ಈಕೆ ವಿಷಕನ್ಯೆ! ಪ್ರೀತಿಗಾಗಿ ಕುಟುಂಬದ 13 ಜನರನ್ನು ವಿಷ ಉಣಿಸಿ ಕೊಂದ ಮನೆ ಮಗಳು!

author-image
AS Harshith
Updated On
ಈಕೆ ವಿಷಕನ್ಯೆ! ಪ್ರೀತಿಗಾಗಿ ಕುಟುಂಬದ 13 ಜನರನ್ನು ವಿಷ ಉಣಿಸಿ ಕೊಂದ ಮನೆ ಮಗಳು!
Advertisment
  • ಲವ್ವರ್​ ಜೊತೆ ಸೇರಿಕೊಂಡು ಮನೆಯವರನ್ನೇ ಕೊಂದಳು
  • ಅಪ್ಪ, ಅಮ್ಮ ಎನ್ನದೆ ಊಟಕ್ಕೆ ವಿಷ ಹಾಕಿ ಕೊಂದ ಮನೆ ಮಗಳು
  • ಇಬ್ಬರ ಪ್ರೀತಿಗೆ ಬಲಿಯಾದದ್ದು ಬರೋಬ್ಬರಿ 13 ಜನರು

ಮನೆ ಮಗಳೇ ಮನೆಯವರನ್ನು ಕೊಂದ ಘಟನೆ ಬಯಲಾಗಿದೆ. ಕುಟುಂಬದ ಜನರಿಗೆ ವಿಷವಿಟ್ಟು ಸಾಯಿಸಿದ ಕತೆ ಬೆಳಕಿಗೆ ಬಂದಿದೆ. ಒಂದಲ್ಲಾ, ಎರಡಲ್ಲಾ ಬರೋಬ್ಬರಿ 13 ಜನರು ಮನೆ ಮಗಳಿಟ್ಟ ಹಸಿ ಊಟಕ್ಕೆ ಉಸಿರು ಚೆಲ್ಲಿದ್ದಾರೆ. ಅಪ್ಪ, ಅಮ್ಮ ಎನ್ನದೆಯೇ ಪ್ರಿಯಕರ ಜೊತೆ ಕೈ ಜೋಡಿಸಿ ಮುಗಿಸಿ ಬಿಟ್ಟಿದ್ದಾಳೆ.

ಅಂದಹಾಗೆಯೇ 13 ಜನರನ್ನು ಕೊಂದ ಪಾತಕಿಯ ಹೆಸರು ಸೈಯಿಷ್ಟಾ. ಹೇಳಲು ಈಕೆ ಮಗಳು.. ಆದರೆ ಮಗಳಲ್ಲ ವಿಷಕನ್ಯೆ. ತಾನು ಇಷ್ಟಪಟ್ಟ ಯುವಕನ ಜೊತೆಗೆ ಮದ್ವೆ ಮಾಡಿಸಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿ, ತಂದೆ, ಕುಟುಂಬದವರೂ ಎನ್ನದೆ ವಿಷ ನೀಡಿದ್ದಾಳೆಂದರೆ ನಂಬಲು ಅಸಾಧ್ಯ.

ಪಾಕಿಸ್ತಾನದ ಸಿಂಧ್​​ ಪ್ರಾಂತ್ಯದಲ್ಲಿ ಒಂದೇ ಕುಟುಂಬದ 13 ಜನರು ಮನೆ ಮಗಳ ಊಟಕ್ಕೆ ಸಾವನ್ನಪ್ಪಿದ್ದಾರೆ. ಖೈರಪುದ ಸಮೀಪದ ಹೂಬತ್​​ ಖಾನ್​​​ ಬ್ರೋಹಿ ಗ್ರಾಮದ ಸೈಯಿಷ್ಟಾ ಪ್ರೀತಿಗಾಗಿ ಪ್ರಿಯಕರನ ಜೊತೆ ಸೇರಿಕೊಂಡು ಕೊಲೆ ಮಾಡಿದ್ದಾಳೆ.

ಇದನ್ನೂ ಓದಿ: ವೀಕ್ಷಕರಿಗೆ ಮತ್ತೊಂದು ಬಿಗ್​ ಅಪ್ಡೇಟ್; ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಸಜ್ಜಾದ ರಿಯಾಲಿಟಿ ಶೋ

ಅಮೀರ್​ ಬಕ್ಸ್​ ಎಂಬವನ ಪ್ರೀತಿಯಲ್ಲಿ ಬಿದ್ದ ಸಾಯಿಷ್ಟಾ ಆತನನ್ನೇ ವಿವಾಹವಾಗುವ ಕನಸನ್ನು ಕಟ್ಟಿಕೊಂಡಿದ್ದಳು. ಮನೆಯಲ್ಲೂ ಈ ವಿಚಾರ ಹೇಳಿಕೊಂಡಿದ್ದಳು. ಆದರೆ ಮನೆಯವರು ಬೇಡ ಎಂದ ತಕ್ಷಣ ಪ್ರಿಯಕರನ ಬಳಿ ಈ ವಿಚಾರ ಹಂಚಿಕೊಂಡು ಕುಟುಂಬದವರಿಗೆ ಮಹೂರ್ತ ಇಡುವ ಪ್ಲಾನ್​ ಹೆಣೆದಳು. ಕೊನೆಗೆ ಆಹಾರದಲ್ಲಿ ವಿಷ ಬೆರೆಸಿ ಕುಟುಂಬದವರನ್ನು ಕೊಲ್ಲಲು ಪ್ಲಾನ್​ ಮಾಡಿದಳು. ಆಕೆಯ ಪ್ಲಾನ್​ನಂತೆ 13 ಜನರು ಸಾವನ್ನಪ್ಪಿದ್ದಾರೆ.

ಆಗಸ್ಟ್​ 19ರಂದು ನಡೆದ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪ್ರಾರಂಭದಲ್ಲಿ 9 ಜನರು ಮೊದಲಿಗೆ ನರಳಿ ಸಾವನ್ನಪ್ಪಿದ್ದು, ಉಳಿದವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಹಿರಿಯ ಪೊಲೀಸ್​​ ಅಧಿಕಾರಿ ಇನಾಯತ್​ ಶಾ, ‘ಮನೆಯ 13 ಜನರು ಆಹಾರ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅದರೆ ಅವರೆಲ್ಲರೂ ಸಾವನ್ನಪ್ಪಿದರು. ಮರಣೋತ್ತರ ಪರೀಕ್ಷೆ ವೇಳೆ ವಿಷಪೂರಿತ ಆಹಾರ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂತು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರತಿಭಾವಂತ ವಿದ್ಯಾರ್ಥಿ ಕಾಲೇಜು ಫೀಸು ಕಟ್ಟಿದ KL ರಾಹುಲ್; ನೂರಾರು ಬಡವರಿಗೆ ನೆರವಾದ ಕನ್ನಡಿಗ!

ಪೊಲೀಸರು ಸರಿಯಾಗಿ ತನಿಖೆ ನಡೆಸಿದಾಗ ಮನೆಯಲ್ಲಿ ರೊಟ್ಟಿ ಮಾಡಲು ಬಳಸುವ ಗೋಧಿಗೆ ಆಕೆ ಮತ್ತು ಪ್ರಿಯಕರ ವಿಷ ಹಾಕಿರೋದು ಗೊತ್ತಾಗಿದೆ. ಬಳಿಕ ಇಬ್ಬರನ್ನು ಅರೆಸ್ಟ್​ ಮಾಡಿದ್ದಾರೆ. ಪ್ರೀತಿಗಾಗಿ ಮನೆ ಮಗಳೇ ಮನೆಯವರನ್ನು ಕೊಂದ ಘಟನೆ ಮಾತ್ರ ಎಲ್ಲರನ್ನು ಅಚ್ಚರಿಗೆ ದೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment