VIDEO: ರೀಲ್ಸ್​ ಮಾಡೋ ಮಂಪರಿನಲ್ಲಿದ್ದ ಮಹಿಳೆ.. ಬೈಕಲ್ಲಿ ಬಂದು ಸರ ಕದ್ದು ಜೂಟ್​ ಆದ ಕಳ್ಳ!

author-image
AS Harshith
Updated On
VIDEO: ರೀಲ್ಸ್​ ಮಾಡೋ ಮಂಪರಿನಲ್ಲಿದ್ದ ಮಹಿಳೆ.. ಬೈಕಲ್ಲಿ ಬಂದು ಸರ ಕದ್ದು ಜೂಟ್​ ಆದ ಕಳ್ಳ!
Advertisment
  • ರೀಲ್ಸ್​ ಮಾಡೋರೇ ಹುಷಾರ್​.. ಈ ವಿಡಿಯೋ ನೋಡಿದ್ರೆ ರೀಲ್ಸ್​ ಬೇಡ ಅಂತೀರ
  • ರೀಲ್ಸ್​ ಮಾಡುತ್ತಿದ್ದ ಮಹಿಳೆಯ ಕತೆ ಏನಾಯ್ತು ಗೊತ್ತಾ? ಹಿಂಗೂ ಆಗುತ್ತೆ ಕಣ್ರಿ
  • ಬೈಕ್​ನಲ್ಲಿ ಬಂದು ಸರ ಕದ್ದು ಎಸ್ಕೇಪ್​ ಆದ ಖದೀಮ, ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಕಾಲ ಬದಲಾಗಿದೆ. ಅದರಲ್ಲೂ ಮೊಬೈಲ್​, ಸಾಮಾಜಿಕ ಜಾಲತಾಣ ಬಂದ ಮೇಲಂತೂ ಜನರ ನಡವಳಿಕೆಯಲ್ಲೂ ವ್ಯತ್ಯಾಸ ಉಂಟಾಗಿದೆ. ಸದ್ಯಕ್ಕಂತೂ ಊಟ ಬಿಟ್ಟೆವು ಆದ್ರೆ ರೀಲ್ಸ್ ಬಿಡೆವು ಎಂಬ ನಡವಳಿಕೆ ಮಾತ್ರ ಕಣ್ಣೆದುರೇ ಕಾಣಿಸುತ್ತದೆ. ಅದರೆ ಇಲ್ಲೊಬ್ಬಳು ಮಹಿಳೆಯ ಕಥೆ ಏನಾಗಿದೆ ಗೊತ್ತಾ?. ರೀಲ್ಸ್​ ಮಾಡುವ ಮಂಪರಿನಲ್ಲಿದ್ದ ಮಹಿಳೆಯ ಕುತ್ತಿಗೆಯಲ್ಲಿ ಸರವನ್ನ ಕಳ್ಳನೊಬ್ಬ ಕದ್ದೊಯ್ದ ಘಟನೆ ಬೆಳಕಿಗೆ ​ದೃಶ್ಯ ಸಮೇತ ಬೆಳಕಿಗೆ ಬಂದಿದೆ.

ಗಾಜಿಯಾಬಾದ್​​ ಇಂದಿರಾಪುರಂನಲ್ಲಿ ಈ ಘಟನೆ ನಡೆದಿದೆ. ಸುಷ್ಮಾ ಎಂಬ ಮಹಿಳೆ ರೀಲ್ಸ್​ ಮಾಡುವ ಮಂಪರಿನಲ್ಲಿ ಅತ್ತ ಕಡೆಯಿಂದ ಕ್ಯಾಟ್​ ವಾಕ್​ ಮಾಡುತ್ತಾ ಬರುತ್ತಾಳೆ. ಇತ್ತ ಕಡೆಯಿಂದ ಬೈಕ್​ ಸವಾರನೊಬ್ಬ ತಲೆಗೆ ಹೆಲ್ಮೆಟ್​ ಧರಿಸಿ ಮಹಿಳೆಯ ಕುತ್ತಿಗೆಯಲ್ಲಿದ್ದ ಸರವನ್ನ ಕಿತ್ತುಕೊಂಡು ಪರಾರಿಯಾಗುತ್ತಾನೆ.

ಇದನ್ನೂ ಓದಿ: ರಾತ್ರಿ ಮಲಗಿದ್ದವನ ಕುತ್ತಿಗೆ ಸೀಳಿ ಭೀಕರವಾಗಿ ಕೊಲೆ.. ದುಷ್ಕರ್ಮಿಗಳು, ಎಸ್ಕೇಪ್


">March 24, 2024

ಬೈಕ್​ ಸವಾರ ಸುಷ್ಮಾಳ ಸರವನ್ನು ಕದ್ದೊಯ್ಯುವ ದೃಶ್ಯ ಮೊಬೈಲ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಯ ಬಳಿಕ ಸುಷ್ಮಾ ಪೊಲೀಸ್​​​ ಠಾಣೆಗೆ ತೆರಳು ದೂರು ನೀಡಿದ್ದಾಳೆ. ಸದ್ಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment