ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ ಈ ಸ್ಟಾರ್​.. ಶಿವನಿಗೆ ಶರಣು ಅಂದವರು ಯಾರು ಗೆಸ್​ ಮಾಡಿ!

author-image
Veena Gangani
Updated On
ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ ಈ ಸ್ಟಾರ್​.. ಶಿವನಿಗೆ ಶರಣು ಅಂದವರು ಯಾರು ಗೆಸ್​ ಮಾಡಿ!
Advertisment
  • ಅದ್ಭುತ ಅಭಿನಯದ ಮೂಲಕವೇ ಸಖತ್ ಫೇಮಸ್ ಇವರು​
  • ಜಸ್ಟ್​ 23 ವರ್ಷಕ್ಕೆ ಫೇಮಸ್​ ಆಗಿದ್ದಾರೆ ಕನ್ನಡದ ಈ ಸ್ಟಾರ್​
  • ಆಗಾಗ ಹೆಣ್ಣು ಮಗಳ ಅವತಾರದಲ್ಲಿಯೇ ಕಾಣಿಸಿಕೊಳ್ಳುತ್ತಾರೆ

ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ಎಲ್ಲರ ಮನೆ ಮಾತಾಗಿದ್ದಾರೆ ರಾಘವೇಂದ್ರ. ಜಸ್ಟ್​ 23 ವರ್ಷದ ಯುವ ನಟ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ರು. ಗಿಚ್ಚಿ ಗಿಲಿಗಿಲಿ ಮೂಲಕ ಸಖತ್​ ಫೇಮಸ್​ ಆಗಿದ್ದ ರಾಗಿಣಿ ಅಲಿಯಾಸ್ ರಾಘವೇಂದ್ರ ಆಗಾಗ ಹೆಣ್ಣುಮಗಳ ಅವತಾರದಲ್ಲಿಯೇ ಕಾಣಿಸಿಕೊಳ್ಳುತ್ತಾ ಇರುತ್ತಾರೆ.

ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಭಾರತೀಯ ವಿದ್ಯಾರ್ಥಿ ಮೇಲೆ ಅಮಾನುಷ ಹಲ್ಲೆ, ಜನಾಂಗೀಯ ನಿಂದನೆ

publive-image

ಬರೀ ಹೆಣ್ಣು ಮಕ್ಕಳ ವೇಶದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಾಘವೇಂದ್ರ ರಾಗಿಣಿ ಅಂತಲೇ ಫೇಮಸ್​ ಆಗಿದ್ದಾರೆ. ಈಗ ಯಾವ ಹೀರೋಯಿನ್​ಗೂ ಕಮ್ಮಿ ಇಲ್ಲ ಅನ್ನೋ ರೀತಿಯಲ್ಲಿ ಸೀರೆಯನ್ನು ತೊಟ್ಟು, ಏಳು ಶಿವ ಏಳು ಶಿವ ಕನ್ನಡದ ಸೂಪರ್​ ಹಿಟ್​ ಸಾಂಗ್​ಗೆ ರೀಲ್ಸ್​ ಮಾಡಿದ್ದಾರೆ. ಇದೇ ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಇದೇ ವಿಡಿಯೋ ನೋಡಿದ ರಾಘವೇಂದ್ರ ಅವರ ಅಭಿಮಾನಿ, ಸಕಲ ಕಲಾ ವಲ್ಲಭ ನಮ್ಮ ರಾಘು, ನಿನ್ನ ನೋಡೋದೆ ಒಂದು ಚಂದ, ಆ ದೇವರು ನಿಮಗೆ ಯಾಕೆ ಹೆಣ್ಣಿನ ಜನ್ಮ ಕೊಟ್ಟಿಲ್ಲ. ಮುಂದಿನ ಜನ್ಮದಲ್ಲಿ ಖಂಡಿತ ಹೆಣ್ಣು ಆಗಿ ಹುಟ್ಟಿ ಅಣ್ಣಾ, ಹೆಣ್ಮಕ್ಳು ನಾಚ್ಕೋಬೇಕು ಹಾಗಿದೆ ವಿಡಿಯೋ, ನಿಮ್ಮನ್ನ ನೋಡಲು ಎರಡು ಕಣ್ಣು ಸಾಲುತ್ತಿಲ್ಲ ಅಣ್ಣ ಅಷ್ಟು ಚೆನ್ನಾಗಿ ಕಾಣುತ್ತಿದ್ದೀರಾ ಅಂತ ಕಾಮೆಂಟ್ಸ್​ಗಳ ಸುರಿಮಳೆಗೈದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment