/newsfirstlive-kannada/media/post_attachments/wp-content/uploads/2025/05/chandra-prabha1.jpg)
ಕಿರುತೆರೆ ಜನಪ್ರಿಯ ಶೋ ಮಜಾಭಾರತ ಹಾಗೂ ಗಿಚ್ಚಿ ಗಿಲಿಗಿಲಿ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ ಹಾಸ್ಯ ನಟ ಚಂದ್ರಪ್ರಭ.
ಇದನ್ನೂ ಓದಿ:ಚೈತ್ರಾ ಕುಂದಾಪುರ ಮತ್ತು ಆಕೆಯ ಪತಿ ಇಬ್ಬರು ಕಳ್ಳರು.. ಮದುವೆ ಬೆನ್ನಲ್ಲೇ ತಂದೆಯಿಂದ ಸ್ಫೋಟಕ ಹೇಳಿಕೆ
ತಮ್ಮ ಅದ್ಭುತ ಅಭಿನಯದ ಮೂಲಕವೇ ಅತಿ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇದೀಗ ವೀಕ್ಷಕರ ನೆಚ್ಚಿನ ಹಾಸ್ಯ ನಟ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ.
ಹೌದು, ಚಂದ್ರಪ್ರಭ ಹಾಗೂ ಭಾರತಿ ಪ್ರಿಯ ದಾಂಪತ್ಯ ಜೀವನಕ್ಕೆ ಕಾಲಿಟ್ಟು ನಿನ್ನೆಗೆ ಎರಡು ವರ್ಷ ಕಳೆದಿದೆ. ಇದೇ ಖುಷಿಯಲ್ಲಿ ಈ ಜೋಡಿ ಪುಟ್ಟದಾಗಿ ಕಾರ್ಯಕ್ರಮ ಮಾಡಿದೆ.
ನಟ ಚಂದ್ರಪ್ರಭ ಅವರು ಮತ್ತೆ ಪತ್ನಿ ಭಾರತಿ ಅವರಿಗೆ ಅಗ್ನಿ ಸಾಕ್ಷಿಯಾಗಿ ತಾಳಿ ಕಟ್ಟಿದ್ದಾರೆ. ಇದೇ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಎರಡನೇ ವರ್ಷದ ಸಂಭ್ರಮ ಅಂತ ಬರೆದುಕೊಂಡಿದ್ದಾರೆ. ಇನ್ನು, ಇತ್ತೀಚೆಗಷ್ಟೇ ಚಂದ್ರಪ್ರಭ ಅವರು ಹೊಸ ಮನೆಯ ಗೃಹ ಪ್ರವೇಶ ಮಾಡಿದ್ದರು.
ಆಗ ಸ್ಯಾಂಡಲ್ವುಡ್ ಗಣ್ಯರು ಭಾಗಿಯಾಗಿ ಶುಭ ಹಾರೈಸಿದ್ದರು. ತುಂಬಾ ಸುಂದರವಾದ ಡುಪ್ಲೆಕ್ಸ್ ಮನೆಯನ್ನು ಚಂದ್ರಪ್ರಭ ಕಟ್ಟಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ