/newsfirstlive-kannada/media/post_attachments/wp-content/uploads/2024/07/VIJ_GIRL_DEAD.jpg)
ವಿಜಯನಗರ: ಬಹಿರ್ದೆಸೆಗೆ ಹೋಗಿದ್ದ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೂವಿನ ಹಡಗಲಿ ತಾಲೂಕಿನ ದುಂಗಾವತಿ ತಾಂಡಾದಲ್ಲಿ ನಡೆದಿದೆ.
ಇದನ್ನೂ ಓದಿ:ಕಬಿನಿ ಡ್ಯಾಂ ನೀರಿನ ಮಟ್ಟ ಹೇಗಿದೆ.. ಭಾರೀ ಪ್ರಮಾಣದ ನೀರನ್ನು ಹರಿಬಿಟ್ಟ ಅಧಿಕಾರಿಗಳು; ಯಾಕೆ?
10 ವರ್ಷದ ಬಾಲಕಿ ಬಹಿರ್ದೆಸೆ ಮಾಡಲೆಂದು ಹೊಂಡದ ಕಡೆಗೆ ಹೋಗಿದ್ದಳು. ಮಗಳು ತುಂಬಾ ಹೊತ್ತಾದರು ಬಾರದ ಹಿನ್ನೆಲೆಯಲ್ಲಿ ಪೋಷಕರು ಆತಂಕ ವ್ಯಕ್ತಪಡಿಸಿದ್ದರು. ಬಾಲಕಿಯನ್ನು ಹುಡುಕಾಡುವಾಗ ಹೊಂಡದ ಪಕ್ಕದಲ್ಲಿ ಮೃತದೇಹ ಒಂದು ಕಡೆ ಬಿದ್ದಿದ್ದರೆ ಮತ್ತೊಂದು ಕಡೆ ನೀರಿನ ಚೊಂಬು ಬಿದ್ದಿತ್ತು. ಸಂಜೆ 4:30ರ ಸುಮಾರಿಗೆ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ: ವರುಣಾರ್ಭಟಕ್ಕೆ 90 ಜನ ಸಾವು.. 12 ಲಕ್ಷಕ್ಕೂ ಹೆಚ್ಚು ಮಂದಿ ನಿರಾಶ್ರಿತ; ಇಂದು ಕೂಡ ಭಾರೀ ಮಳೆ ಎಚ್ಚರಿಕೆ
ಈ ಬಾಲಕಿ ದೇಹ ಪತ್ತೆಯಾಗುತ್ತಿದ್ದಂತೆ ತಕ್ಷಣ ಚಿಕಿತ್ಸೆಗಾಗಿ ಹಗರಿಬೊಮ್ಮನಹಳ್ಳಿಯ ಹಂಪಸಾಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ತರಲಾಗಿತ್ತು. ಬಾಲಕಿ ಈಗಾಗಲೇ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆ ಸಂಬಂಧ ಸ್ಥಳಕ್ಕೆ ಶಾಸಕ ಕೃಷ್ಣಾ ನಾಯ್ಕ್ ಹಾಗೂ ಎಸ್ಪಿ ಶ್ರೀಹರಿಬಾಬು ಭೇಟಿ ನೀಡಿದರು. ತಂಬ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಲಕಿ ಕುರಿತು ಎಫ್ಎಸ್ಎಲ್ ವರದಿ ಬಂದ ಬಳಿಕವೇ ಸತ್ಯ ಏನೆಂಬುದು ಬೆಳಕಿಗೆ ಬರಲಿದೆ.
ಇದನ್ನೂ ಓದಿ: ಕಾವೇರಿ ನೀರಿಗಾಗಿ ಸಿದ್ದು ಒಗ್ಗಟ್ಟಿನ ತಂತ್ರ.. ಸರ್ವ ಪಕ್ಷ ಸಭೆಗೆ ಬಿಜೆಪಿ-ಜೆಡಿಎಸ್ ಸಾಥ್.. ಯಾರೆಲ್ಲ ಬರ್ತಿದ್ದಾರೆ..?
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಹೇಳತೀರದಾಗಿದೆ. ಈ ಕುರಿತು ಮಾತನಾಡಿದ ಬಾಲಕಿಯ ತಾಯಿ ಲಕ್ಷ್ಮಿ ಬಾಯಿ, ಮಗಳನ್ನ ಸಾಯಿಸಿದ್ದಾರೋ ಏನೋ ಗೊತ್ತಿಲ್ಲ. ನಮಗೆ ನ್ಯಾಯ ಕೊಡಿಸಿ. ಇರೋದು ಒಬ್ಬಳೇ ಮಗಳು. ಈಗ ಏನು ಮಾಡಬೇಕು ಎಂದರು. ತಂದೆ ಕೂಡ ಮಾತನಾಡಿ, ನನ್ನ ಮಗಳಿಗೆ ಮೊಸ ಆಗಿದೆ. ಮಗಳು ಅಂದ್ರೆ ನನಗೆ ಪ್ರಾಣ. ಮಗಳಿಗೆ ಆದ ಅನ್ಯಾಯ ಬೇರೆಯವರಿಗೆ ಆಗಬಾರದು. ನಮಗೆ ನ್ಯಾಯಬೇಕು ಎಂದು ಕಣ್ಣೀರು ಇಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ