/newsfirstlive-kannada/media/post_attachments/wp-content/uploads/2024/12/mahitha.jpg)
ಅಬ್ಬಾಬ್ಬ.. ಈ ಪುಟ್ಟ ಹುಡುಗಿ ಮಹಿತಾ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ನನ್ನಮ್ಮ ಸೂಪರ್ ಸ್ಟಾರ್, ಗಿಚ್ಚಿ ಗಿಲಿಗಿಲಿ ಕಾಮಿಡಿ ಶೋ, ಚುಕ್ಕಿತಾರೆ ಸೀರಿಯಲ್ ಮೂಲಕ ಎಲ್ಲರ ಮನೆ ಮಾತಾಗಿದ್ದಳು ಬಾಲನಟಿ ಮಹಿತಾ. ಚುಕ್ಕಿತಾರೆ ಸೀರಿಯಲ್ ಮೂಲಕ ಸಖತ್ ಫೇಮಸ್ ಆಗಿದ್ದ ವಂಶಿಕಾಳ ಗೆಳತಿ ಮಹಿತಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿದ್ದಾಳೆ.
ಇದನ್ನೂ ಓದಿ:ಚಳಿಗಾಲ, ಹಲವು ಆರೋಗ್ಯ ಸಮಸ್ಯೆಗಳಿಗೆ ಆಹ್ವಾನ ನೀಡುತ್ತದೆ. ಈ ವಿಷಯಗಳಲ್ಲಿ ನೀವು ತುಂಬಾ ಹುಷಾರಾಗಿರಿ
ಆದರೇ ಇದೀಗ ಚುಕ್ಕಿತಾರೆ ಸೀರಿಯಲ್ ಖ್ಯಾತಿಯ ಮಹಿತಾ ಅಭಿಮಾನಿಗಳಿಗೆ ಗುಡ್ನ್ಯೂಸ್ವೊಂದನ್ನು ಕೊಟ್ಟಿದ್ದಾರೆ. ಹೌದು, ಚುಕ್ಕಿತಾರೆ ಬೆನ್ನಲ್ಲೇ ಮತ್ತೊಂದು ಹೊಚ್ಚ ಹೊಸ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ ಈ ಪುಟ್ಟ ಪೋರಿ. ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಕಮಾಲ್ ಮಾಡಿದ್ದ ಮಹಿತಾ ತಾಯಿಯ ಜೊತೆ ಮಸ್ತ್ ರೀಲ್ಸ್, ಕಾಮಿಡಿ ಮಾಡ್ತಾ ಇರುತ್ತಾಳೆ. ಈಗ ಜೀ ಕನ್ನಡದಲ್ಲಿ ಮತ್ತೊಂದು ಹೊಸ ಧಾರಾವಾಹಿ ನಾ ನಿನ್ನ ಬಿಡಲಾರೆ ಅತೀ ಶೀಘ್ರದಲ್ಲಿ ಬರುತ್ತಿದೆ. ಬಾಲನಟಿ ಮಹಿತಾ ಅಭಿನಯಿಸುತ್ತಿದ್ದಾರೆ.
View this post on Instagram
ನಾ ನಿನ್ನ ಬಿಡಲಾರೆ ಸೀರಿಯಲ್ನ ಹೊಸ ಪ್ರೋಮೋವನ್ನು ಮಹಿತಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋ ಜೊತೆಗೆ ನಿಮ್ಮ ಮುಂದೆ ಅತಿ ಶೀಘ್ರದಲ್ಲಿ, ಪ್ರೀತಿ ಕೊಟ್ಟು ಹರಸಿ ಹಾರೈಸಿ ಅಂತ ಬರೆದುಕೊಂಡಿದ್ದಾಳೆ. ಸದ್ಯ ಇದೇ ಪ್ರೋಮೋ ನೋಡಿದ ಅಭಿಮಾನಿಗಳು ಪುಟಾಣಿ ಮಹಿತಾಗೆ ಶುಭ ಹಾರೈಸುತ್ತಿದ್ದಾರೆ. ಜೊತೆಗೆ ಮಹಿ ಪುಟ್ಟ ಒಳ್ಳೆಯದಾಗಲಿ ಕಂದ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಚುಕ್ಕಿ ತಾರೆ ಧಾರಾವಾಹಿಯಲ್ಲಿ ಪುಟ್ಟ ಪ್ರತಿಭೆ ಮಹಿತ ನಟಿಸಿದ್ದರು. ಈ ಪುಟ್ಟ ಪೋರಿ ಮಹಿತಾಳ ಮಾತುಗಳು ವೀಕ್ಷಕರಿಗೆ ತುಂಬಾ ಇಷ್ಟವಾಗಿ ಬಿಟ್ಟಿತ್ತು. ಆಕೆಯ ಅಸಹಜ ನಟನೆ, ಸ್ಟೈಲ್ ಕಮಾಲ್ ಮಾಡಿತ್ತು. ಮಹಿತಾಳ ಕನ್ವರ್ ಲಾಲ್ ಸ್ಟೈಲ್ ನೋಡಿ ಜಡ್ಜ್ ಫುಲ್ ಶಾಕ್ ಆಗಿದ್ದಾರೆ. ಜೊತೆಗೆ ಆಕೆಯ ನಟನೆಗೆ ಫಿದಾ ಆಗಿಬಿಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ