/newsfirstlive-kannada/media/post_attachments/wp-content/uploads/2024/12/JOBS_BANK-3.jpg)
ಜನರಲ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಜಿಐಸಿ) ಉದ್ಯೋಗಗಳನ್ನು ಭರ್ತಿ ಮಾಡುತ್ತಿದ್ದು ಈ ಸಂಬಂಧ ಅರ್ಹರಿಂದ ಅರ್ಜಿಗಳನ್ನು ಆಹ್ವಾನ ಮಾಡಿದೆ. ಉದ್ಯೋಗಕ್ಕಾಗಿ ಅಲೆಯುತ್ತಿರುವ ಪದವಿ ಹಾಗೂ ಸ್ನಾತಕೋತ್ತರ ಮುಗಿಸಿದ ಅಭ್ಯರ್ಥಿಗಳು ಇವುಗಳಿಗೆ ಅಪ್ಲೇ ಮಾಡಬಹುದು.
ಉದ್ಯೋಗ ಇಲ್ಲದೇ ಕೆಲಸಕ್ಕೆ ಅಲೆಯುತ್ತಿರುವವರು ಸಾಮಾನ್ಯ ವಿಮಾ ಕಂಪನಿ ಉದ್ಯೋಗಗಳಿಗೆ ಟ್ರೈ ಮಾಡಬಹುದು. ಜಿಐಸಿ ಹುದ್ದೆಗಳನ್ನು ತುಂಬತ್ತಿದೆ. ಆಸಕ್ತಿ ಇರುವವರು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಜಿಐಸಿ ಸಹಾಯಕ ವ್ಯವಸ್ಥಾಪಕ 2024ರ ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತಿದೆ. ಅರ್ಜಿಗಳು ಆರಂಭವಾಗಿವೆ. ಕೊನೆ ದಿನಾಂಕ ಡಿಸೆಂಬರ್ 19 ಆಗಿದೆ.
ಒಟ್ಟು ಹುದ್ದೆಗಳು- 110
ಮಾಸಿಕ ವೇತನ ಶ್ರೇಣಿ - 50,925
ವಿದ್ಯಾರ್ಹತೆ
ಸ್ನಾತಕೋತ್ತರ ಅಥವಾ ಎಂಬಿಎ, ಸಿಎ, ಸಿಎಫ್ಎ, ಎಂಕಾಮ್
ಎಲ್ಎಲ್ಎಂ (ಸಿವಿಲ್, ಸೈಬರ್)
ಬಿಇ, ಬಿಟೆಕ್, ಎಂ.ಇ, ಎಂಟೆಕ್, ಎಂಎಸ್, ಎಂಬಿಬಿಎಸ್,
ಅರ್ಜಿ ಶುಲ್ಕ
ಎಸ್ಸಿ, ಎಸ್ಟಿ ಅಭ್ಯರ್ಥಿಗಳು- ವಿನಾಯತಿ ಇದೆ
ಸಾಮಾನ್ಯ, ಒಬಿಸಿ ಅಭ್ಯರ್ಥಿಗಳು- 1,000 ರೂಪಾಯಿ
ಇದನ್ನೂ ಓದಿ:SBIನಲ್ಲಿ ಬೃಹತ್ ನೇಮಕಾತಿ.. 13 ಸಾವಿರಕ್ಕೂ ಹೆಚ್ಚು ಕೆಲಸಗಳಿಗೆ ಅರ್ಜಿ ಆಹ್ವಾನ
ಹುದ್ದೆಗಳ ಹೆಸರು- ಸಹಾಯಕ ಮ್ಯಾನೇಜರ್ (Scale I), ಹೆಚ್‌ಆರ್, ಇಂಜಿನಿಯರಿಂಗ್, ಜನರಲ್, ಲೀಗಲ್, ಐಟಿ, ಇನ್ಶೂರೆನ್ಸ್, ಮೆಡಿಕಲ್ (ಎಂಬಿಬಿಎಸ್), ಆಕ್ಚುರಿ ಮತ್ತು ಫೈನಾನ್ಸ್ನ ಹುದ್ದೆಗಳು ಇವೆ.
ಈ ಕೆಲಸಗಳು ಒಟ್ಟು 110 ಇವೆ. ಇದರಲ್ಲಿ ಸಾಮಾನ್ಯ ವರ್ಗಕ್ಕೆ 43, ಇತರೆ ಹಿಂದುಳಿದ ವರ್ಗಗಳಿಗೆ 34, ಪರಿಶಿಷ್ಟ ಜಾತಿ ಹಾಗೂ ವರ್ಗಕ್ಕೆ 35 ಸೇರಿವೆ.
ಆಯ್ಕೆ ಪ್ರಕ್ರಿಯೆ ಹೇಗಿದೆ..?
- ಆನ್ಲೈನ್ ಟೆಸ್ಟ್
- ಗುಂಪು ಚರ್ಚೆ
- ಸಂದರ್ಶನ
- ವೈದ್ಯಕೀಯ ಪರೀಕ್ಷೆ
ಈ ದಿನಾಂಕಗಳನ್ನು ನೆನಪಿಡಿ
- ನೋಟಿಫಿಕೇಶನ್ ರಿಲೀಸ್ ದಿನಾಂಕ- 04 ಡಿಸೆಂಬರ್ 2024
- ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ- 19 ಡಿಸೆಂಬರ್ 2024
- ಅರ್ಜಿ ಶುಲ್ಕಕ್ಕೆ ಕೊನೆ ದಿನಾಂಕ- 19 ಡಿಸೆಂಬರ್ 2024
ಅಪ್ಲೇ ಮಾಡಲು ಲಿಂಕ್-https://ibpsonline.ibps.in/gicionov24/
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ