Advertisment

VIDEO: ಕಣ್ ಕಣ್ಣ ಸಲಿಗೆ.. ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದವಳ ಕಣ್ಣಿಗೆ ಕಳೆದು ಹೋದ ಜನರು!

author-image
Gopal Kulkarni
Updated On
VIDEO: ಕಣ್ ಕಣ್ಣ ಸಲಿಗೆ.. ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿದ್ದವಳ ಕಣ್ಣಿಗೆ ಕಳೆದು ಹೋದ ಜನರು!
Advertisment
  • ರುದ್ರಾಕ್ಷಿ ಮಾರುವ ಯುವತಿಯ ಅಕ್ಷಿಗಳಿಗೆ ಕಳೆದು ಹೋದ ಜನರು
  • ಮಹಾಕುಂಭಮೇಳದಲ್ಲಿ ಕಣ್ಣಿನಿಂದಲೇ ಸುದ್ದಿಯಾದ ಮುದ್ದು ಯುವತಿ
  • ಗಂಗೆಯಲ್ಲಿ ಮುಳುಗಿದವರಿಗಿಂತ ಇವಳ ಕಂಗಳಲ್ಲೆ ಮುಳುಗಿದವರೇ ಜಾಸ್ತಿ

ಕಣ್ಣಿನ ನೋಟದಲ್ಲಿಯೇ ಕೋಲ್ಮಿಂಚಿನ ಬಾಣಗಳು ಹೊರಡುತ್ತಿದ್ದವು, ಮೀನ ಕಣ್ಣೋಳೆ ಅನ್ನೋ ಕವಿ ಮಾತಿಗೆ ಉಪಮಾನ ಉಪಮೇಯವಾಗಿ ನಿಂತಿದ್ದವು ಈ ಹುಡುಗಿ ಕಣ್ಣುಗಳು. ಇಡೀ ಮಹಾಕುಂಭಮೇಳೆವೇ ಅಪರೂಪದ ಕಣ್ಣೋಟದ ಹುಡುಗಿಯ ಕಣ್ಣಲ್ಲಿ ಕಳೆದು ಹೋಗಿತ್ತು. ಹೆಣ್ಣಿನ ಅಂದವನ್ನು ನೂರು ಪಟ್ಟು ಹೆಚ್ಚು ಮಾಡುವುದೇ ಅವರ ಮಾದಕ, ಮೋಹಕ ಕಣ್ಣುಗಳು ಮಹಾಕುಂಭಮೇಳದಲ್ಲಿ ಈಗ ಒಂದು ಯುವತಿಯ ಕಣ್ಣುಗಳು ದೊಡ್ಡ ಸುದ್ದಿಯಾಗಿವೆ. ಆ ಯುವತಿಯ ಕಣ್ಣಿನ ವಿಡಿಯೋಗಳೇ ಎಲ್ಲೆಲ್ಲಿಯೂ ಹರಿದಾಡುತ್ತಿವೆ.

Advertisment

ಇದನ್ನೂ ಓದಿ:ಸ್ಟೀವ್ ಜಾಬ್ಸ್ ಪತ್ನಿಗೆ ಆಧ್ಯಾತ್ಮಿಕ ದೀಕ್ಷೆ ನೀಡಿದ ಸ್ವಾಮಿ ಕೈಲಾಶಾನಂದ ಗಿರಿ ಯಾರು..?

ಮಹಾಕುಂಭಮೇಳ 2025 ಪ್ರಯಾಗರಾಜ್​ನಲ್ಲಿ ಕೋಟ್ಯಾಂತರ ಭಕ್ತಾದಿಗಳನ್ನು ಸೆಳೆಯುತ್ತಿದೆ. ಅನೇಕ ನಾಗಾ ಸಾಧುಗಳು ಅಘೋರಿಗಳು ಆಗಮಿಸಿ ಅವರವರ ಕಥೆಗಳನ್ನು ಹೇಳಿಕೊಳ್ಳುತ್ತಿದ್ದಾರೆ.ಐಐಟಿ ಬಿಟ್ಟು ಬಾಬಾಗಳಾದವರೂ. ಹೊರದೇಶದಿಂದ ಬಂದು ಇಲ್ಲಿಯ ಆಧ್ಯಾತ್ಮಕ ಸೆಳೆತಕ್ಕೆ ಒಳಗಾದವರು ಹೀಗೆ ಹಲವು ಕಥೆಗಳು ಬಿಚ್ಚಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಮಹಾಕುಂಭಮೇಳದಲ್ಲಿ ರುದ್ರಾಕ್ಷಿ ಮಾರುತ್ತಿರುವ ಯುವತಿಯೊಬ್ಬಳ ಮಾದಕ, ಮೋಹಕ ಕಣ್ಣುಗಳು ಇಂಟರ್​ನೆಟ್​ನಲ್ಲಿ ಜನರನ್ನು ಸೆಳೆದಿವೆ.

Advertisment

ಅದು ಮಾತ್ರವಲ್ಲ ಆ ಯುವತಿಯ ಕಣ್ಣೋಟಕ್ಕೆ ಮಾರು ಹೋದ ಅನೇಕರು ಆಕೆಯ ವಿಡಿಯೋ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಪತ್ರಕರ್ತರು ಆಕೆಯ ಸಂದರ್ಶನವನ್ನು ಮಾಡಿದ್ದಾರೆ. ಸದ್ಯ ಆಕೆಯ ಮುಗ್ಧ ಮುಖ, ಮುದ್ದು ಕಣ್ಣು ಹಾಗೂ ಪರಿಶುದ್ಧ ನಗು ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ.


ಕಳೆದ ಮೂರು ದಿನಗಳಿಂದ ಈ ಯುವತಿ ಕುಂಭಮೇಳದಲ್ಲಿ ರುದ್ರಾಕ್ಷಿಯನ್ನು ಮಾರುತ್ತಿದ್ದಾಳೆ. ಇದೇ ಮೊದಲ ಬಾರಿಗೆ ಕುಂಭಮೇಳಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾಳೆ. ಇಂದೋರ್​ನಿಂದ ಬಂದಿರುವ ಈ ಯುವತಿಯ ಹೆಸರು ಇನ್ನೂ ಕೂಡ ತಿಳಿದಿ ಬಂದಿಲ್ಲ.
ಮುದ್ದು ಹಾಗೂ ಮುಗ್ಧ ಯುವತಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಲಾಗಿದ್ದು, ಕೆಲವರಂತು ಈ ಯುವತಿಯನ್ನು ಹಾಲಿವುಡ್​ ನಟಿ ಎಂಜೆಲಿನಾ ಜೋಲೀಗೆ ಹೋಲಿಸುತ್ತಿದ್ದಾರೆ.

Advertisment

ಈ ಯುವತಿಯ ವಿಡಿಯೋ ಲಕ್ಷಾನುಗಟ್ಟಲೇ ವೀವ್ಸ್ ಪಡೆದಿದ್ದು ಹಲವರಂತೂ ಗಂಗೆಯಲ್ಲಿ ಮುಳುಗಿದವರಿಗಿಂತ ಈಕೆಯ ಕಂಗಳಲ್ಲಿ ಮುಳುಗಿದವರೇ ಹೆಚ್ಚು ಎಂದು ಕಮೆಂಟ್ ಹಾಕುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment