ಆತ್ಮಹತ್ಯೆ ಅಲ್ಲ ಬರ್ಬರ ಹತ್ಯೆ.. ಪ್ರಬುದ್ಧ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!

author-image
Bheemappa
Updated On
ಆತ್ಮಹತ್ಯೆ ಅಲ್ಲ ಬರ್ಬರ ಹತ್ಯೆ.. ಪ್ರಬುದ್ಧ ಸಾವಿನ ಕೇಸ್‌ಗೆ ಹೊಸ ಟ್ವಿಸ್ಟ್; ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!
Advertisment
  • ಎಲ್ಲಿ ಅಪ್ಪ ಅಮ್ಮನಿಗೆ ಹೇಳ್ತಾಳೋ ಅನ್ನೋ ಭಯದಲ್ಲಿ ಹತ್ಯೆ ಮಾಡಿದ್ನಾ?
  • ಈ ಸಂಬಂಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದ ತಾಯಿ
  • ಆದರೆ ಯುವತಿ ಮೃತದೇಹದ ಬಳಿ ಡೆತ್​ನೋಟ್ ಬರೆದಿಟ್ಟಿದ್ದು ಯಾರು?

ಬೆಂಗಳೂರು: ನಗಗರದ ಸುಬ್ರಹ್ಮಣ್ಯಪುರ ಬಳಿಯ ಪ್ರಭುದ್ಧ ಎಂಬ ಯುವತಿ ಸಾವಿನ ಕೇಸ್​ಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು ಯುವತಿಯನ್ನು ಕೊಲೆ ಮಾಡಿದ ಅಪ್ರಾಪ್ತ ಬಾಲಕನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಮಗಳು ಪ್ರಭುದ್ಧ (20) ಸಾವಿನ‌ ಬಗ್ಗೆ ಅನುಮಾನ ವ್ಯಕ್ತಪಡಿಸಿ ತಾಯಿ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಸ್ವಭಾವದವಳಲ್ಲ, ಅದಕ್ಕೆ ಯಾವುದೇ ಕಾರಣ ಇಲ್ಲ. ನನ್ನ ಮಗಳನ್ನು ಯಾರೋ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ ಪೊಲೀಸರು ಕೊನೆಗೂ ಅಪ್ರಾಪ್ತ ಬಾಲಕನನ್ನ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:3 ಕಿಲೋ ಮೀಟರ್​ ದೂರ ಕೇಳಿಸಿದ ಸ್ಫೋಟದ ಸದ್ದು.. 6 ಮಂದಿ ಸಾವು; ಆಗಿದ್ದೇನು?

publive-image

15 ವರ್ಷದ ಬಾಲಕ ಮನೆಯಲ್ಲಿ 2 ಸಾವಿರ ರೂಪಾಯಿಗಳನ್ನು ಕಳ್ಳತನ ಮಾಡಿದ್ದನು. ಇದನ್ನು ನೋಡಿದ್ದ ಯುವತಿ, ನಿನ್ನ ಪೋಷಕರಿಗೆ ಹೇಳೋದಾಗಿ ಬಾಲಕನಿಗೆ ಹೆದರಿಸಿದ್ದಳು. ಎಲ್ಲಿ ಅಪ್ಪ-ಅಮ್ಮನಿಗೆ ಹೇಳುತ್ತಾಳೋ ಎನ್ನುವ ಭಯದಲ್ಲಿ ಬಾಲಕ ಹತ್ಯೆ ಮಾಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹಣ ಕದ್ದಿದ್ದನ್ನು ತಂದೆ, ತಾಯಿಗೆ ಹೇಳುತ್ತಾಳೆ ಎಂದು ಭಯಗೊಂಡ ಅಪ್ರಾಪ್ತನು ಹರಿತವಾದ ಚಾಕುವಿನಿಂದ ಯುವತಿಯ ಕೈ ಹಾಗೂ ಕುತ್ತಿಗೆ ಕುಯ್ದು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ. ಕೊಲೆ ಮಾಡಿದ ಬಳಿಕ ಬಾಲಕ ಡೆತ್​ನೋಟ್​ ಅನ್ನು ಬರೆದಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡಂತೆ ರೂಪಿಸಿದ್ದನು. ಸದ್ಯ ಈ ಸಂಬಂಧ ಪೊಲೀಸರು ಅಪ್ರಾಪ್ತ ಬಾಲಕನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಪೋರ್ಶ್​ ಕಾರು ಆಕ್ಸಿಡೆಂಟ್​; 1 ಗಂಟೆ ಟಿವಿ, 2 ಗಂಟೆ ಆಟ.. ರಿಮಾಂಡ್​ನಲ್ಲಿ ಬಾಲಾಪರಾಧಿ ಏನೇನು ಮಾಡಬೇಕು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment