‘ಹಲ್ಲು ಸರಿ ಇಲ್ಲ ಅಂತ ರಿಜೆಕ್ಟ್ ಮಾಡಿದ್ರು’.. ಗಿಣಿರಾಮ ಸೀರಿಯಲ್ ನಟಿ ನಯನಾ ಫೇಮಸ್​ ಆಗಿದ್ದು ಹೇಗೆ?

author-image
Veena Gangani
Updated On
‘ಹಲ್ಲು ಸರಿ ಇಲ್ಲ ಅಂತ ರಿಜೆಕ್ಟ್ ಮಾಡಿದ್ರು’.. ಗಿಣಿರಾಮ ಸೀರಿಯಲ್ ನಟಿ ನಯನಾ ಫೇಮಸ್​ ಆಗಿದ್ದು ಹೇಗೆ?
Advertisment
  • ರಿಜೆಕ್ಟ್​ ಮಾಡಿದವರು ಮತ್ತೆ ಹೀರೋಯಿನ್ ಚಾನ್ಸ್​ ಕೊಟ್ರು!
  • ಸೀರಿಯಲ್ ಶೂಟಿಂಗ್‌ನಲ್ಲಿ ನಡೆದ ಕಹಿ ಘಟನೆ ನೆನೆದ ನಟಿ
  • ಗಿಣಿರಾಮ ಧಾರಾವಾಹಿ ಮೂಲಕ ಫೇಮಸ್ ಆಗಿದ್ದ ನಯನಾ

ಉತ್ತರ ಕರ್ನಾಟಕ ಭಾಷೆಯ ಸೊಗಡನ್ನ ಹೊಂದಿದ್ದ ಗಿಣಿರಾಮ ಸೀರಿಯಲ್​​ ಅನ್ನು ಎಲ್ಲರೂ ಮೆಚ್ಚಿಕೊಂಡಿದ್ದರು. ಬಂದ ಮೊದಲ ಎಪಿಸೋಡ್​ನಿಂದ ಗಿಣಿರಾಮ ಧಾರಾವಾಹಿಯು ಎಲ್ಲರ ನೆಚ್ಚಿನ ಸೀರಿಯಲ್ ಆಗಿತ್ತು.

ಇದನ್ನೂ ಓದಿ: Boys Vs Girls ಶೋಯಿಂದ ಆಚೆ ಬಂದ್ರಾ ಬಿಗ್​ಬಾಸ್​ ಖ್ಯಾತಿಯ ಭವ್ಯಾ ಗೌಡ? ವೀಕ್ಷಕರು ಫುಲ್​ ಶಾಕ್!

ಬಣ್ಣದ ಜಗತ್ತು ನೋಡೋಕೆ ತುಂಬಾನೇ ಕಲರ್​ಫುಲ್​. ಆದ್ರೆ, ಅದಕ್ಕೆ ಇನ್ನೊಂದು ಮುಖವೇ ಇದೇ. ಟಿವಿಯಲ್ಲಿ ಕಾಣಿಸುವಂತೆ ಅಲ್ಲಿ ಸುಂದರ ವಾತಾವರಣ ಇರೋದಿಲ್ಲ. ಕಿವಿಗೆ ಇಂಪಾಗುವ ಡೈಲಾಗ್‌ಗಳು ಇರೋದಿಲ್ಲ. ಪರದೆಯಲ್ಲಿ ಕಾಣಿಸುವಂತಹ ಶುಭ್ರತೆ ಅಂತೂ ಇರೋದೇ ಇಲ್ಲ ಅಂತಾ ಕಿರುತೆರೆಯ ಜನಪ್ರಿಯ ನಟಿ ಆರೋಪಗಳ ಮಳೆ ಸುರಿದಿದ್ದಾರೆ.

ಹೌದು, ನಯನಾ ನಾಗರಾಜ್‌ ಗಿಣಿರಾಮ ಸೀರಿಯಲ್​​ ಮೂಲಕ ಅತಿ ಹೆಚ್ಚು ಖ್ಯಾತಿ ಪಡೆದುಕೊಂಡಿದ್ದರು. ಆದರೆ ಇದೀಗ ಸೀರಿಯಲ್​ನಿಂದ ನಟಿ ಬ್ಯಾನ್​ ಆಗಿದ್ದಾರಂತೆ. ಗಿಣಿರಾಮ  ಸೀರಿಯಲ್​ ಮಾಡೋವಾಗ ಎಷ್ಟು ಮಾನಸಿಕವಾಗಿ ಕುಗ್ಗಿದ್ದೆ ಅಂತ ಖುದ್ದು ನಯನಾ ನಾಗರಾಜ್‌ ಅವರೇ ಕೇಳಿಕೊಂಡಿದ್ದಾರೆ. ಅದರಲ್ಲೂ ನಟಿ ನಯನಾ ನಾಗರಾಜ್‌ ಎಷ್ಟು ಆಡಿಷನ್ ಕೊಟ್ಟರು ರಿಜೆಕ್ಟ್​ ಆಗುತ್ತಿದ್ದರಂತೆ. ಖಾಸಗಿ ಸಂದರ್ಶನದಲ್ಲಿ ಮಾತಾಡಿದ ನಟಿ ನಯನಾ ನಾಗರಾಜ್‌ ಅವರು, ಪಾಪ ಪಾಂಡು ಧಾರಾವಾಹಿಯಲ್ಲಿ ಚಾರು ಪಾತ್ರಕ್ಕೆ ಆಡಿಷನ್​ ಮಾಡು ಅಂತ ಹೇಳಿದ್ದರು. ಆಗ ಪದೇ ಪದೇ ಕರೆದು ಕರೆದು.. ಆಡಿಷನ್​ ಕೊಡಿಸಿದ್ದರು. ಆಗ ನಾನು ಸರ್​ಗೆ ಕೇಳಿದೆ, ಆಗ ಚಂದ್ರ ಸರ್​ ಹೇಳಿದ್ರು, ನನಗೆ ನೀನು ಚಾರು ಪಾತ್ರ ಮಾಡಬೇಕು ಅಂತ ಆಸೆ ಇದೆ. ಆದ್ರೆ ನಿನ್ನ ಹಲ್ಲು ಸರಿ ಇಲ್ಲ ಅಂತ ಚಾನೆಲ್​ ಅವರು ಹೇಳುತ್ತಿದ್ದಾರೆ. ಇನ್ನೊಂದು ಹುಡುಗಿಗೆ ಕೂದಲೇ ಇಲ್ಲ, ನೋಡೋದಕ್ಕೆ ಸುಮಾರ್ ಆಗಿ ಇದ್ದಾಳೆ ಏಕೆ ಬೇಕು ಅಂತ ಹೇಳಿದ್ದಾರೆ ಅಂತ ಹೇಳಿದ್ರು. ಆಗ ನನಗೆ 9 ಸ್ಕ್ರೀನ್​ ಟೆಸ್ಟ್​ ಕೊಡಿಸಿದ್ದರು. ಅಲ್ಲಿಂದ ನನ್ನ ಜರ್ನಿ ಶುರು ಆಯ್ತು. ಯಾವಾಗ ನನ್ನ ಹಲ್ಲು ಸರಿ ಇಲ್ಲ ಅಂತ ರಿಜೆಕ್ಟ್​ ಮಾಡಿದವರು ಮತ್ತೊಂದು ಟಾಪ್​ ಸೀರಿಯಲ್​ಗೆ ಅವರೇ ಕರೆದ್ರು. ಇದರ ಬಗ್ಗೆ ನನಗೆ ಹೆಮ್ಮೆ ಇದೆ ಅಂತ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment