/newsfirstlive-kannada/media/post_attachments/wp-content/uploads/2024/10/TMK-GIRL-RESCUED.jpg)
ಸೆಲ್ಫಿ ಹುಚ್ಚು ಕೆಲವೊಮ್ಮೆ ಪ್ರಾಣ ಕಂಟಕವಾಗಿ ಪರಿಣಮಿಸಿದ ಹಲವು ಘಟನೆಗಳು ನಮ್ಮ ಮುಂದೆಯೇ ಇವೆ. ಅಪಾಯದ ಜಾಗಗಳಲ್ಲಿ ಮಿತಿಮೀರಿದ ಅಪಾಯವನ್ನು ಮೈಮೇಲೆ ಎಳೆದುಕೊಂಡು ಸೆಲ್ಫಿ ರೀಲ್ಸ್ ಎಂದುಕೊಂಡು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಅಂತಹುದೇ ಘಟನೆ ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ನಡೆದಿದೆ.
19 ವರ್ಷದ ಹಂಸ ಎಂಬ ಯುವತಿ ತನ್ನ ಗೆಳತಿ ಕೀರ್ತನಾಳ ಜೊತೆ ಮಂದಾರಗಿರಿಯ ಬೆಟ್ಟಕ್ಕೆ ಹೋಗಿದ್ದಳು. ಅಲ್ಲಿ ಸುತ್ತಾಡಿ ಕೆಳಗೆ ಬಂದಾಗ ಬೆಟ್ಟಕ್ಕೆ ಅಂಟಿಕೊಂಡಿದ್ದ ಮೈದಾಳ ಕೆರೆಯ ಕೋಡಿ ಬಿದ್ದು ಜಲಪಾತದಂತೆ ಕಣ್ಮನ ಸೆಳೆಯುತ್ತಿತ್ತು. ಫೋಟೋಗೂ ಯುವತಿಯರಿಗೂ ಒಂದು ಬಿಡಿಸಲಾಗದ ನಂಟು ಇದೆ. ಒಳ್ಳೆ ಲೋಕೆಶನ್ ಫೋಟೋ ತೆಗೆದುಕೊಳ್ಳೊಕೆ ಉಳಿದವರು ಹೋದಂತೆ ಈ ಇಬ್ಬರು ಅಲ್ಲಿಗೆ ಹೋಗಿದ್ದಾರೆ. ಇಬ್ಬರೂ ಗೆಳತಿಯರು ಸೆಲ್ಫಿಗಳನ್ನು ತೆಗೆದುಕೊಂಡಿದ್ದಾರೆ. ಬಳಿಕ ಅವರಂತೆಯೇ ಅಲ್ಲಿ ಕೆರೆಯನ್ನು ನೋಡಲು ಬಂದವರಿಗೆ ನಮ್ಮಿಬ್ಬರ ಫೋಟೋ ತೆಗೆಯಿರಿ ಎಂದು ಕೇಳಿಕೊಂಡಿದ್ದಾರೆ ಗೆಳತಿಯರು. ಅವರು ಫೋಟೋ ತೆಗೆದುಕೊಟ್ಟಾದ ಮೇಲೆ ಕೆರಯಿಂದ ಈಚೆ ಬರುವಾಗ ಕೆರಯಲ್ಲಿದ್ದ ಬಂಡೆಗಳನ್ನು ದಾಟಿಕೊಂಡು ಬರುವಾಗ ಹಂಸ ಜಾರಿ ಬಿದ್ದಿದ್ದಾಳೆ.
ಇದನ್ನೂ ಓದಿ:ಸೆಲ್ಫಿ ತೆಗೆದುಕೊಳ್ಳುವಾಗ ಆಪತ್ತು.. 12 ಗಂಟೆ ಕೆರೆ ಕೋಡಿ ನೀರಿನಲ್ಲಿ ಸಿಲುಕಿದ್ದ ಯುವತಿ; ಆಮೇಲೇನಾಯ್ತು?
ಮೊದಲೇ ಕೆರೆಯಲ್ಲಿ ಸಾಕಷ್ಟು ಬಂಡೆಗಳಿವೆ. ಅಲ್ಲಿ ಸಹಜವಾಗಿ ಗುಹೆಯಂತಹ ಜಾಗಗಳು ನಿರ್ಮಾಣವಾಗಿವೆ. ಹಂಸ ಅವುಗಳ ಒಳಗೆ ಬಿದ್ದು ಹೋಗಿದ್ದಾಳೆ. ಕೂಡಲೇ ಹಂಸಳ ಗೆಳತಿ ಕೀರ್ತನಾ ಅವರ ತಂದೆಗೆ ಫೋನ್ ಮಾಡಿದ್ದಾಳೆ. ಕೆಲವರು ಅಗ್ನಿಶಾಮಕ ದಳಕ್ಕೂ ಕೂಡ ಫೋನ್​ ಮಾಡಿದ್ದಾರೆ ಕೂಡಲೇ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿದೆ. ಕೆರೆಯ ಕೋಡಿಯ ರಭಸ ನೋಡಿದ ಅಗ್ನಿಶಾಮಕ ಸಿಬ್ಬಂದಿ ಕೆರೆಗೆ ಬಿದ್ದಿರುವ ಯುವತಿ ಕೊಚ್ಚಿ ಹೋಗಿರುವ ಸಾಧ್ಯತೆಯಿದೆ ಅಂದಕೊಂಡಿದ್ದರು. ಕೊನೆಗೆ ಮೃತದೇಹವನ್ನಾದರೂ ಪತ್ತೆ ಮಾಡೋಣ ಅಂತ ನಿನ್ನೆ ಸಾಯಂಕಾಲ 7 ಗಂಟೆಯಿಂದ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ದಳದ 15 ಸಿಬ್ಬಂದಿಯ ಪಡೆ 7 ಗಂಟೆಯವರೆಗೆ ನಿರಂತರ ಶೋಧ ಕಾರ್ಯ ನಡೆಸಿದ್ದಾರೆ. ಕತ್ತಲಾಗಿದ್ದ ಕಾರಣ, ಅಲ್ಲಿಗೆ ನಿಲ್ಲಿಸಿ ಇಂದು ಮುಂಜಾನೆ ಮತ್ತೆ 7 ಗಂಟೆಯಿಂದ ಮತ್ತೆ ಕಾರ್ಯಾಚರಣೆ ನಡೆಸುತ್ತಾರೆ.
/newsfirstlive-kannada/media/post_attachments/wp-content/uploads/2024/10/TMK-GIRL-RESCUED-1.jpg)
ಪೊಟರೆಯಂತ ಜಾಗದೊಳಗೆ ಬಿದ್ದಿದ್ದ ಹಂಸ, ಅಗ್ನಿಶಾಮಕ ದಳದ ಜನರು ಹುಡುಕಾಟದ ಸದ್ದು ಹಾಗೂ ಜನರ ಸುಳಿದಾಟವನ್ನು ಗಮನಿಸಿದಾಗ ಹಂಸ ಕೂಗಿಕೊಳ್ಳುತ್ತಾಳೆ. ಕೂಡಲೇ ಎಚ್ಚೆತ್ತ ಅಗ್ನಿಶಾಮಕ ಸಿಬ್ಬಂದಿ ಹಂಸ ಇರುವ ಜಾಗ ಕೂಡಲೇ ಪತ್ತೆ ಹಚ್ಚಿದೆ ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಆಕೆಯನ್ನು ಆಚೆ ಕರೆತರುತ್ತಾರೆ. 12 ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಹಂಸ ಪವಾಡಸದೃಶ್ಯದ ರೀತಿಯಲ್ಲಿ ಸಾವಿನಿಂದ ಪಾರಾಗಿ ಬಂದಿದ್ದಾಳೆ. ಅಗ್ನಿಶಾಮಕ ದಳದ ಈ ಸಾಹಸಕ್ಕೆ ಎಲ್ಲರೂ ಹ್ಯಾಟ್ಸ್​ ಆಫ್​ ಹೇಳಿದ್ದು. ಅವರ ನಿರಂತರ ಪ್ರಯತ್ನದಿಂದಾಗಿಯೇ ಈಗ ಹಂಸ ಬದುಕುಳಿದಿದ್ದಾಳೆ ಎಂದು ಜನರು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us