/newsfirstlive-kannada/media/post_attachments/wp-content/uploads/2024/08/INSTA.jpg)
ಸದ್ಯ ಬಾಲಿವುಡ್​ ಅಂಗಳದಲ್ಲಿ ವಿಕ್ಕಿ ಕೌಶಾಲ್ ಅಭಿನಯದ ಬ್ಯಾಡ್​ ನ್ಯೂಸ್​ ಸಿನಿಮಾದ ತೌಬಾ ತೌಬಾ ಸಾಂಗ್ ಸಖತ್ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲೂ ಇದೇ ಹಾಡು ಟ್ರೆಂಡ್​​ನಲ್ಲಿದೆ. ಇದೇ ತೌಬಾ ತೌಬಾ ಸಾಂಗ್​ಗೆ ಮೈಂತ್ರಾ ಫ್ಯಾಶನ್​ ಸೂಪರ್ ಸ್ಟಾರ್​, ಬ್ಯೂಟಿ ತನುಮಿತಾ ಘೋಷ್ ಫುಲ್ ಫಿದಾ ಆಗಿ ಕೇವಲ ಟವೆಲ್​ನಲ್ಲೇ ರೋಡ್​ಗೆ ಬಂದು ಪಡ್ಡೆ ಹೈಕ್ಳಾ.. ನಿದ್ದೆಗೆಡಿಸಿದ್ದಾರೆ.
ಇದನ್ನೂ ಓದಿ:ಬೆಟ್ಟದ ತುತ್ತತುದಿಯಲ್ಲಿದ್ದ ಕುಟುಂಬ.. ದಟ್ಟ ಮಂಜು, ಜಾರುವ ಬಂಡೆಗಳ ಮಧ್ಯೆ ಜೀವ ಉಳಿಸಿಕೊಂಡಿದ್ದೇ ಸಾಹಸ!
ಬ್ಯೂಟಿ ತನುಮಿತಾ ಘೋಷ್ ತಮ್ಮ ಇನ್​ಸ್ಟಾದಲ್ಲಿ ಈ ವಿಡಿಯೋ ಶೇರ್ ಮಾಡಿಕೊಂಡಿದ್ದು, ವಿಡಿಯೋದಲ್ಲಿ ಹಾಗ ತಾನೇ ಶವರ್​​ನಿಂದ ಸ್ನಾನ ಮುಗಿಸಿ ಮೈಗೆ ಟವೆಲ್ ಸುತ್ತಿಕೊಂಡು ಹೊರ ಬಂದಾಗೆ ಮುಂಬೈನ ರೋಡ್​ಗಳಿಗೆ ಬಂದಿದ್ದಾರೆ. ಪಿಂಕ್ ಕಲರ್ 2 ಟವೆಲ್​ಗಳನ್ನ ತಲೆಗೆ, ಮೈಗೆ ಸುತ್ತಿಕೊಂಡು ಬಸ್​ ಸ್ಟಾಪ್​ ಮುಂದಿನ ರಸ್ತೆ ದಾಟುತ್ತಾರೆ. ಹೀಗೆ ಮುಂಬೈನ ಕೆಲ ರಸ್ತೆಗಳನ್ನ ತನುಮಿತಾ ಸುತ್ತಾಡಿದ್ದಾರೆ. ಬಳಿಕ ಮಾಲ್​ ಮುಂದೆ ನಾಲ್ಕೈದು ಯುವಕರು ನಡೆದುಕೊಂಡು ಹೋಗುತ್ತಿರುತ್ತಾರೆ. ಆಗ ಅವರ ಮುಂದೆ ಬಂದ ತನುಮಿತಾ, ತಕ್ಷಣ ಎರಡು ಟವೆಲ್​ಗಳನ್ನು ಬಿಚ್ಚಿದ್ದು ಯುವಕರು ಶಾಕ್ ಆಗಿದ್ದಾರೆ. ಆದ್ರೆ ತನುಮಿತಾ ಟವೆಲ್​ ಒಳಗೆ ಸ್ಕರ್ಟ್​ ಡ್ರೆಸ್​ ಹಾಕಿದ್ದರು. ಹಾಗೇ ಸ್ಟೈಲ್​ ಆಗಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿ ನಡೆದು ಮುಂದೆ ಹೋಗುತ್ತಾರೆ.
View this post on Instagram
ತೌಬಾ ತೌಬಾ ಸಾಂಗ್​ನಲ್ಲಿ ನನ್ನನ್ನು ಈ ರೀತಿ ಮುಂಬೈ ಜನರು ನೋಡಲಿ ಎಂದು ಮಾಡಿದ್ದೇನೆ ಅಂತ ತನುಮಿತಾ ಇನ್​ಸ್ಟಾದಲ್ಲಿ ಟ್ಯಾಗ್​ನಲ್ಲಿ ಬರೆದುಕೊಂಡಿದ್ದಾರೆ. ಇದೊಂದು ಫ್ರ್ಯಾಂಕ್ ವಿಡಿಯೋ ಎಂದು ಹೇಳಿದ್ದಾರೆ. ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸದ್ಯ ಇದಕ್ಕೆ ಟೀಕೆಗಳು ವ್ಯಕ್ತವಾಗುತ್ತಿದ್ದು ಇಂತಹ ದೃಶ್ಯಗಳು ಜನರಿಗೆ ಅವಶ್ಯಕತೆ ಇಲ್ಲ ಎಂದು ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ