/newsfirstlive-kannada/media/post_attachments/wp-content/uploads/2024/09/gicchi-giligili.jpg)
ಕನ್ನಡ ಕಿರುತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋ ಬರ್ತಾನೆ ಇವೆ. ವೀಕೆಂಡ್ ಬಂತು ಅಂದರೆ ಸಾಕು ಎಲ್ಲರೂ ರಿಯಾಲಿಟಿ ಶೋಗಳನ್ನ ನೋಡಲು ಕುಳಿತುಕೊಳ್ತಾರೆ. ಸದ್ಯ ಪ್ರತಿ ವೀಕೆಂಡ್ನಲ್ಲಿ ನಕ್ಕು ನಗಿಸ್ತಾ ಇರೋದು ಗಿಚ್ಚಿ ಗಿಲಿಗಿಲಿ ಶೋ. ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಸಲುವಾಗಿಯೇ ಗಿಚ್ಚಿ ಗಿಲಿಗಿಲಿ ವೇದಿಕೆ ಸೃಷ್ಟಿಯಾಗಿತ್ತು.
ಇದನ್ನೂ ಓದಿ: ಯುವತಿಯ ಖಾಸಗಿ ವಿಡಿಯೋ ಇಟ್ಟುಕೊಂಡಿದ್ದ ಸೀರಿಯಲ್ ನಟ ಕೇಸ್ಗೆ ಬಿಗ್ ಟ್ವಿಸ್ಟ್; ಅಸಲಿಗೆ ಆಗಿದ್ದೇನು?
ಪ್ರತಿ ಎಪಿಸೋಡ್ನಲ್ಲಿ ಕೂಡ ತುಂಬಾ ಡಿಫರೆಂಟ್ ಆಗಿ ಸ್ಕಿಟ್ಗಳು ಮೂಡಿ ಬರುತ್ತಿತ್ತು. ಆದ್ರೆ ಈಗ ವೀಕ್ಷಕರಿಗೆ ಬೇಸರದ ಸುದ್ದಿಯೊಂದಿದೆ.
ಗಿಚ್ಚಿ ಗಿಲಿಗಿಲಿ ಸೀಸನ್ 1 ರಿಂದ ಸೀಸನ್ 3ರವರೆಗೂ ಯಶಸ್ವಿಯಾಗಿ ಮೂಡಿ ಬಂದಿದೆ. ವೀಕ್ಷಕರನ್ನು ರಂಜಿಸುತ್ತಾ ಇದ್ದಂತ ಈ ಗಿಚ್ಚಿ ಗಿಲಿಗಿಲಿ ಸೀಸನ್ 3 ಮುಕ್ತಾಯದ ಹಂತಕ್ಕೆ ಬಂದಿದೆ. ಇನ್ನೇನು ಎರಡು ವಾರಗಳಲ್ಲಿ ಗಿಚ್ಚಿ ಗಿಲಿಗಿಲಿ ಸೀಸನ್ 3 ತನ್ನ ಅಭಿಮಾನಿಗಳಿಗೆ ಶುಭಂ ಹೇಳಲು ನಿಂತಿದೆ.
View this post on Instagram
ಮುಂದಿನ ವಾರವೇ ಗಿಚ್ಚಿ ಗಿಲಿಗಿಲಿಯ ಫಿನಾಲೆ ನಡೆಯಲಿದೆ. ತದನಂತರ ಫಿನಾಲೆ ಎಪಿಸೋಡ್ ಮಾಡೋ ಮೂಲಕ ಗಿಚ್ಚಿ ಗಿಲಿಗಿಲಿ ಸೀಸನ್ 03 ವಿನ್ನರ್ನ ಅನೌನ್ಸ್ ಮಾಡಲಾಗುತ್ತೆ. ನಕ್ಕು ನಗಿಸುವರ ಈ ಶೋ ಇಷ್ಟು ಬೇಗ ಅಂತಿಮ ಘಟ್ಟ ತಲುಪಿದೆ ಅಂದ್ರೆ ಸ್ವಲ್ಪ ಬೇಜಾರೆ ಹೌದು. ಆದರೂ ರಿಯಾಲಿಟಿ ಶೋಗಳ ನಿಯಮಗಳಂತೆ 3 ತಿಂಗಳ ನಂತರ ಆ ಶೋ ಶುಭಂ ಹೇಳಲೇಬೇಕು. ಹಾಗಾಗಿ ಮುಂದಿನ ವಾರವೇ ಗಿಚ್ಚಿ ಗಿಲಿಗಿಲಿಯ ಪ್ರೀ ಫಿನಾಲೆ ಇಟ್ಟಿದ್ದಾರೆ. ಪ್ರೀ ಫಿನಾಲೆಯ ನಂತರದಲ್ಲಿ ಫಿನಾಲೆ ಏರ್ಪಾಡು ಮಾಡಲಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ