/newsfirstlive-kannada/media/post_attachments/wp-content/uploads/2025/04/gilli.jpg)
ಗಿಲ್ಲಿ ಕನ್ನಡ ಕಿರುತೆರೆಯಲ್ಲಿ ಪ್ರಾಪರ್ಟಿ ಕಾಮಿಡಿಯಿಂದಲೇ ಫೇಮಸ್ ಆಗಿರುವ ಕಿಲಾಡಿ ನಟ. ತನ್ನ ಪಂಚಿಂಗ್ ಡೈಲಾಗ್‌ಗಳ ಮೂಲಕ ಗಿಲ್ಲಿ ಕಿರುತೆರೆ ವೀಕ್ಷಕರ ಮನಗೆದ್ದಿದ್ದಾನೆ. ಕಾಮಿಡಿ ಕಿಲಾಡಿಗಳು ಸೀಸನ್ 4ರ ಮೂಲಕ ಹೊಸ ಜರ್ನಿ ಶುರು ಮಾಡಿದ್ದು ಗಿಲ್ಲಿ ನಟ.
ಇದನ್ನೂ ಓದಿ: ಕೇವಲ ಕಂಪ್ಯೂಟರ್ ಸೈನ್ಸ್ ಮಾತ್ರವಲ್ಲ.. ಇಂಜಿನಿಯರಿಂಗ್ನಲ್ಲಿ ಇವೆ ಸಾಕಷ್ಟು ಸ್ಪೆಷಲ್ ಕೋರ್ಸ್ಗಳು
ಸದ್ಯ ಸೋಷಿಯಲ್ ಮೀಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ ಗಿಲ್ಲಿ ನಟ. ಅದರಲ್ಲೂ ಗಿಲ್ಲಿ ಹಾಗೂ ಗಗನಾ ಕಾಂಬಿನೇಷನ್ಗೆ ವೀಕ್ಷಕರಂತೂ ಫಿದಾ ಆಗಿಬಿಟ್ಟಿದ್ದಾರೆ. ಈ ಇಬ್ಬರ ಪ್ರೀತಿಯ ಕಾಮಿಡಿ ನೋಡುಗರಲ್ಲಿ ಕಚಗುಳಿ ಇಡುತ್ತಿದೆ. ಡಿಕೆಡಿ ಶೋನಲ್ಲಿ ಗಗನಾ ಐ ಲವ್ ಯೂ ಅಂತ ಹೇಳುತ್ತಾ ಓಡಾಡಿಕೊಂಡಿದ್ದ ಗಿಲ್ಲಿ ನಟ ಇದೀಗ ಭರ್ಜರಿ ಬ್ಯಾಚುಲರ್ಸ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.
ಗಿಲ್ಲಿ ನಟ ಸ್ಟೇಜ್ ಮೇಲೆ ಯಾವಾಗಲೂ ಗಗನ ಅವರ ಕಾಲೆಳೆಯುತ್ತಾರೆ. ಗಿಲ್ಲಿ ನಟ ಗಗನ ಹಾಗೂ ಡ್ರೋನ್ ಪ್ರತಾಪ್ ಇದ್ದ ವೇದಿಕೆಗೆ ಬಂದು ಮಾಸ್ ಡೈಲಾಗ್ ಹೊಡೆದ್ದಾರೆ. ವಿಶೇಷ ಎಂದರೆ ಗಿಲ್ಲಿ ನಟ ರಕ್ತ ಕಣ್ಣೀರು ಸಿನಿಮಾದ ಕಾಂತ ಡೈಲಾಗ್ ಅನ್ನು ತನ್ನದೇಯಾದ ಪದಗಳನ್ನು ಸೇರಿಸಿ ಹೇಳಿದ್ದಾರೆ. ಇನ್ನೂ, ಗಿಲ್ಲಿ ನಟನ ಮಾಸ್ ಡೈಲಾಗ್ ಕೇಳಿ ಎಲ್ಲರೂ ಫುಲ್ ಶಾಕ್ ಆಗಿದ್ದಾರೆ. ಕೊನೆಯದಾಗಿ ಗಗನಾ ಐ ಲವ್ ಯೂ ಅಂತ ಹೇಳಿ ಹೊರಟು ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ