/newsfirstlive-kannada/media/post_attachments/wp-content/uploads/2025/05/ninagagi.jpg)
ನಿನಗಾಗಿ ಧಾರಾವಾಹಿ ಸಿನಿಮಾ ರೀತಿ ಪ್ರೋಮೋ ಮೂಲಕ ಸೌಂಡ್ ಮಾಡ್ತಿದೆ. ಹೊಸ ಅಧ್ಯಾಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಪ್ರಾರಂಭದಿಂದಲೂ ನಿನಗಾಗಿ ವಿಭಿನ್ನತೆಯನ್ನ ಕಟ್ಟಿಕೊಡ್ತಿದೆ. ನಾಯಕಿ ಸೂಪರ್ ಸ್ಟಾರ್ ರಚಿತಾ ಲೈಫ್ ನರಕ ಆಗಿರುತ್ತೆ. ಅದರಿಂದ ಹೇಗೆ ರಚ್ಚು ಹೊರ ಬರ್ತಾಳೆ, ನಾಯಕ ಜೀವ ರಚ್ಚುಗೆ ಯಾವ ರೀತಿ ಸಾಥ್ ಕೊಡ್ತಾನೆ ಅನ್ನೋದರ ಮೇಲೆ ಸ್ಟೋರಿ ಸಾಗುತ್ತಿತ್ತು. ರಚ್ಚು-ಜೀವ ಮ್ಯಾರೇಜ್ ಸ್ಟೋರಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಥೆನ ಲ್ಯಾಗ್ ಮಾಡ್ದೇ, ಧಾರಾವಾಹಿಗೆ ಹೊಸ ಆಯಾಮ ನೀಡಿದ್ದಾರೆ ನಿರ್ದೇಶಕರು.
ಇದನ್ನೂ ಓದಿ: ಜಸ್ಟ್ 7 ತಿಂಗಳಲ್ಲಿ 25 ಮದುವೆ.. 23 ವರ್ಷದ ಸುಂದರಿ ಸಂಚು ಬಾಲಿವುಡ್ ಸಿನಿಮಾನೂ ಮೀರಿಸಿದ ಸ್ಟೋರಿ!
ಇಷ್ಟು ದಿನ ಜೀವ ಯಾರು ಏನು? ಹಿನ್ನೆಲೆ ಬಗ್ಗೆ ಮಾಹಿತಿ ಇರ್ಲಿಲ್ಲ. ಈಗ ಜೀವನ ಪ್ಲ್ಯಾಶ್ ಬ್ಯಾಕ್ ಸ್ಟೋರಿ ತೆರೆದುಕೊಳ್ತಿದೆ. ಎಲ್ಲದಕ್ಕಿಂದ ಹೆಚ್ಚಾಗೆ ಪ್ರೋಮೋಗಳು ಅದ್ಭುತವಾಗಿ ಮೂಡಿಬಂದಿದ್ದು, ಪಕ್ಕಾ ಮಾಸ್ ಆಗಿರೋ ಒಂದೊಳ್ಳೆ ಕಮರ್ಸಿಯಲ್ ಸಿನಿಮಾ ನೋಡಿದ ಅನುಭವ ಕೊಡ್ತಿವೆ. ವಿಶೇಷ ಅಂದ್ರೇ ಈ ಹಿಂದೆ ಗಿಣಿರಾಮ ಧಾರಾವಾಹಿಯಲ್ಲಿ ಅಮ್ಮ ಮಗನಾಗಿ ಅಭಿನಯಿಸಿದ್ದ ಸುಜಾತ ಕುರಹಟ್ಟಿ ಹಾಗೂ ರಿತ್ವಿಕ್ ಮಠದ್ ಮತ್ತೊಮ್ಮೆ ತಾಯಿ ಮಗನಾಗಿ ಬಣ್ಣ ಹಚ್ಚಿದ್ದಾರೆ.
ಇನ್ನು ಜೀವ ತಂಗಿ ದೇವಿ ಪಾತ್ರಕ್ಕೆ ಅಕ್ಷಯ ರಾಘವನ್ ಬಣ್ಣ ಹಚ್ಚಿದ್ದಾರೆ. ಇವರು ಲಕ್ಷ್ಮೀ ಟಿಫಿನ್ ರೂಮ್ ಧಾರಾವಾಹಿಯಲ್ಲಿ ಮುಖ್ಯವಾದ ಪಾತ್ರ ಮಾಡಿದ್ರು. ವರ್ಷದ ನಂತರ ಮತ್ತೆ ನಿನಗಾಗಿ ಮೂಲಕ ಮರಳಿದ್ದಾರೆ. ಅದೇ ರೀತಿ ರಾಣ ಪಾತ್ರಧಾರಿ ಪ್ರದೀಪ್ ರಾಜ್ ಅಭಿನಯಿಸುತ್ತಿದ್ದಾರೆ. 10 ವರ್ಷಗಳ ಬಳಿಕ ಕಮ್ಬ್ಯಾಕ್ ಆಗಿದ್ದಾರೆ. ಈ ಹಿಂದೆ ಇಂಡಿಯನ್ ರಿಯಾಲಿಟಿ ಶೋ ಮೂಲಕ ಫೇಮಸ್ ಆಗಿದ್ರು. ಜೊತೆಗೆ ಮೇಘಮಯೂರಿ ಎಂಬ ಧಾರಾವಾಹಿಯಲ್ಲೂ ಅಭಿನಯಿಸಿದ್ರು.
ಇನ್ಮುಂದೆ ದೇವರಂತ ಅಪ್ಪನಿಂದ ಜೀವ ದೂರ ಆಗಿದ್ದು ಏಕೆ? ಕುಟುಂಬ ತೊರಿಯಲು ಬಲವಾದ ಕಾರಣ ಏನು ಎಂಬುದು ತೆರೆದುಕೊಳ್ಳಲಿದೆ. ಒಟ್ಟಿನಲ್ಲಿ ಹೊಸ ಅಧ್ಯಾಯ ರೋಮಾಂಚನ ಸೃಷ್ಟಿಸ್ತಿದ್ದು, ಸೀರಿಯಲ್ ಅಂದರೆ ಹೀಗೆ ಇರ್ಬೇಕು ಅಂತಿದ್ದಾರೆ ವೀಕ್ಷಕರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ