newsfirstkannada.com

×

ಗಿಚ್ಚಿ ಗಿಲಿಗಿಲಿ ಗೆದ್ದ ಹುಲಿ ಕಾರ್ತಿಕ್, ರನ್ನರ್-ಅಪ್ ಯಾರು? ಸಿಕ್ಕ ಹಣವೆಷ್ಟು?

Share :

Published September 16, 2024 at 8:06am

    ಮಲೆನಾಡಿನ ಕಲಾವಿದ ಹುಲಿ ಕಾರ್ತಿಕ್​ಗೆ ವಿನ್ನರ್​ ಪಟ್ಟ

    ಬರೋಬ್ಬರಿ 8 ತಿಂಗಳ ಕಾಲ ಮೂಡಿ ಬಂದ ಶೋ ಅಂತ್ಯ

    ಗಿಚ್ಚಿ ಗಿಲಿಗಿಲಿ ಸೀಸನ್ 3 ರನ್ನರ್​ ಅಪ್ ಯಾರು ಗೊತ್ತಾ?

ಕನ್ನಡ ಕಿರುತೆರೆಯಲ್ಲಿ ಬ್ಯಾಕ್ ಟು ಬ್ಯಾಕ್ ರಿಯಾಲಿಟಿ ಶೋ ಬರ್ತಾನೆ ಇರುತ್ತವೆ. ವೀಕೆಂಡ್ ಬಂತು ಅಂದರೆ ಸಾಕು ಎಲ್ಲರೂ ರಿಯಾಲಿಟಿ ಶೋಗಳನ್ನ ನೋಡಲು ಕುಳಿತುಕೊಳ್ತಾರೆ. ಪ್ರತಿ ವೀಕೆಂಡ್​ನಲ್ಲಿ ನಕ್ಕು ನಗಿಸ್ತಾ ಇದ್ದಿದ್ದು ಗಿಚ್ಚಿ ಗಿಲಿಗಿಲಿ ಶೋ. ಪ್ರೇಕ್ಷಕರ ಹೊಟ್ಟೆ ಹುಣ್ಣಾಗುವಂತೆ ನಗಿಸುವ ಸಲುವಾಗಿಯೇ ಗಿಚ್ಚಿ ಗಿಲಿಗಿಲಿ ವೇದಿಕೆ ಸೃಷ್ಟಿಯಾಗಿತ್ತು.

ಇದನ್ನೂ ಓದಿ: ಇದು ಕಣ್ರೋ ಮಜಾ ಅಂದ್ರೆ.. ತಾಂಡವ್​ ಮದ್ವೆ ನಿಲ್ಲಿಸಲು ಟ್ರಾಕ್ಟರ್​ನಲ್ಲಿ ಮಂಟಪಕ್ಕೆ ಎಂಟ್ರಿ ಕೊಟ್ಟ ಕುಸುಮಾ

ಪ್ರತಿ ಎಪಿಸೋಡ್​ನಲ್ಲಿ ಕೂಡ ತುಂಬಾ ಡಿಫರೆಂಟ್ ಆಗಿ ಸ್ಕಿಟ್​ಗಳು ಮೂಡಿ ಬರುತ್ತಿತ್ತು. ಈಗ ಜನಮೆಚ್ಚಿದ ಕಾಮಿಡಿ ಶೋ ಅಂತ್ಯ ಕಂಡಿದೆ. ಗಿಚ್ಚಿ ಗಿಲಿಗಿಲಿ ಸೀಸನ್​ 1 ರಿಂದ ಸೀಸನ್​ 3ರವರೆಗೂ ಯಶಸ್ವಿಯಾಗಿ ಮೂಡಿ ಬಂದಿದೆ. ಬರೋಬ್ಬರಿ 8 ತಿಂಗಳ ಕಾಲ ಸುದೀರ್ಘವಾಗಿ ಮೂಡಿಬಂದಿದ್ದ  ಗಿಚ್ಚಿ ಗಿಲಿಗಿಲಿ ಸೀಸನ್​ 3 ಮುಕ್ತಾಯಗೊಂಡಿದೆ.

ನಿನ್ನೆಯಷ್ಟೇ ಕಲರ್ಸ್ ಕನ್ನಡದ ಗಿಚ್ಚಿಗಿಲಿಗಿಲಿ ಸೀಸನ್ 3ರ ಗ್ರ್ಯಾಂಡ್​ ಫಿನಾಲೆ ಅದ್ಧೂರಿಯಾಗಿ ಮೂಡಿ ಬಂದಿದೆ. ಗಿಚ್ಚಿಗಿಲಿಗಿಲಿ ಸೀಸನ್ 3ರ ವಿಜೇತರಾಗಿ ಹುಲಿ ಕಾರ್ತಿಕ್ ಹೊರಹೊಮ್ಮಿದ್ದಾರೆ. ಕಲರ್ಸ್ ಸೂಪರ್‌ ನಲ್ಲಿ ಮೂಡಿ ಬರುತ್ತಿದ್ದ ಮಜಾ ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾರ್ತಿಕ್‌ ಹಾಗೇ ಮುಂದುವರೆದು 8 ವರ್ಷದ ಬಳಿಕ ಕಲರ್ಸ್ ನ ಕಾಮಿಡಿ ನಟನಾಗಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಹೌದು, ಇಷ್ಟು ದಿನ ತಮ್ಮ ಕಾಮಿಡಿ ಮೂಲಕವೇ ವೀಕ್ಷಕರಿಗೆ ಕಚಗುಳಿ ನೀಡುತ್ತಿದ್ದ ಹುಲಿ ಕಾರ್ತಿಕ್​ ವಿನ್ನರ್​ ಪಟ್ಟ ತಮ್ಮದಾಗಿಸಿಕೊಂಡಿದ್ದಾರೆ. 10 ಲಕ್ಷ ರೂಗಳ ಚಿನ್ನದ ಬೆಲ್ಟ್ ಅನ್ನು ಹುಲಿ ಕಾರ್ತಿಕ್‌ ಗೆದ್ದಿದ್ದಾರೆ. ಬಿಗ್​​ಬಾಸ್​ ಸೀಸನ್​ 10 ಮೂಲಕ ಖ್ಯಾತಿ ಪಡೆದುಕೊಂಡಿದ್ದ ತುಕಾಲಿ ಪತ್ನಿ ಮಾನಸ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಮಾನಸ ಅವರು 3 ಲಕ್ಷ ರೂ ಬಹುಮಾನ ಗೆದ್ದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಗಿಚ್ಚಿ ಗಿಲಿಗಿಲಿ ಗೆದ್ದ ಹುಲಿ ಕಾರ್ತಿಕ್, ರನ್ನರ್-ಅಪ್ ಯಾರು? ಸಿಕ್ಕ ಹಣವೆಷ್ಟು?

https://newsfirstlive.com/wp-content/uploads/2024/09/gicchi-gili-gili.jpg

Load More