/newsfirstlive-kannada/media/post_attachments/wp-content/uploads/2023/09/chandra.jpg)
ಗಿಚ್ಚಿ ಗಿಲಿಗಿಲಿ ಖ್ಯಾತಿಯ ಹಾಸ್ಯ ನಟ ಚಂದ್ರಪ್ರಭಾ ಅವರ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ಇತ್ತೀಚೆಗೆ ಚಿಕ್ಕಮಗಳೂರು ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಹಿಟ್ ಆ್ಯಂಡ್ ರನ್ ಅಪಘಾತ ನಡೆದಿತ್ತು. ಹಾಸ್ಯನಟ ಚಂದ್ರಪ್ರಭಾ ಅವರು ಕಾರು ಚಾಲಕ ಬೈಕ್​ಗೆ ಗುದ್ದಿದ್ದರು. ಭೀಕರ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿ ಎಲ್ಲೆಡೆ ವೈರಲ್​ ಆಗಿತ್ತು. ಚಿಕ್ಕಮಗಳೂರು ನಗರದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಂದು ಹಾಸ್ಯನಟ ಚಂದ್ರಪ್ರಭಾ ಅವರು ವಿಚಾರಣೆಗೆ ಹಾಜರಾಗಿದ್ದಾರೆ.
ಹಿಟ್ ಆ್ಯಂಡ್ ರನ್ ಕೇಸ್ ಕ್ಷಮೆ ಕೇಳಿದ ಗಿಚ್ಚಿ ಗಿಲಿಗಿಲಿ ಚಂದ್ರಪ್ರಭ..#Chandraprabha#HitAndRunCase#ChandraprabhaGCarIncident#ComedyStar#Chikkamagaluru#NewsFirstKannadapic.twitter.com/SHffN2ivJa
— NewsFirst Kannada (@NewsFirstKan) September 8, 2023
/newsfirstlive-kannada/media/post_attachments/wp-content/uploads/2023/09/chandra-1.jpg)
ಪೊಲೀಸ್ ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಚಂದ್ರಪ್ರಭಾ ಅವರು ಅಂದು ಶೂಟಿಂಗ್​ ಮುಗಿಸಿಕೊಂಡು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ನಾನು ಮಾಡಿದ್ದು ತಪ್ಪು. ಈ ಕುರಿತು ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಆತ ಕುಡಿದಿದ್ದ ಎಂದು ಹೇಳಿದ್ದೆ, ಆದರೆ ಹಾಗೇ ಹೇಳಬಾರದಾಗಿತ್ತು ಅವನು ಕುಡಿದಿರಲಿಲ್ಲ. ತಪ್ಪಾಯ್ತು ನನ್ನನ್ನು ಕ್ಷಮಿಸಿ. ಅಪಘಾತಕ್ಕಿಡಾದ ಯುವಕನ ಯೋಗಕ್ಷೇಮದ ಬಗ್ಗೆ ವಿಚಾರಿಸಬೇಕಿತ್ತು. ಆದರೆ ನಾನು ವಿಚಾರಿಸಲಿಲ್ಲ ನಾನು ಬಡವ ನನ್ನ ತಂದೆ ಸತ್ತು 11 ವರ್ಷವಾಯ್ತು. ಈಗ ಆಸ್ಪತ್ರೆಗೆ ಹೋಗಿ ಯೋಗಕ್ಷೇಮ ವಿಚಾರಿಸುತ್ತೇನೆ. ಮಾಲ್ತೇಶ್​ ಆಸ್ಪತ್ರೆ ಖರ್ಚಿಗೆ ನನ್ನ ಕೈಲಾದ ಸಹಾಯ ಮಾಡುತ್ತೇನೆ ಎಂದು ನಟ ಚಂದ್ರಪ್ರಭಾ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us