/newsfirstlive-kannada/media/post_attachments/wp-content/uploads/2025/04/gicchi-giligili-raghu.jpg)
ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿರೋ ಯುವನಟ ಎಂದರೆ ಅದು ರಾಘವೇಂದ್ರ.
ಇದನ್ನೂ ಓದಿ: ಸೀರೆ ಜಾಗಕ್ಕೆ ಪ್ಯಾಂಟ್ ಶರ್ಟ್.. ಶ್ರಾವಣಿ ಸುಬ್ರಹ್ಮಣ್ಯ ಕಾಂತಮ್ಮತ್ತೆಯ ರೆಬೆಲ್ ಲುಕ್ಗೆ ವೀಕ್ಷಕರು ಫಿದಾ
ಗಿಚ್ಚಿ ಗಿಲಿಗಿಲಿ ಮೂಲಕ ಸಖತ್ ಫೇಮಸ್ ಆಗಿದ್ದ ರಾಗಿಣಿ ಅಲಿಯಾಸ್ ರಾಘವೇಂದ್ರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಹೌದು, ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶಿರವಾಳ ಗ್ರಾಮದ ರಾಘವೇಂದ್ರ ಅವರು ಹೊಸ ಮನೆಯನ್ನು ಕಟ್ಟಿಸಿದ್ದಾರೆ. ಅದಕ್ಕೆ ರಾಯರ ನೆರಳು ಅಂತ ಹೆಸರನ್ನು ಇಟ್ಟಿದ್ದಾರೆ.
ಈ ಖುಷಿ ವಿಚಾರನ್ನು ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಇನ್ನೂ, ಗಿಚ್ಚಿ ಗಿಲಿಗಿಲಿಯಲ್ಲಿ ಹೆಣ್ಣುಮಗಳ ಅವತಾರದಲ್ಲಿಯೇ ಕಾಣಿಸಿಕೊಂಡಿದ್ದರು. ಬರೀ ಹೆಣ್ಣು ಮಕ್ಕಳ ವೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅವರು ರಾಗಿಣಿ ಅಂತಲೇ ಫೇಮಸ್ ಆಗಿದ್ದಾರೆ.
ಸದ್ಯ ಮಜಾ ಟಾಕೀಸ್‌ನಲ್ಲಿಯೂ ಹೆಣ್ಣು ವೇಷದಿಂದಲೇ ಮೋಡಿ ಮಾಡುತ್ತಿದ್ದಾರೆ. ಹೀಗಿರುವಾಗಲೇ 2023ರಲ್ಲಿಯೇ ತಮ್ಮ ಕನಸಿನ ಮನೆಯನ್ನು ಕಟ್ಟಿದ್ದಾರೆ ರಾಘವೇಂದ್ರ.
ಅಂದಿನ ಮನೆಯ ಗೃಹಪ್ರವೇಶ ವಿಡಿಯೋವನ್ನು ಇದೀಗ ಶೇರ್ ಮಾಡಿಕೊಂಡಿದ್ದಾರೆ. ಕೇವಲ 23 ವರ್ಷದ ಯುವಕ ಅಷ್ಟು ದೊಡ್ಡದಾಗಿ ಮನೆ ಕಟ್ಟಿದ್ದೇ ಬಲು ವಿಶೇಷ.
ಗೃಹಪ್ರವೇಶ ದಿನ ಸ್ಯಾಂಡಲ್ವುಡ್ ನಟಿ ಶುಭ ಪೂಂಜಾ ದಂಪತಿ, ಮಂಜು ಪಾವಗಡ ಸೇರಿದಂತೆ ಹಲವರು ಆಗಮಿಸಿ ರಾಘುಗೆ ಶುಭ ಕೋರಿದ್ದಾರೆ.
ಕೆಲ ವರ್ಷಗಳ ಹಿಂದೆ ತಮ್ಮ ಹಳೇ ಮನೆಯಲ್ಲಿ ಮಲಗಿದ್ದಾಗ, ಭವ್ಯ ಮನೆಯ ಕನಸೊಂದು ರಾಘವೇಂದ್ರ ಅವರಿಗೆ ಬಿದ್ದಿತ್ತಂತೆ. ಮರುದಿನವೇ ಕನಸಿನಲ್ಲಿ ಕಂಡ ಮನೆಯನ್ನು ಥರ್ಮಾಕೋಲ್ ಬಳಸಿ ಸ್ಕೆಚ್ ಮಾಡಿಟ್ಟಿದ್ದರಂತೆ.
ಈಗ ಆ ಕನಸಿನಲ್ಲಿ ಕಂಡ ಮನೆಯನ್ನೇ ಹೋಲುವ ಭವ್ಯ ಬಂಗಲೆಯನ್ನೇ ನಿರ್ಮಿಸಿದ್ದಾರೆ ರಾಘವೇಂದ್ರ. ರಾಘವೇಂದ್ರ ಅವರ ಈ ಸಾಧನೆಗೆ ಅವರ ಆಪ್ತ ಕಲಾವಿದ ಬಳಗದಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ