Advertisment

ವಿವಾದದಲ್ಲಿ ಗಿಚ್ಚಿ ಗಿಲಿ ಗಿಲಿ ಖ್ಯಾತಿಯ ನಟ; ಚಂದ್ರಪ್ರಭ ಕಾರಿನ ಮೇಲೆ ಹಿಟ್​ ಆ್ಯಂಡ್​ ರನ್​ ಕೇಸ್​ ದಾಖಲು

author-image
AS Harshith
Updated On
ಆಕ್ಸಿಡೆಂಟ್ ಮಾಡಿ ಎಸ್ಕೇಪ್​​ ಆದ್ರಾ ನಟ ಚಂದ್ರಪ್ರಭಾ? ಮಾನವೀಯತೆಗೂ ಗಾಯಾಳನ್ನು ಆಸ್ಪತ್ರೆಗೆ ಸೇರಿಸಲಿಲ್ಲವೇ? ಏನಿದು ಸ್ಟೋರಿ!
Advertisment
  • ಕಾಫಿನಾಡಿನಲ್ಲಿ ದ್ವಿಚಕ್ರ ವಾಹನಕ್ಕೆ ಗುದ್ದಿ ಎಸ್ಕೇಪ್​ ಆದ ಕಾರು ಸವಾರ
  • ಸಿಸಿಟಿವಿಯಲ್ಲಿ ಸೆರೆಯಾಯ್ತು ಕಾರು ಮತ್ತು ಸ್ಕೂಟರ್​ ನಡುವಿನ ಅಪಘಾತದ ದೃಶ್ಯ,
  • ಹಿಟ್​ ಆ್ಯಂಡ್​ ರನ್​ ಬಳಿಕ ಮಾನವೀಯತೆಗೂ ಕಾರು ನಿಲ್ಲಿಸದೆ ಸವಾರ ಎಸ್ಕೇಪ್

ಚಿಕ್ಕಮಗಳೂರು: ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಹಿಟ್ ಆ್ಯಂಡ್ ರನ್ ಆಕ್ಸಿಡೆಂಟ್ ನಡೆದಿದ್ದು, ಕಾರು ಸವಾರ ಬೈಕಿಗೆ ಗುದ್ದಿ ಎಸ್ಕೇಪ್ ಆಗಿದ್ದಾನೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬೈಕ್​ಗೆ ಗುದ್ದಿ ಪರಾರಿಯಾದ ಕಾರು ಕಾಮಿಡಿ ನಟನದ್ದು ಎಂದು ಹೇಳಲಾಗಿದೆ.

Advertisment

KA 51 MD 9552 ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಕಾರು ಇದಾಗಿದ್ದು, ಗಿಚ್ಚಿ ಗಿಲಿ-ಗಿಲಿ ಕಾಮಿಡಿ ಶೋ ನಟ ಚಂದ್ರಪ್ರಭಗೆ ಸೇರಿದ ಕಾರು ಎಂದು ಹೇಳಲಾಗುತ್ತಿದೆ.

ಅಪಘಾತ ಮಾಡಿ ಮಾನವೀಯತೆಗೂ ಕಾರು ನಿಲ್ಲಿಸದೆ ಸವಾರ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಅಪಘಾತದಲ್ಲಿ ಬೈಕ್ ಸವಾರ ಮಾಲ್ತೇಶ್ ಗಂಭೀರವಾಗಿ ಗಾಯಗೊಂಡಿದ್ದಾನೆ.

ಮಾಲ್ತೇಶ್ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ನಿವಾಸಿಯಾಗಿದ್ದು, ಕೆಲಸ ಮುಗಿಸಿ ಮನೆಗೆ ಹೋಗುವಾಗ ಈ ಅಪಘಾತ ಸಂಭವಿಸಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಮಾಲ್ತೇಶ್​ನನ್ನು ಹಾಸನಕ್ಕೆ ರವಾನಿಸಲಾಗಿದೆ. ಆತನ ಸಂಬಂಧಿಕರು ಕಾರು ಸವಾರನ ವಿರುದ್ಧ ಚಿಕ್ಕಮಗಳೂರು ನಗರದ ಟ್ರಾಫಿಕ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment