newsfirstkannada.com

ವಧುವಿನ ತಾಳಿ ಕಿತ್ಕೊಂಡು ಯುವಕನಿಗೆ ಇನ್ನೊಂದು ಯುವತಿ ಜೊತೆ ಮದ್ವೆ; ಅಂತರ್ಜಾತಿ ವಿವಾಹಕ್ಕೆ ಹೆಣ್ಮಗಳು ಬಲಿ

Share :

Published February 25, 2024 at 1:07pm

Update February 25, 2024 at 2:21pm

  ಪ್ರೇಮಿಯ ಇನ್ನೊಂದು ಮದುವೆಯ ಸ್ಟೇಟಸ್​ ನೋಡಿ ಆತ್ಮಹತ್ಯೆ

  ಮದುವೆ ಆದ್ಮೇಲೆ ಸಂಬಂಧಿಕರಿಂದ ತಾಳಿ ಕಿತ್ಕೊಂಡು ವಿಕೃತಿ

  ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಚಿತ್ರದುರ್ಗ: ಅಂತರ್ಜಾತಿ ವಿವಾಹಕ್ಕೆ ಪೋಷಕರ ಹಾಗೂ ಯುವಕನ ಕುಟುಂಬಸ್ಥರಿಂದ ತೀವ್ರ ವಿರೋಧ ಹಿನ್ನೆಲೆಯಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೂನಬೇವು ಗ್ರಾಮದಲ್ಲಿ ನಡೆದಿದೆ. ವಿಶಾಲಾಕ್ಷಿ (22) ಅಂತರ್ಜಾತಿ ವಿವಾಹಕ್ಕೆ ಬಲಿಯಾದ ಯುವತಿ.

ಮೂರು ವರ್ಷಗಳಿಂದ ಎಸ್ಸಿ ಸಮುದಾಯಕ್ಕೆ ಸೇರಿದ್ದ ವಿಶಾಲಾಕ್ಷಿ, ಎಸ್ಟಿ ಸಮುದಾಯಕ್ಕೆ ಸೇರಿದ ತಿಪ್ಪೇಸ್ವಾಮಿ ಎಂಬಾತನ ಪ್ರೀತಿಸುತ್ತಿದ್ದಳು. ಕಳೆದ ವರ್ಷ ನಾಯಕನಹಟ್ಟಿ ಜಾತ್ರೆಯಲ್ಲಿ ಇಬ್ಬರು ಮದುವೆ ಆಗಿದ್ದರು. ಬಳಿಕ ಹುಡುಗನ ಕಡೆಯವರಿಂದ ಹುಡುಗಿ ಮನೆಯವರಿಗೆ ಜೀವ ಬೆದರಿಕೆ ಶುರುವಾಗಿದೆ.

ಅಷ್ಟಕ್ಕೂ ಸುಮ್ಮನಾಗದ ಹುಡುಗನ ಮನೆಯ ಸಂಬಂಧಿಕರು, ವಿಶಾಲಾಕ್ಷಿ ಕತ್ತಿನಲ್ಲಿದ್ದ ತಾಳಿಯನ್ನು ಕಿತ್ತುಕೊಂಡು ಕಳುಹಿಸಿದ್ದರು. ಯಾರಿಗಾದರೂ ಮದುವೆ ವಿಚಾರ ಬಾಯಿಬಿಟ್ರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದರಂತೆ. ಈ ಬೆನ್ನಲ್ಲೇ ಕಳೆದ ನಾಲ್ಕು ದಿನಗಳ ಹಿಂದೆ ಮತ್ತೆ ತಿಪ್ಪೇಸ್ವಾಮಿಗೆ ಬೇರೆ ಹುಡುಗಿ ಜೊತೆ ಮದ್ವೆ ಕಾರ್ಯ ನಡೆದಿದೆ.

ಇದನ್ನು ತಿಪ್ಪೇಸ್ವಾಮಿ ಸ್ನೇಹಿತರು ವಾಟ್ಸ್​ಆ್ಯಪ್​​ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದರು. ಸ್ಟೇಟಸ್​ನಲ್ಲಿ ಪ್ರೀತಿಸಿದ ಹುಡುಗನ ಮದ್ವೆ ಫೋಟೋ ಹಾಗೂ ವಿಡಿಯೋ ನೋಡಿ ಯುವತಿ ಆಘಾತಕ್ಕೆ ಒಳಗಾಗಿದ್ದಾಳೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸಿದ ಹುಡುಗ ಮೋಸ ಮಾಡಿದ್ದಾನೆ. ನನಗೆ ಮೋಸ ಮಾಡಿದ ಮೇಲೆ ಬದುಕಿರಬಾರದು ಎಂದು ನಿರ್ಧಾರ ಮಾಡಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾಳೆ. ತುರುವನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಧುವಿನ ತಾಳಿ ಕಿತ್ಕೊಂಡು ಯುವಕನಿಗೆ ಇನ್ನೊಂದು ಯುವತಿ ಜೊತೆ ಮದ್ವೆ; ಅಂತರ್ಜಾತಿ ವಿವಾಹಕ್ಕೆ ಹೆಣ್ಮಗಳು ಬಲಿ

https://newsfirstlive.com/wp-content/uploads/2024/02/CTR-VISHALAKSHI.jpg

Load More