newsfirstkannada.com

×

ಗಿಚ್ಚಿ ಗಿಲಿಗಿಲಿ ಪ್ರಶಾಂತ್​ ಡ್ಯಾನ್ಸ್​ಗೆ ನೆಟ್ಟಿಗರು ಫಿದಾ; ನೀನು ಮಲ್ಟಿ ಟ್ಯಾಲೆಂಟೆಡ್ ಕಲಾವಿದ ಕಣಯ್ಯಾ ಎಂದ ಫ್ಯಾನ್​

Share :

Published September 9, 2024 at 10:32am

Update September 9, 2024 at 10:43am

    ಪ್ರಶಾಂತ್ ಮಸ್ತ್ ಡ್ಯಾನ್ಸ್ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

    ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ ಡ್ಯಾನ್ಸ್​ ವಿಡಿಯೋ

    ಸೂಪರ್​ ಪ್ರಶಾಂತ್​​, ಅಪ್ಪನ ಡ್ಯಾನ್ಸ್​ ಅಂತೂ ಬೆಂಕಿ ಎಂದ ಫ್ಯಾನ್ಸ್​

ದೇವರು ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಟ್ಯಾಲೆಂಟ್​ ಕೊಟ್ಟಿರುತ್ತಾನೆ. ಅದನ್ನು ಸರಿಯಾದ ಸಮಯದಲ್ಲಿ ಉಪಯೋಗ ಮಾಡಿಕೊಂಡರೇ ಆ ಪ್ರತಿಭೆ​ಗೆ ಒಂದು ಬೆಲೆ ಬರುತ್ತದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್​, ಒಂದೊಳ್ಳೆ ಕಂಟೆಂಟ್ ಇಟ್ಟುಕೊಂಡು ರೀಲ್ಸ್​ ಮಾಡುತ್ತಿದ್ದರು ಟ್ಯಾಲೆಂಟೆಡ್ ಕಲಾವಿದ ಪ್ರಶಾಂತ್​ ಗೌಡ.

ಇದನ್ನೂ ಓದಿ: ಹೊಸ ಲುಕ್​ನಲ್ಲಿ ಬಿಗ್​ಬಾಸ್​ ಮಾಜಿ ಸ್ಪರ್ಧಿ ಸಿರಿ; ನಿಮ್ಗೆ ಮಾತ್ರ ವಯಸ್ಸೇ ಆಗಿಲ್ವಲ್ಲ ಮೇಡಂ ಅಂದ್ರು ಫ್ಯಾನ್​

ಬಳಿಕ ಇವರ ಟ್ಯಾಲೆಂಟ್​ ಅನ್ನು ದುಪಟ್ಟು ಮಾಡಲು ಗಿಚ್ಚಿ ಗಿಲಿಗಿಲಿ ವೇದಿಕೆ ಅವಕಾಶ ಮಾಡಿಕೊಟ್ಟಿತ್ತು. ಇದೇ ಗಿಚ್ಚಿ ಗಿಲಿಗಿಲಿ ಶೋ ಮೂಲಕ ಪ್ರಶಾಂತ್​ ಗೌಡ ಕನ್ನಡಿಗರ ಮನೆ ಮಾತಾಗಿದ್ದಾರೆ. ಗಿಚ್ಚಿ ಗಿಲಿಗಿಲಿ ರಿಯಾಲಿಟಿ ಶೋ ಸೀಸನ್​ 3 ಮೂಲಕ ಖ್ಯಾತಿ ಪಡೆದುಕೊಂಡು ತಮ್ಮ ಕಾಮಿಡಿ ಮೂಲಕ ಫೇಮಸ್​ ಆಗಿದ್ದಾರೆ. ಆಗಾಗ ಗಿಚ್ಚಿ ಗಿಲಿಗಿಲಿ ವೇದಿಕೆ ಮೇಲೆ ಸಹ ಕಲಾವಿದರು ಪ್ರಶಾಂತ್ ಗೌಡ ಮೇಲೆ ಪ್ರಾಂಕ್ ಮಾಡುತ್ತಾ ಇರುತ್ತಾರೆ. ಪದೇ ಪದೇ ಬಕ್ರಾ ಮಾಡಿದರೂ, ಸ್ಪೋರ್ಟಿವ್ ಆಗಿಯೇ ಸ್ವೀಕರಿಸಿ ಎಲ್ಲರ ಮೆಚ್ಚುಗೆ ಗಳಿಸುತ್ತಾ ಇರುತ್ತಾರೆ.

ಪ್ರಶಾಂತ್ ಅವರು ಒಳ್ಳೆಯ ಡ್ಯಾನ್ಸರ್​ ಕೂಡ ಹೌದು. ಆಗಾಗ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಹೊಸ ಡ್ಯಾನ್ಸ್​ ವಿಡಿಯೋವನ್ನು ಶೇರ್ ಇರುತ್ತಾರೆ. ಈ ಬಾರೀ ಶೇರ್ ಮಾಡಿದ ಡ್ಯಾನ್ಸ್​ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಪುನೀತ್​ ರಾಜ್​ಕುಮಾರ್​ ಅಭಿನಯದ ಜಾಕಿ ಸಿನಿಮಾದ ಜಾಕಿ ಹಾಡಿಗೆ ಪ್ರಶಾಂತ್ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಪ್ರಶಾಂತ್ ಅವರ ಜೊತೆಗೆ ವೇದಿಕೆ ಮೇಲೆ ಅವರ ತಂದೆ ಕೂಡ ಹೆಜ್ಜೆ ಹಾಕಿದ್ದಾರೆ. ಇದೇ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಅವರ ಡ್ಯಾನ್ಸ್​ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಬ್ಬಬ್ಬಾ ಏನ್​ ಡ್ಯಾನ್ಸ್​ ಬ್ರೋ, ನಿಜವಾಗ್ಲೂ ಮಲ್ಟಿ ಟ್ಯಾಲೆಂಟೆಡ್ ಕಲಾವಿದ ನೀವು, ಸೂಪರ್ ಅಂಕಲ್. ಸೂಪರ್ ಪ್ರಶಾಂತ್, ಬೆಂಕಿ ಡ್ಯಾನ್ಸ್​ ಅಂತೆಲ್ಲಾ ಕಾಮೆಂಟ್ಸ್ ಹಾಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿಚ್ಚಿ ಗಿಲಿಗಿಲಿ ಪ್ರಶಾಂತ್​ ಡ್ಯಾನ್ಸ್​ಗೆ ನೆಟ್ಟಿಗರು ಫಿದಾ; ನೀನು ಮಲ್ಟಿ ಟ್ಯಾಲೆಂಟೆಡ್ ಕಲಾವಿದ ಕಣಯ್ಯಾ ಎಂದ ಫ್ಯಾನ್​

https://newsfirstlive.com/wp-content/uploads/2024/09/talented-kalavida1.jpg

Load More