ಪ್ರೇಮಿಗಳ ದಿನದಂದೇ ಪ್ರಿಯತಮನ ವಿರುದ್ಧ ರಿವೇಂಜ್ ತೀರಿಸಿಕೊಂಡ ಯುವತಿ; ಸುಸ್ತಾದ ಪ್ರಿಯಕರ..!

author-image
Gopal Kulkarni
Updated On
ಪ್ರೇಮಿಗಳ ದಿನದಂದೇ ಪ್ರಿಯತಮನ ವಿರುದ್ಧ ರಿವೇಂಜ್ ತೀರಿಸಿಕೊಂಡ ಯುವತಿ; ಸುಸ್ತಾದ ಪ್ರಿಯಕರ..!
Advertisment
  • ಮಾಜಿ ಪ್ರಿಯತಮನ ವಿರುದ್ಧ ಸ್ವೀಟ್​ ರಿವೇಂಜ್​ ತೆಗೆದುಕೊಂಡ ಯುವತಿ
  • ಹಳೆ ಪ್ರೇಯಸಿ ಮಾಡಿದ ಕಿತಾಪತಿಗೆ ಬಳಲಿ ಬೆಂಡಾಗಿ ಹೋದ ಯುವಕ
  • ಅಸಲಿಗೆ ಮಾಜಿ ಹುಡುಗಿ ತನ್ನ ಬಾಯ್​ಫ್ರೆಂಡ್​ಗೆ ಮಾಡಿದ್ದಾದರೂ ಏನು?

ಹುಡುಗ ಕೈಕೊಟ್ಟ, ಇಲ್ಲವೇ ಹುಡುಗಿ ಕೈಕೊಟ್ಲು ಅಂತ ಪ್ರೇಮಿಗಳು ದ್ವೇಷ ಸಾಧನೆಗೆ ನಿಂತು ಬಿಡುತ್ತಾರೆ. ಅವನನ್ನ, ಅವಳನ್ನ ಸುಮ್ಮನೇ ಬಿಡಬಾರದು ಎಂಬ ಜಿದ್ದಿಗೆ ಬೀಳುತ್ತಾರೆ. ಒಮ್ಮೆ ಈ ಜಿದ್ದು ದೊಡ್ಡ ಮಟ್ಟಕ್ಕೆ ಹೋದರೆ ಅನೇಕ ಅಪಾಯಗಳು ಸಂಭವಿಸುವ ಸಾಧ್ಯತೆಗಳು ಇರುತ್ತವೆ. ಆದ್ರೆ ಅಸಲಿಗೆ ರಿವೇಂಜ್ ಎನ್ನುವುದು ಆ ರೀತಿ ಇರಲೇಬಾರದು ಅಂತ ಅನೇಕ ಜನರು ಹೇಳಿದ್ದಾರೆ. ಯಾವ ಹುಡುಗಿಯಿಂದ ಅಥವಾ ಯಾವ ಹುಡುಗನಿಂದ ನೀವು ರಿಜೆಕ್ಟ್ ಆಗಿರುತ್ತಿರೋ, ಅವರು ಎಂದು ಊಹಿಸದಷ್ಟು ಎತ್ತರಕ್ಕೆ ನೀವು ಬೆಳೆದು ನಿಲ್ಲುವುದೇ ನಿಮ್ಮ ಅಸಲಿ ದ್ವೇಷ ಸಾಧನೆ ತೀರಿದಂತೆ ಎಂದು ಕೂಡ ಹೇಳುತ್ತಾರೆ. ಆದರೆ ಇದರ ನಡುವೆ ಸಿಹಿಯಾದ ಒಂದು ಸೇಡನ್ನು ತೀರಿಸಿಕೊಂಡಿದ್ದಾಳೆ ಒಬ್ಬ ಯುವತಿ.


">February 14, 2025

ಈಗಾಗಲೇ ವ್ಯಾಲೆಂಟೈನ್ಸ್​ ಡೇನ ಹಾವಳಿ ಒಂದು ವಾರದಿಂದ ನಡೆಯುತ್ತಲೇ ಇದೆ. ಹಗ್​ ಡೇ, ಟೆಡ್ಡಿ ಡೇ, ಕಿಸ್ ಡೇ, ಅಂತೆಲ್ಲಾ ಈಗ ಫೆಬ್ರುವರಿ 14ಕ್ಕೆ ವ್ಯಾಲೆಂಟೈನ್ಸ್ ಡೇ ಬಂದಿದೆ. ಈ ವ್ಯಾಲೆಂಟೈನ್ಸ್​ ಡೇ ದಿನದಂತೆ ತನ್ನ ಮಾಜಿ ಪ್ರಿಯಕರ ವಿರುದ್ಧ ಸೇಡು ತೀರಿಸಿಕೊಳ್ಳಲು ಸಖತ್​ ಐಡಿಯಾ ಮಾಡಿದ್ದಾಳೆ. ಗುರುಗ್ರಾಂನ ಸೆಕ್ಟರ್ 23ರಲ್ಲಿ ನಡೆದ ಘಟನೆಯಿದು. ಮಾಜಿ ಪ್ರಿಯತಮನ ವಿರುದ್ಧ ಸೇಡು ತೀರಿಸಿಕೊಳ್ಳಲು ಯುವತಿ ಆತನ ಮನೆಯ ವಿಳಾಸಕ್ಕೆ 100 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾಳೆ. ಕ್ಯಾಶ್ ಅನ್ ಡಿಲೇವರಿಯಲ್ಲಿ ಸುಮಾರು 100 ಪಿಜ್ಜಾಗಳನ್ನು ಆರ್ಡರ್ ಮಾಡಿದ್ದಾಳೆ.

ಇದನ್ನೂ ಓದಿ:Valentine’s Day: ಒಂದೇ ಒಂದು ಅಪ್ಪುಗೆ, ದೇಹಕ್ಕೆ ಅದ್ಭುತ ಲಾಭ.. ಪ್ರೇಮಿಗಳೇ ನಿಮಗೆ ಈ 5 ಶಕ್ತಿ ಗೊತ್ತಿರಲಿ..!

ಹುಡುಗನ ಫ್ಲ್ಯಾಟ್​ಗೆ ಒಂದಾದರ ಮೇಲೆ ಒಂದರಂತೆ ಪಿಜ್ಜಾಗಳು ಬಂದು ಬೀಳಲು ಆರಂಭಿಸಿವೆ. ಯುವಕನ ಮುಂದೆ 100 ಪಿಜ್ಜಾಗಳನ್ನು ತಂದಿಟ್ಟ ಡೆಲಿವರಿ ಬಾಯ್​ಗಳು ಹಣ ನೀಡುವಂತೆ ಕೇಳಿದ್ದಾರೆ. 100 ಪಿಜ್ಜಾಗಳನ್ನು ಖರೀದಿಸಲಾರದೆ ಯುವಕ ವಿವಲಿವಿಲಿ ಒದ್ದಾಡಿದ್ದಾನೆ. ನಾನು ಪಿಜ್ಜಾಗಳನ್ನು ಆರ್ಡರ್ ಮಾಡಿಲ್ಲ, ದಯವಿಟ್ಟು ಇವುಗಳನ್ನು ವಾಪಸ್ ತೆಗೆದುಕೊಂಡು ಹೋಗಿ ಎಂದು ಗೋಗರೆದಿದ್ದಾನೆ. ಒಂದು ಕಡೆ ಯುವಕ ಹಣ ನೀಡಲಾಗದೇ ಒದ್ದಾಡುತ್ತಿದ್ದರೆ. ಇನ್ನೊಂದು ಕಡೆ ಆತನ ಮಾಜಿ ಪ್ರೇಯಿಸಿ ಈ ಕಿತಾಪತಿ ಮಾಡಿ ಒಳಗೊಳಗೆ ಸಂತೋಷಪಡುತ್ತಿದ್ದಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment