ತುಪ್ಪ ಎಲ್ಲರೂ ಸೇವಿಸುವಂತಹ ಪದಾರ್ಥವಲ್ಲ; ಯಾರೆಲ್ಲಾ ಇದರಿಂದ ದೂರ ಇರಬೇಕು ಗೊತ್ತಾ?

author-image
Gopal Kulkarni
Updated On
ನಿತ್ಯವೂ ತುಪ್ಪದಲ್ಲಿ ಮಾಡಿದ ಪದಾರ್ಥ ಸೇವನೆ ಎಷ್ಟು ಅಪಾಯಕಾರಿ? ಇಲ್ಲಿದೆ ನೀವು ಓದಲೇಬೇಕಾದ ಸ್ಟೋರಿ
Advertisment
  • ನಿತ್ಯ ಆಹಾರದಲ್ಲಿ ತುಪ್ಪ ಸೇವನೆಯಿಂದ ಇವೆ ಅನೇಕ ಆರೋಗ್ಯದ ಲಾಭಗಳು
  • ಅತಿಹೆಚ್ಚು ಪೋಷಕಾಂಶಗಳನ್ನು ಹೊಂದಿರುವ ತುಪ್ಪ ಕೆಲವರಿಗೆ ಅಪಾಯಕಾರಿ
  • ಯಾರು ತುಪ್ಪ ಸೇವನೆಯಿಂದ ದೂರ ಉಳಿಯಬೇಕು? ಆಗುವ ಅಪಾಯಗಳೇನು?

ತುಪ್ಪವನ್ನು ಪುರಾತನ ಕಾಲದಿಂದ ಹಿಡಿದು ಇಂದಿನ ಆಧುನಿಕ ಕಾಲದವರೆಗೂ ಒಂದು ಅತ್ಯದ್ಭುತ ಆರೋಗ್ಯಕರ ಆಹಾರ ಪದಾರ್ಥ ಎಂದೇ ಭಾವಿಸಲಾಗಿದೆ. ಆ ರೀತಿಯ ಪೋಷಕಾಂಶಗಳು ತುಪ್ಪದಲ್ಲಿ ಇದೆ. ಹೀಗಾಗಿಯೇ ಇದರ ಶ್ರೇಷ್ಠತೆಯ ಇತಿಹಾಸವನ್ನು ನಾವು ಸಹಸ್ರಾರು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ತುಪ್ಪದಲ್ಲಿ ವಿಟಮಿನ್ ಎ,ಡಿ, ಇ ಮತ್ತು ಕೆ ಗಳಿವೆ. ತುಪ್ಪ ದೇಹಕ್ಕೆ ಬೇಕಾಗುವ ಎಲ್ಲಾ ರೀತಿಯ ನ್ಯೂಟ್ರಿಯಂಟ್ಸ್​ ಒದಗಿಸುತ್ತದೆ. ಆರೋಗ್ಯಕರ ಕೊಲೆಸ್ಟ್ರಾಲ್ ಸುಧಾರಣೆ ಮಾಡುವುದರೊಂದಿಗೆ ಅನೇಕ ರೀತಿಯ ರೋಗಗಳಿಂದ ನಮ್ಮನ್ನು ಕಾಪಾಡುತ್ತದೆ.
ತುಪ್ಪವನ್ನು ಹೆಚ್ಚು ಸೇವನೆ ಮಾಡುವುದರಿಂದ ಶೇಕಡಾ 11 ರಷ್ಟು ವಿಟಮಿನ್ ಇ ನಮ್ಮ ದೇಹವನ್ನು ಸೇರಿಕೊಳ್ಳುತ್ತದೆ ಮತ್ತು ಶೇಕಡಾ 100ರಷ್ಟು ವಿಟಮಿನ್ ಎ ದೊರಕುತ್ತದೆ. ಆದರೆ ಜರ್ನಲ್ ಆಫ್ ಫುಡ್ ಕಾಂಪೋಸಿಷನ್ ಅಂಡ್ ಅನಾಲಸಿಸ್ ಹೇಳುವ ಪ್ರಕಾರ ತುಪ್ಪದಲ್ಲಿ ಓಲೈಕ್ ಆ್ಯಸಿಡ್ ಎಂಬ ಅಂಶವೂ ಕೂಡ ಇದೆ ಒಮೇಗಾ -3 ಎ ಲೈನೊಲೆನಿಕ್ ಆ್ಯಸಿಡ್​ನಂತಹ ಅಂಶಗಳು ಕೂಡ ತುಪ್ಪದಲ್ಲಿವೆ.

ಇದನ್ನೂ ಓದಿ:50 ಅಲ್ಲ 100 ವರ್ಷ ನೀವು ಆರೋಗ್ಯವಾಗಿ ಇರಬೇಕಾ? ಹಾಗಿದ್ರೆ ಈ 9 ಅಭ್ಯಾಸಗಳನ್ನು ತಪ್ಪದೇ ಪಾಲಿಸಿ!

ವರ್ಷಾನುಗಟ್ಟಲೇ ತುಪ್ಪವನ್ನು ನಮ್ಮ ಆಹಾರದ ಒಂದು ಭಾಗ ಮಾಡಿಕೊಂಡಲ್ಲಿ ಕೊಂಚ ಅಪಾಯವಿದೆ ಎಂದು ತಜ್ಞರು ಹೇಳುತ್ತಾರೆ. ಇದು ಹೃದಯ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ತುಪ್ಪವನ್ನು ಸೇವಿಸುವುದರಿಂದ ತ್ವಚೆಯ ಕಾಂತಿ ಹೊಳೆಯುತ್ತದೆ. ಇದು ದೇಹದಿಂದ ಟಾಕ್ಸಿನ್ ತೆಗೆದು ಹಾಕುತ್ತದೆ. ಕಣ್ಣಿನ ಆರೋಗ್ಯಕ್ಕೆ ತುಪ್ಪ ಸರ್ವಶ್ರೇಷ್ಠ ಮದ್ದು. ದೈಹಿಕ ಹಾಗೂ ಬೌದ್ಧಿಕ ಶಕ್ತಿಯನ್ನು ಕೂಡ ತುಪ್ಪ ಉತ್ತಮಗೊಳಿಸುತ್ತದೆ. ಹೀಗಾಗಿ ತುಪ್ಪ ಕೆಲವರ ಆಹಾರ ಕ್ರಮದಲ್ಲಿ ಕಡ್ಡಾಯ ಎನ್ನುವ ಮಟ್ಟಿಗೆ ಇದೆ. ಆದ್ರೆ ಕೆಲವರು ಈ ತುಪ್ಪದಿಂದ ದೂರ ಇರುವುದೇ ಒಳ್ಳೆಯದು.

ಪಚನಕ್ರಿಯೆ ಸೂಕ್ಷ್ಮ ಇರುವವರು ಸೇವಿಸಬಾರದು.

ಡೈಜೆಷಷನ್​ ಸಮಸ್ಯೆ ಇರುವವರು ತುಪ್ಪದಿಂದ ದೂರ ಇರುವುದೇ ಒಳ್ಳೆಯದು. ಅಸಿಡಿಟಿಯಂತ ಸಮಸ್ಯೆ, ಹುಳಿತೇಗು ಸಮಸ್ಯೆ ಸೇರಿದಂತೆ ಸರಿಯಾಗಿ ಪಚನಕ್ರಿಯೆ ಆಗದವರು ತುಪ್ಪದಿಂದ ದೂರ ಉಳಿಯುವುದೇ ವಾಸಿ. ಇವರು ತುಪ್ಪವನ್ನು ಸೇವಿಸುವುದರಿಂದ ಹೊಟ್ಟೆಯುಬ್ಬರ, ವಾಕರಿಕೆ ಮತ್ತು ಅಪಚನದಂತಹ ಸಮಸ್ಯೆಗಳು ಇನ್ನಷ್ಟು ಹೆಚ್ಚು ಸೃಷ್ಟಿಯಾಗುತ್ತವೆ. ಪಚನಕ್ರಿಯೆ ಸಮಸ್ಯೆ ಇರುವವರು ತುಪ್ಪವನ್ನು ಸೇವಿಸುವುದರಿಂದ ಗಾಲ್​ಬ್ಲಾಡರ್ ಮೇಲೆಯೂ ಕೂಡ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

publive-image

ತೂಕ ನಿರ್ವಹಣೆ ಮಾಡಲು ಸಜ್ಜಾಗಿರುವವರು
ತುಪ್ಪ ಅಂದ್ರೆನೇ ಕೊಲೆಸ್ಟ್ರಾಲ್​ನ ಇನ್ನೊಂದು ಹೆಸರು. ತೂಕ ಇಳಿಸಲು ಕಸರತ್ತು ಮಾಡುತ್ತಿರುವವರು ಇದರಿಂದ ದೂರ ಇರುವುದು ಒಳಿತು.  ತುಪ್ಪದಲ್ಲಿ ಹೆಚ್ಚು ಫ್ಯಾಟ್ ಅಂಶವಿದೆ, ಹೀಗಾಗಿ ತುಪ್ಪ ತಿನ್ನುವುದರಿಂದ ಅನವಶ್ಯಕವಾಗಿ ಹಸಿವು ಆಗುವ ಸಮಸ್ಯೆಯನ್ನು ನೀವು ಕಾಣುತ್ತೀರಿ. ಹೀಗಾಗಿ ತೂಕ ಇಳಿಸಲು ಸಜ್ಜಾಗಿರುವವರು ತುಪ್ಪದಿಂದ ದೂರ ಇರುವುದು ಒಳ್ಳೆಯದು.

publive-image

ಲೀವರ್​ ಸಮಸ್ಯೆಯಿರುವವರು
ಲೀವರ್ ಸಮಸ್ಯೆಯಿಂದ ಬಳಲುತ್ತಿರುವವರು ತುಪ್ಪ ಸೇವನೆಯಿಂದ ದೂರ ಉಳಿಯುವುದೇ ವಾಸಿ. ತುಪ್ಪ, ಎಣ್ಣೆ ಹಾಗೂ ಬೆಣ್ಣೆಯಿಂದ ಆದಷ್ಟು ದೂರವೇ ಇರಿ, ಜರ್ನಲ್ ನ್ಯೂಟ್ರಿಷಿಯನ್ ಮತ್ತು ಮೆಟಬೊಲಿಸಂನ ಅಧ್ಯಯನದ ಪ್ರಕಾರ ಲೀವರ್​ನ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹೆಚ್ಚು ತುಪ್ಪ ಸೇವನೆ ಮಾಡುವುದರಿಂದ ಲೀವರ್​​ಗೆ ಸಂಬಂಧಿಸಿದ ಸಮಸ್ಯೆಗಳು ಇನ್ನಷ್ಟು ಹೆಚ್ಚುತ್ತವೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ನಿದ್ದೆಯಿಲ್ಲದೇ ಬಳಲುತ್ತಿರುವವರಿಗೆ ಹೆಚ್ಚು ಮಾನಸಿಕ ಸಮಸ್ಯೆ! ಆ ಹೆಲ್ಪ್​ಲೈನ್ ನೀಡಿದ ಅಸಲಿ ವಿಷಯ ಏನು?

ಹೆಚ್ಚು ಕೊಲೆಸ್ಟ್ರಾಲ್​ನಿಂದ ಬಳಲುತ್ತಿರುವವರು
ಹೆಚ್ಚು ಕೊಲೆಸ್ಟ್ರಾಲ್​ನಿಂದ ಬಳಲುತ್ತಿರುವವರು ತುಪ್ಪದಿಂದ ವಿಮುಖರಾಗುವುದೇ ಒಳ್ಳೆಯದು. ತುಪ್ಪ ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಸೃಷ್ಟಿಮಾಡುತ್ತದೆ. ಆದ್ರೆ ಈಗಾಗಲೇ ಹೆಚ್ಚು ಕೊಲೆಸ್ಟ್ರಾಲ್ ಹೊಂದಿರುವವರು ಹೆಚ್ಚು ಹೆಚ್ಚು ತುಪ್ಪ ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲಬೇಕಾಗುವ ಸ್ಥಿತಿ ಉಂಟಾಗಬಹುದು. ಹೀಗಾಗಿ ಈ ಸಮಸ್ಯೆ ಇರುವವರು ತುಪ್ಪದ ಬಳಕೆಯಿಂದ ಅಂತರ ಕಾಯ್ದುಕೊಳ್ಳುವುದು ಆರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment