/newsfirstlive-kannada/media/post_attachments/wp-content/uploads/2025/02/priyanaka-kamath.jpg)
ಪ್ರಿಯಾಂಕಾ ಕಾಮತ್ ಯಾರಿಗೆ ಗೊತ್ತಿಲ್ಲ ಹೇಳಿ. ತಮ್ಮ ಅದ್ಭುತ ಕಾಮಿಡಿ ಹಾಗೂ ನಟನೆಯ ಮೂಲಕವೇ ವೀಕ್ಷಕರನ್ನು ಗಳಿಸಿಕೊಂಡ ಹಾಸ್ಯ ನಟಿ ಎಂದರೆ ಅದು ಪ್ರಿಯಾಂಕಾ ಕಾಮತ್. ಪ್ರಿಯಾಂಕಾ ಕಾಮತ್ ಅವರು ‘ಮಜಾ ಭಾರತ’, ‘ಗಿಚ್ಚಿ ಗಿಲಿಗಿಲಿ’ ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ ಮಿಂಚಿದ್ದರು. ಅಲ್ಲದೇ ರಾಜಾ ರಾಣಿ ಶೋನಲ್ಲಿ ಪ್ರಿಯಾಂಕಾ ಕಾಮತ್ ಹಾಗೂ ಪತಿ ಅಮಿತ್ ನಾಯಕ್ 2ನೇ ರನ್ನರ್​ ಪಟ್ಟ ಗಿಟ್ಟಿಸಿಕೊಂಡಿದ್ದರು.
/newsfirstlive-kannada/media/post_attachments/wp-content/uploads/2025/02/priyanaka-kamath-1.jpg)
ಇದೀಗ ನಟಿ ಪ್ರಿಯಾಂಕಾ ಕಾಮತ್ ಅವರು ಮಹಾಮಿಲನದ ವೇದಿಕೆ ಮೇಲೆ ಮಹಾಕಾಳಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವಾರ ಬಾಯ್ಸ್ ವರ್ಸಸ್ ಗರ್ಲ್ಸ್ ಹಾಗೂ ಮಹಾ ಟಾಕೀಸ್ ಮಹಾ ಮಿಲನವಾಗಿದೆ. ಎರಡೂ ತಂಡದ ಸದಸ್ಯರು ವೇದಿಕೆ ಮೇಲೆ ಭರ್ಜರಿ ಮನರಂಜನೆ ನೀಡ್ತಿದ್ದಾರೆ. ಇದೇ ವೇಳೆ ವೇದಿಕೆ ಮೇಲೆ ಪಾರ್ವತಿ ದೇವಿಯು ಮಹಾಕಾಳಿಯಾಗಿ ಅವತರಿಸಿದ ಸನ್ನಿವೇಶ ನೃತ್ಯವನ್ನು ಪ್ರದರ್ಶಿಸಿದ್ದಾರೆ.
View this post on Instagram
ವೇದಿಕೆ ಮೇಲೆ ಪ್ರಿಯಾಂಕಾ ಕಾಮತ್ ಅವರು ಮಹಾಕಾಳಿಯಾಗಿ ನೃತ್ಯ ಮಾಡಿದ್ದನ್ನು ನೋಡಿದ ಎಲ್ಲರೂ ಫುಲ್​ ಶಾಕ್​ ಆಗಿದ್ದಾರೆ. ಅಷ್ಟರ ಮಟ್ಟಿಗೆ ಪ್ರಿಯಾಂಕಾ ಕಾಮತ್ ಅವರು ಅದ್ಭುತವಾಗಿ ನೃತ್ಯವನ್ನು ಪ್ರದರ್ಶಿಸಿದ್ದಾರೆ. ಇದೇ ಡ್ಯಾನ್ಸ್ ಪರ್ಫಾರ್ಮೆನ್ಸ್​ನಲ್ಲಿ ಬಿಗ್​ಬಾಸ್​ ಖ್ಯಾತಿಯ ಐಶ್ವರ್ಯಾ ಸಿಂಧೋಗಿ ಹಾಗೂ ಅಮೃತಧಾರೆ ಸೀರಿಯಲ್ ನಟಿ ಚಂದನಾ ಕೂಡ ಭಾಗಿಯಾಗಿದ್ದರು. ಸದ್ಯ ಕಲರ್ಸ್​ ಕನ್ನಡದಲ್ಲಿ ಮೂಡಿ ಬರುತ್ತಿರೋ ನಿನಗಾಗಿ ಸೀರಿಯಲ್, ಹಾಗೂ ಮಜಾ ಟಾಕೀಸ್​ನಲ್ಲಿ ಪ್ರಿಯಾಂಕಾ ಕಾಮತ್ ಅವರು ಅಭಿನಯಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2025/02/priyanaka-kamath-2.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us