newsfirstkannada.com

ಜಿಂಕೆ ಹಾವನ್ನು ತಿನ್ನೋದು ನೋಡಿದ್ದೀರಿ.. ಜಿರಾಫೆ ಎಲುಬನ್ನು ತಿನ್ನೋದು ನೋಡಿದ್ದೀರಾ? ಇಲ್ಲಿದೆ ವಿಡಿಯೋ

Share :

15-06-2023

    ಅಯ್ಯೋ ಇದೆಂಥಾ ವಿಚಿತ್ರ.. ಜಿರಾಫೆ ಬಾಯಲ್ಲಿ ಇದೇನಿದು

    ಜಿರಾಫೆ ಎಲುಬನ್ನು ತಿನ್ನಲು ಕಾರಣವೊಂದಿದೆ! ಅದೇನು ಗೊತ್ತಾ?

    ಐಎಫ್ಎ​ಸ್​ ಅಧಿಕಾರಿ ಜಿರಾಫೆ ಬಗ್ಗೆ ಕೊಟ್ಟ ಮಹತ್ವದ ಮಾಹಿತಿ ಹೀಗಿದೆ..

ಇತ್ತೀಚೆಗೆ ಜಿಂಕೆಯೊಂದು ಹಾವನ್ನು ತಿನ್ನುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು. ಆದರೀಗ ಜಿರಾಫೆಯ ವಿಡಿಯೋವೊಂದು ವೈರಲ್​ ಆಗಿದೆ. ವಿಡಿಯೋದಲ್ಲಿ ಜಿರಾಫೆ ಎಲುಬನ್ನು ತಿನ್ನುವ ದೃಶ್ಯ ಕಂಡುಬಂದಿದೆ. ಟ್ವಿಟ್ಟರ್​ನಲ್ಲಂತೂ ಈ ವಿಡಿಯೋದ ಬಗ್ಗೆ ಮಾತುಗಳು ಹೆಚ್ಚಾಗಿದೆ.

ಐಎಫ್​​ಎಸ್​​ ಅಧಿಕಾರಿ ಸುಸಾಂತ್​ ನಂದ ಅವರು ಜಿರಾಫೆ ಎಲುಬನ್ನು ತಿನ್ನುತ್ತಿರುವ ದೃಶ್ಯವನ್ನು ಹಂಚಿಕೊಂಡಿದ್ದಾರೆ. ವಿಡಿಯೋಗೆ ‘ಜಿರಾಫೆಗಳು ಸಸ್ಯಹಾರಿಗಳು ಮತ್ತು ಮರದ ಮೇಲ್ಭಾಗದಲ್ಲಿರುವ ಎಲೆಗಳು, ಮೊಗ್ಗುಗಳನ್ನು ತಿನ್ನಲು  ತಮ್ಮ ಉದ್ದನೆಯ ಕುತ್ತಿಗೆಯನ್ನು ಬಳಸುತ್ತವೆ. ಇದೇ ಕಾರಣಕ್ಕೆ ಜಿರಾಫೆಗಳು ವಿಕಸನಗೊಂಡಿವೆ. ಆದರೆ ಕೆಲವೊಮ್ಮೆ ರಂಜಕವನ್ನು ಪಡೆಯಲು ಮೂಳೆಗಳನ್ನು ತಿನ್ನುತ್ತವೆ. ಇದು ಪ್ರಕೃತಿ ಅದ್ಭುತವಾಗಿದೆ.

ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​. ಅನೇಕರು ವಿಡಿಯೋ ನೋಡಿ ಬಗೆ ಬಗೆಯ ಕಾಮೆಂಟ್​ ಬರೆಯುತ್ತಿದ್ದಾರೆ. ಅದರಲ್ಲಿ ಕೆಲವರು ನಿಮ್ಮ ಮಾಹಿತಿಗೆ ಧನ್ಯವಾದಗಳು ಎಂದು ಕಾಮೆಂಟ್​ ಬರೆದರೆ, ಅದರಲ್ಲೊಬ್ಬರು ಈ ಪ್ರಶ್ನೆಯನ್ನು ಯುಪಿಎಸ್​ಸಿ ಪರೀಕ್ಷೆಯಲ್ಲಿ ಕೇಳಬಹುದು ಎಂದು ಕಾಮೆಂಟ್​ ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಜಿಂಕೆ ಹಾವನ್ನು ತಿನ್ನೋದು ನೋಡಿದ್ದೀರಿ.. ಜಿರಾಫೆ ಎಲುಬನ್ನು ತಿನ್ನೋದು ನೋಡಿದ್ದೀರಾ? ಇಲ್ಲಿದೆ ವಿಡಿಯೋ

https://newsfirstlive.com/wp-content/uploads/2023/06/Giraffe.jpg

Load More