Advertisment

ರೀಲ್ಸ್​ ಹುಚ್ಚು.. ಗೀಳಿಗೆ ಬಿದ್ದ ರೀಲ್ಸ್​ ರಾಣಿ.. ಮುಂದೇನಾಯ್ತು.. ಅಬ್ಬಬ್ಬಾ..! Video

author-image
Ganesh
Updated On
ರೀಲ್ಸ್​ ಹುಚ್ಚು.. ಗೀಳಿಗೆ ಬಿದ್ದ ರೀಲ್ಸ್​ ರಾಣಿ.. ಮುಂದೇನಾಯ್ತು.. ಅಬ್ಬಬ್ಬಾ..! Video
Advertisment
  • ಕಟ್ಟಡದ ಮೇಲಿಂದ ಭಯಾನಕ ಕಿತಾಪತಿ ಮಾಡಿದ ಮೂವರು
  • ಭಯವಿಲ್ಲದೇ ಜೀವಕ್ಕೆ ಸಂಚಕಾರ ಬರುವ ರೀತಿಯಲ್ಲಿ ಸ್ಟಂಟ್
  • ಹೇಳೋರ, ಕೇಳೋರ ಮಾತೇ ಕೇಳಲ್ಲ ಅಂತಾರೆ ಇವರು..!

ರೀಲ್ಸ್​​ ಮಾಡಲು ಹೋಗಿ ಅದೆಷ್ಟೋ ಮಂದಿ ಜೀವ ಕಳೆದುಕೊಂಡ ಉದಾಹರಣೆ ಕಣ್ಮುಂದೆ ಇನ್ನೂ ಇವೆ. ‘ಜೀವ ಕಳ್ಕೊಳ್ಳೋದು ಏಕೆ..? ರೀಲ್ಸ್ ಮಾಡೋದೇಕೆ..? ರೀಲ್ಸ್​ಗಿಂತ ಲೈಫೇ ಮುಖ್ಯ.. ಏನಂತೀರಾ..?’ ಅಂತಾ ಎಷ್ಟೇ ಹೇಳಿದ್ರೂ ಗೀಳಿಗೆ ಬಿದ್ದವರು ಬುದ್ಧಿ ಮಾತ್ರ ಕಲಿಯಲ್ಲ.

Advertisment

ಇದೀಗ ರೀಲ್ಸ್ ರಾಣಿ ಒಬ್ಬಳ ಭಯಾನಕ, ಆಘಾತಕಾರಿ, ಆತಂಕಕಾರಿ ಹಾಗೂ ಟೀಕೆಗೆ ಒಳಪಟ್ಟ ವಿಡಿಯೋ ಒಂದು ಬೆಚ್ಚಿಬೀಳಿಸ್ತಿದೆ.

ಅಂಥದ್ದೇನಿದೆ ವಿಡಿಯೋದಲ್ಲಿ..?

ಪುಣೆಯಲ್ಲಿ ಕ್ಯಾಪ್ಚರ್ ಆಗಿರುವ ವಿಡಿಯೋ ಇದಾಗಿದೆ. ಗಗನಚುಂಬಿ ಕಟ್ಟಡಗಳು, ವಾಹನದಟ್ಟಣೆ ಹೊಂದಿರುವ ರಸ್ತೆ ಪಕ್ಕ ಒಂದರಲ್ಲಿ ಪಾಳು ಬಿದ್ದಂತೆ ಕಾಣುವ ಬಹುಮಹಡಿಯ ಕಟ್ಟವೊಂದು ಕಾಣ್ತಿದೆ. ಆ ಕಟ್ಟಡದ ಟೆರಸ್​ ಮೇಲೆ ಓರ್ವ ಯುವತಿ ಸೇರಿ ಇಬ್ಬರು ಯುವಕರು ಕಾಣ್ತಿದ್ದಾರೆ. ಮತ್ತೊಬ್ಬ ಕ್ಯಾಮೆರಾಮೆನ್. ಇಲ್ಲಿ ಕ್ಯಾಮೆರಾಮನ್​ ಕಾಣುವುದಿಲ್ಲ.

ದುಸ್ಸಾಹಸ, ರೀಲ್ಸ್​ ಹುಚ್ಚಿನ ಪರಮಾವಧಿ, ಜೀವಕ್ಕೆ ಸಂಚಕಾರ ತಂದ್ಕೊಳ್ಳುವ ಕೆಟ್ಟ ಸ್ಟಂಟ್ ಈ ಯುವಕರದ್ದಾಗಿದೆ. ಏಕಾಏಕಿ ವ್ಯಕ್ತಿಯೊಬ್ಬನ ಕೈ ಹಿಡಿದು ಕಟ್ಟಡದ ತುತ್ತ ತುದಿಯಿಂದ ನೇತಾಡಿದ್ದಾಳೆ. ಕ್ಯಾಮೆರಾಗೆ ಪೋಸ್ ನೀಡಿದ್ದಾಳೆ. ಈ ದೃಶ್ಯವವು ನೋಡುಗರ ಎದೆ ದಸಕ್ ಅನ್ನೋ ರೀತಿಯಲ್ಲಿದ್ದು, ಕ್ರಮಕ್ಕಾಗಿ ಜನ ಆಗ್ರಹಿಸುತ್ತಿದ್ದಾರೆ. ಡಿಫ್ರೆಂಟ್ ಡಿಫ್ರೆಂಟ್ ಆ್ಯಂಗಲ್​​ನಲ್ಲಿ ಕ್ಯಾಮೆರಾ ಇಟ್ಟು ಶೂಟ್ ಮಾಡಿದ್ದಾರೆ.

Advertisment

100 ಫೀಟ್ ಎತ್ತರದಿಂದ ಬಿಲ್ಡಿಂಗ್​ನ ತುತ್ತ ತುದಿಯಿಂದ ಸ್ನೇಹಿತನ ಕೈಸಹಾಯದಿಂದ ಯಾವುದೇ ಗ್ರಿಪ್ ಇಲ್ಲದೇ ನೇತಾಡಿರುವ ದೃಶ್ಯ ಭಯಾನಕವಾಗಿದೆ. ಇನ್​ಸ್ಟಾಗ್ರಾಮ್​ನಲ್ಲಿ ರೀಲ್ಸ್ ಹಾಕಲು ಹೀಗೆ ಮಾಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ಚಲಿಸುತ್ತಿದ್ದ ರೈಲಿಗೆ ಸಿಲುಕಿ ಮಂಡ್ಯದ ಇಂಜಿನಿಯರಿಂಗ್ ವಿದ್ಯಾರ್ಥಿನಿ ನರಳಾಟ..

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment