನ್ನ ದೂರ ಮಾಡಿದರು. ಎಲ್ಲಾ ಸೋಶಿಯಲ್ ಮೀಡಿಯಾ ಖಾತೆಗಳಿಂದ ಅನ್ಫಾಲೋ ಮಾಡಿದರು. ನಾನು ಯಶ್ ನಡೆಯನ್ನು ಖಂಡಿಸಿದೆ. ಮದುವೆ ಆಗುವಂತೆ ಕೇಳಿಕೊಂಡೆ. ಆತ ನಿರಾಕರಿಸಿದ್ದಾನೆ. ಅಲ್ಲದೇ ನನಗೆ ಹೊಡೆದಿದ್ದಾನೆ ಅಂತಾ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾಳೆ ಎಂದು ವರದಿಯಾಗಿದೆ.
ಇದನ್ನೂ ಓದಿ: RCB ಸ್ಟಾರ್ ವಿರುದ್ಧ ಮಹಿಳೆ ಆರೋಪ.. ಠಾಣೆಯಲ್ಲಿ ಇವತ್ತು ಭಾರೀ ಬೆಳವಣಿಗೆ, ದಯಾಳ್ಗೆ ಸಂಕಷ್ಟ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ