/newsfirstlive-kannada/media/post_attachments/wp-content/uploads/2024/10/gagana.jpg)
ಕಾಮಿಡಿ ಕಿಲಾಡಿಗಳು ಸೀಸನ್ 4ರ ಮೂಲಕ ಹೊಸ ಜರ್ನಿ ಶುರು ಮಾಡಿದ ನಟರಾಜ್ ಅಂದ್ರೆ ಅದು ಗಿಲ್ಲಿ ನಟ. ಸದ್ಯ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಗಿಲ್ಲಿ ನಟ. ಅದರಲ್ಲೂ ಗಿಲ್ಲಿ ಹಾಗೂ ಗಗನಾ ಕಾಂಬಿನೇಷನ್ಗೆ ವೀಕ್ಷಕರಂತೂ ಫಿದಾ ಆಗಿಬಿಟ್ಟಿದ್ದಾರೆ. ಈ ಇಬ್ಬರ ಪ್ರೀತಿಯ ಕಾಮಿಡಿ ನೋಡುಗರಲ್ಲಿ ಕಚಗುಳಿ ಇಡೋದಕ್ಕೇ ಕಾರಣ ಆಗಿದೆ.
ಇದನ್ನೂ ಓದಿ:BIG BREAKING: ಬಿಗ್ ಬಾಸ್‌ಗೆ ಗುಡ್ ಬೈ.. ಕೊನೆಗೂ ಮನೆಯಿಂದ ಹೊರ ಬಂದ ಜಗದೀಶ್!
ಕಾಮಿಡಿ ಕಿಲಾಡಿಗಳು ವೇದಿಕೆಯಿಂದ ಭರ್ಜರಿ ಬ್ಯಾಚುಲರ್ಸ್ಗೆ ಎಂಟ್ರಿ ಕೊಟ್ಟು ಫಸ್ಟ್ ರನ್ನರ್ ಅಪ್ ಆಗಿದ್ರು ಗಿಲ್ಲಿ ಹಾಗೂ ನಟಿ ಯಶೋಧ. ಗಿಲ್ಲಿ ಮಾಡೋ ಪ್ರಾಪರ್ಟಿ ಕಾಮಿಡಿಗೆ ಯಶೂ ಸಾಥ್ ಕೊಡುತ್ತಿದ್ದರು. ನಂತರ ಮಹಾನಟಿ ಮಾತಿನ ಮಲ್ಲಿ ಆರಾಧನಾ ಹಾಗೂ ಗಿಲ್ಲಿ ಕಾಂಬಿನೇಷನ್ನ ಗಂಡ್ಮಕ್ಕಳು ಹೆಚ್ಚಾ? ಹೆಣ್ಮಕ್ಕಳು ಹೆಚ್ಚಾ? ಎಂಬ ಟಾಪಿಕ್ ಗಿಲ್ಲಿ ಹೊಡೆದ ಡೈಲಾಗ್ಗಳು ಈಗಲೂ ಹುಡುಗರ ಸ್ಟೇಟಸ್ನಲ್ಲಿ ರಾರಾಜಿಸುತ್ತಿವೆ. ಅಂತಹ ಅದ್ಭುತ ಸೃಷ್ಟಿಸಿದ್ರು ಗಿಲ್ಲಿ ನಟ.
ಅಲ್ಲಿಂದ ಡಿಕೆಡಿಗೆ ಗೆಸ್ಟ್ ಆಗಿ ಬಂದಿದ್ದ ಗಿಲ್ಲಿ ಹೆಜ್ಜೆ ಹಾಕಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಅಷ್ಟೇಯಲ್ಲ ಖಾಯಂ ಆಗಿ ಡಿಕೆಡಿಯಲ್ಲಿ ಉಳಿದುಕೊಂಡರು. ಪಾರ್ಟಿ ಕಾಮಿಡಿ ಮಾಡೋಕೆ ಆಗಾಗ ಗಗನನ್ನ ಸ್ಟೇಜ್ಗೆ ಕರೆಯುತ್ತಿದ್ದ ಗಿಲ್ಲಿ. ಗಗನಾಗೆ ಲವ್ ಪ್ರಪೋಸ್ ಮಾಡ್ತಾ ಮಾಡ್ತಾ ಸ್ಪಾಟ್ನಲ್ಲೇ ಕಾಮಿಡಿ ಮಾಡೋಕೆ ಶುರು ಮಾಡಿದ್ರು. ಗಿಲ್ಲಿ ಸ್ಟೇಜ್ಗೆ ಬಂದ್ರೇ ಅಲ್ಲಿ ಗಗನಾ ಇರಲೇಬೇಕು. ಗಗನಾ ಸ್ಟೇಜ್ಗೆ ಬಂದ್ರೇ ಗಿಲ್ಲಿ ಹಾಜರ್ ಆಗಲೇಬೇಕು. ಅಷ್ಟಮಟ್ಟಿಗೆ ಈ ಜೋಡಿ ಫೇಮಸ್ ಆಗಿದೆ.
ಇತ್ತೀಚೆಗೆ ನ್ಯೂಸ್ ಫಸ್ಟ್ಗೆ ಸಂದರ್ಶನ ಕೊಟ್ಟಿರೋ ಗಿಲ್ಲಿ, ನಿಮ್ದು ಗಗನಾ ಲವ್ ಸ್ಟೋರಿ ನಿಜಾನಾ ಅಂತ ಕೇಳಿದ್ದಕ್ಕೆ, ನಾನ್ ಲವ್ ಮಾಡ್ತೀನಿ ಬಟ್ ನಮ್ಮನ್ನ ಲವ್ ಮಾಡೋರು ಬೇಕಲ್ವಾ ಅಂತ ನಗೆ ಚಟಾಕಿ ಹಾರಿಸಿದ್ರು. ಮತ್ತೇ ಮುಂದುವರೆದು ಕಾಮಿಡಿಗೋಸ್ಕೋರ ಮಾಡ್ತೀನಿ. ಅದಕ್ಕೆ ಗಗನಾ ಕೂಡ ಸಾಥ್ ಕೊಡ್ತಾಳೆ ಅಂತ ಉತ್ತರ ಕೊಟ್ಟಿದ್ದಾರೆ. ಗಗನಾ ಅಣ್ಣ ಬಂದಾಗಲೂ ಕಾಮಿಡಿ ಚನ್ನಾಗಿ ಮಾಡ್ತಿದ್ದಿರಾ ಮಾಡಿ ಅಂದಿದ್ದರು. ಇನ್ನೂ ಗಿಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಹೋದ್ರು ಗಗನಾ ಎಲ್ಲಿ ಅಂತ ಕೇಳ್ತಾರಂತೆ. ಗಿಲ್ಲಿ ಗಗನಾ ಅಂತ ಜೋರಾಗಿ ಕೂಗತಾರಂತೆ ಜನ.
ಇದನ್ನೂ ಓದಿ: ಹಾವು ಕೊಂ*ದ 24 ಗಂಟೆಯಲ್ಲೇ ಗುಡಿ ನಿರ್ಮಾಣ.. ಆದ್ರೂ ಮಕ್ಕಳಿಗೆ ಪದೇ ಪದೆ ಸರ್ಪ ಕಾಣುತ್ತಿರುವುದು ಏಕೆ?
ಗಿಲ್ಲಿ ನಟ ಮೂಲತಃ ಮಂಡ್ಯ ಜಿಲ್ಲೆಯವರು. ನಲ್ಲಿ ಮೂಳೆ ಕಂಟೆಂಟ್‌ಯಿಂದ ಫೇಮಸ್ ಆದ ಇವರು, ಡೈರೆಕ್ಟರ್ ಆಗಬೇಕು ಎಂದುಕೊಂಡಿದ್ದರಂತೆ. ಆದರೆ ಸದ್ಯ ಡಿಕೆಡಿಯಲ್ಲಿ ತಮ್ಮ ಕಾಮಿಡಿ ಮೂಲಕವೇ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಡಿಕೆಡಿ ವೇದಿಕೆ ಮೇಲೆ ಮಾಡುವ ಕಾಮಿಡಿ ಮ್ಯಾನರಿಸಂಗೆ ಕನ್ನಡದ ಸ್ಟಾರ್ ನಟರೇ ಫಿದಾ ಆಗಿಬಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ