newsfirstkannada.com

ಅಂಜಲಿ ಕೊಂದ ಪಾಪಿ ಮತ್ತೊಬ್ಬ ಮಹಿಳೆಗೂ ಚಾಕು ಇರಿಯಲು ಹೋಗಿದ್ದ.. ಸಿಕ್ಕಿಬಿದ್ದಿದ್ದೇ ರೋಚಕ; ಆಗಿದ್ದೇನು?

Share :

Published May 17, 2024 at 12:13pm

    ವಿಶ್ವ ಮಾನವ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ಕೊಲೆ ಆರೋಪಿ

    ರೈಲಿನಲ್ಲಿ ಕುಳಿತಿದ್ದ ಮಹಿಳೆಗೆ ಚಾಕು ಇರಿಯಲು ಯತ್ನಿಸಿದ್ದ ಪಾಪಿ

    ಅಂಜಲಿ ಕೊಲೆ ಮಾಡಿದ ಆರೋಪಿ ಇವನೇ ಅನ್ನೋದು ಗೊತ್ತೇ ಇರಲಿಲ್ಲ

ದಾವಣಗೆರೆ: ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಮಲಗಿದ್ದ ಅಂಜಲಿಗೆ ಚಾಕು ಚುಚ್ಚಿ ಪರಾರಿಯಾಗಿದ್ದ ಆರೋಪಿ ಕೊನೆಗೂ ಸಿಕ್ಕಿಬಿದ್ದಿದ್ದಾನೆ. ಅಂಜಲಿ ಹತ್ಯೆ ಮಾಡಿದ ಆರೋಪಿ ಗಿರೀಶ್ ಅನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಅಂಜಲಿಗೆ ಚಾಕು ಇರಿದ ಆರೋಪಿ ವಿಶ್ವ ಮಾನವ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ. ಆರೋಪಿ ರೈಲಿನಲ್ಲಿ ಕುಳಿತಿದ್ದ ಮಹಿಳೆಗೆ ಚಾಕು ಇರಿಯಲು ಯತ್ನಿಸಿದ್ದಾನೆ. ಎದುರಿನ ಸೀಟ್​​ನಲ್ಲಿದ್ದ ಮಹಿಳೆಗೆ ಚಾರು ಇರಿದಿದ್ದರಿಂದ ಗದಗ ಮೂಲದ ಲಕ್ಷ್ಮೀ ಕೈಗೆ ಗಾಯವಾಗಿದೆ.

ಇದನ್ನೂ ಓದಿ: ‘ಅಮ್ಮಾ Sorry’ ಎಂದು ಬರೆದಿಟ್ಟ ಡೆತ್​ನೋಟ್ ಪತ್ತೆ.. ಪೊಲೀಸರಿಗೆ ಇಲ್ಲೂ ಕಾಡಿದೆ ಪ್ರಬುದ್ಧ ಸಾವಿನ ಕುರಿತೊಂದು ಅನುಮಾನ 

ಮಹಿಳೆಗೆ ಚಾಕು ಇರಿಯಲು ಯತ್ನಿಸಿದ ಬಳಿಕ ಗಿರೀಶ್ ಸಾವಂತ್ ಭಯಗೊಂಡು ಟ್ರೇನ್​​ನಿಂದ ಕೆಳಗೆ ಜಿಗಿದಿದ್ದಾನೆ. ಸಾಸಲು-ಮಾಯಕೊಂಡ ಮಾರ್ಗ ಮಧ್ಯೆ ಬಿದ್ದಿದ್ದ ಆರೋಪಿ ಗಿರೀಶ್ ಅನ್ನು ಸ್ಥಳೀಯರು ದಾವಣಗೆರೆ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿ ರೈಲಿನಲ್ಲಿ ಗಾಯಗೊಂಡಿದ್ದ ಮಹಿಳೆ ಲಕ್ಷ್ಮೀ ಚಿಕಿತ್ಸೆ ಪಡೆಯುತ್ತಿದ್ದರು. ಇದೇ ವೇಳೆ ಆಸ್ಪತ್ರೆಯಲ್ಲಿ ಲಕ್ಷ್ಮೀ ಆರೋಪಿ ಗಿರೀಶ್​ ಸಾವಂತ್​​ನ ಗುರುತು ಹಿಡಿದಿದ್ದಾಳೆ. ಕೊನೆಗೆ ಗಿರೀಶ್​ನನ್ನು ರೇಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೇಲ್ವೆ ಪೊಲೀಸರು ಆ ಬಳಿಕ ಆರೋಪಿಯನ್ನು ದಾವಣಗೆರೆ ಪೊಲೀಸರ ವಶಕ್ಕೆ ನೀಡಿದ್ದಾರೆ.

ಮೊದಲಿಗೆ ದಾವಣಗೆರೆ ಪೊಲೀಸರಿಗೆ ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಮಾಡಿದ ಆರೋಪಿ ಇವನೇ ಅನ್ನೋದು ಗೊತ್ತಾಗಿಲ್ಲ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯ ಗುರುತು ಪತ್ತೆ ಹಚ್ಚಿದ್ದಾರೆ. ಆನಂತರ ದಾವಣಗೆರೆ ಪೊಲೀಸರು ಹುಬ್ಬಳ್ಳಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ದಾವಣಗೆರೆಯಿಂದ ಅಂಜಲಿ ಕೊಂದ ಆರೋಪಿಯನ್ನು ಹುಬ್ಬಳ್ಳಿಗೆ ಕರೆತರಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಜಲಿ ಕೊಂದ ಪಾಪಿ ಮತ್ತೊಬ್ಬ ಮಹಿಳೆಗೂ ಚಾಕು ಇರಿಯಲು ಹೋಗಿದ್ದ.. ಸಿಕ್ಕಿಬಿದ್ದಿದ್ದೇ ರೋಚಕ; ಆಗಿದ್ದೇನು?

https://newsfirstlive.com/wp-content/uploads/2024/05/Hubbali-Anjali-Murder-Case.jpg

Load More