newsfirstkannada.com

ಕೊಳೆತ ಕುರಿ ಮಾಂಸ ತಿಂದು ಮದರಸಾದ ಓರ್ವ ಬಾಲಕಿ ಸಾವು.. 10 ಮಂದಿ ಗಂಭೀರ

Share :

Published June 29, 2024 at 5:11pm

    ಮಾಂಸದೂಟ ತಿಂದ ಕೆಲವೇ ಕ್ಷಣದಲ್ಲಿ ಬಾಲಕಿಯರಲ್ಲಿ ವಾಂತಿ

    ಈ ಮದರಸಾದಲ್ಲಿ ಎಷ್ಟು ಕೆ.ಜಿ ಮಟನ್ ಊಟ ಮಾಡಲಾಗಿತ್ತು?

    ಆಸ್ಪತ್ರೆಗೆ ದಾಖಲು ಮಾಡಿದವರ ಪೈಕಿ ಬಾಲಕಿಯೊಬ್ಬಳು ಸಾವು

ಹೈದರಾಬಾದ್: ಕೆಟ್ಟು ಹೋದ ಕುರಿ ಮಾಂಸದ ಆಹಾರ ತಿಂದು ಓರ್ವ ಬಾಲಕಿ ಸಾವನ್ನಪ್ಪಿದ್ದು 10 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಧ್ರ ಪ್ರದೇಶದ ವಿಜಯವಾಡ ಜಿಲ್ಲೆಯ ಅಜಿತ್ ಸಿಂಗ್ ನಗರದಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ: ಪಟಾಕಿ ಫ್ಯಾಕ್ಟರಿಯಲ್ಲಿ ಭಾರೀ ಸ್ಫೋಟ.. ಬ್ಲಾಸ್ಟ್ ಆದ​ ರಭಸಕ್ಕೆ ಕುಸಿದು ಬಿದ್ದ ಬಿಲ್ಡಿಂಗ್.. ನಾಲ್ವರು ಸಾವು

ಕರಿಶ್ಮಾ ಫುಡ್​ಪಾಯಿಸನ್​ನಿಂದ​ ಮೃತಪಟ್ಟ ಬಾಲಕಿ. ಇನ್ನು 10 ಬಾಲಕಿಯರು ಅಸ್ವಸ್ಥಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಜಿತ್ ಸಿಂಗ್ ನಗರದಲ್ಲಿರುವ ಮದರಸಾ ಚಾರಿಟೇಬಲ್ ಟ್ರಸ್ಟ್‌ನಲ್ಲಿ ಸುಮಾರು 100 ಕೆ.ಜಿಯಷ್ಟು ಕುರಿ ಮಾಂಸದಿಂದ ಊಟ ತಯಾರು ಮಾಡಲಾಗಿತ್ತು. ಈ ಊಟವನ್ನು ತಿಂದಂತಹ ಮಕ್ಕಳು ಕೆಲವೇ ಕ್ಷಣದಲ್ಲಿ ವಾಂತಿ ಮಾಡಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ನನ್ನೂರು ಕರ್ನಾಟಕ, ಈ ನಾಡನ್ನ ಬಿಟ್ಟು ಎಲ್ಲಿಗೂ ಹೋಗಲ್ಲ’ -DGP ಕಮಲ್ ಪಂತ್

ತಕ್ಷಣ ಬಾಲಕಿಯರನ್ನೆಲ್ಲ ಅವರ ಪೋಷಕರು, ಸ್ಥಳೀಯರು ಸೇರಿ ಆಸ್ಪತ್ರೆ ದಾಖಲು ಮಾಡಿದ್ದಾರೆ. ಈ ವೇಳೆ ಓರ್ವ ಬಾಲಕಿ ಫುಡ್​ಪಾಯಿಸನ್​ನಿಂದ ಸಾವನ್ನಪ್ಪಿದ್ದು ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮಕ್ಕಳು ತಿಂದಂತಹ ಕುರಿ ಮಾಂಸವು ಕೆಟ್ಟು ಹೋಗಿದ್ರೂ ಅದನ್ನು ಹಾಗೇ ಅಡುಗೆ ಮಾಡಿದ್ದಾರೆ. ಇದೇ ಬಾಲಕಿಯ ಸಾವಿಗೆ ಕಾರಣವಾಗಿದೆ ಎಂದು ಪೋಷಕರು ಆರೋಪ ಮಾಡಿದ್ದಾರೆ. ಇನ್ನು ಈ ಬಗ್ಗೆ ನಿಖರವಾದ ಕಾರಣ ತಿಳಿಯಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೊಳೆತ ಕುರಿ ಮಾಂಸ ತಿಂದು ಮದರಸಾದ ಓರ್ವ ಬಾಲಕಿ ಸಾವು.. 10 ಮಂದಿ ಗಂಭೀರ

https://newsfirstlive.com/wp-content/uploads/2024/06/mutton_curry.jpg

Load More