/newsfirstlive-kannada/media/post_attachments/wp-content/uploads/2024/10/family.jpg)
ಯುವತಿಯೊಬ್ಬಳು ಆಹಾರದಲ್ಲಿ ವಿಷ ಬೆರೆಸಿ ಕುಟುಂಬದ 13 ಜನರನ್ನು ಕೊಂದ ಘಟನೆ ಬೆಳಕಿಗೆ ಬಂದಿದೆ. ಆಕೆಯ ಇಷ್ಟದಂತೆ ಮನೆಯವರು ಮದುವೆಗೆ ಒಪ್ಪಲಿಲ್ಲ ಎಂಬ ಕಾರಣಕ್ಕೆ ಯುವತಿ ಆಹಾರದಲ್ಲಿ ವಿಷ ಬೆರೆಸಿದ್ದಾಳೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ ಈ ದುರ್ಘಟನೆ ನಡೆದಿದೆ. ಅಲ್ಲಿನ ಖೈರಪುದ ಸಮೀಪದ ಹೂಬತ್ ಖಾನ್ ಬ್ರೋಹಿ ಗ್ರಾಮದಲ್ಲಿ ಕುಟುಂಬದ 13 ಜನರನ್ನು ಯುವತಿ ಕೊಂದಿದ್ದಾಳೆ.
ಇದನ್ನೂ ಓದಿ: ವೀಕ್ಷಕರಿಗೆ ಮತ್ತೊಂದು ಬಿಗ್ ಅಪ್ಡೇಟ್; ದೊಡ್ಡ ಮಟ್ಟದಲ್ಲಿ ಸದ್ದು ಮಾಡೋಕೆ ಸಜ್ಜಾದ ರಿಯಾಲಿಟಿ ಶೋ
ಇಷ್ಟದ ಹುಡುಗನನ್ನು ಮದುವೆಯಾಗಲು ಮನೆಯವರು ಒಪ್ಪಿರಲಿಲ್ಲ. ಇದರಿಂದ ಯುವತಿ ಕೋಪಗೊಂಡಿದ್ದಲ್ಲದೆ ಪ್ರಿಯಕರನ ಜೊತೆಗೆ ಸಂಚು ರೂಪಿಸಿದ್ದಾಳೆ. ಆಹಾರದಲ್ಲಿ ವಿಷ ಬೆರೆಸಿ ಕುಟುಂಬದ 13 ಜನರನ್ನು ಕೊಂದಿದ್ದಾಳೆ.
ಹಿರಿಯ ಪೊಲೀಸ್ ಅಧಿಕಾರಿ ಇನಾಯತ್ ಶಾ, ‘ಮನೆಯ 13 ಜನರು ಆಹಾರ ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅದರೆ ಅವರೆಲ್ಲರೂ ಸಾವನ್ನಪ್ಪಿದರು. ಮರಣೋತ್ತರ ಪರೀಕ್ಷೆ ವೇಳೆ ವಿಷಪೂರಿತ ಆಹಾರ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂತು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿಭಾವಂತ ವಿದ್ಯಾರ್ಥಿ ಕಾಲೇಜು ಫೀಸು ಕಟ್ಟಿದ KL ರಾಹುಲ್; ನೂರಾರು ಬಡವರಿಗೆ ನೆರವಾದ ಕನ್ನಡಿಗ!
ಪೊಲೀಸರು ಸರಿಯಾಗಿ ತನಿಖೆ ನಡೆಸಿದಾಗ ಮನೆಯಲ್ಲಿ ರೊಟ್ಟಿ ಮಾಡಲು ಬಳಸುವ ಗೋಧಿಗೆ ಆಕೆ ಮತ್ತು ಪ್ರಿಯಕರ ವಿಷ ಹಾಕಿರೋದು ಗೊತ್ತಾಗಿದೆ. ಬಳಿಕ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ