ಲವ್ವರ್​ ಜೊತೆ ಸೇರಿಕೊಂಡು ತಾನಿದ್ದ ಮನೆಯಲ್ಲೇ ಕಳ್ಳತನದ ನಾಟಕ! 10.77 ಲಕ್ಷದ ಸ್ವತ್ತು ವಶಕ್ಕೆ

author-image
AS Harshith
Updated On
ಲವ್ವರ್​ ಜೊತೆ ಸೇರಿಕೊಂಡು ತಾನಿದ್ದ ಮನೆಯಲ್ಲೇ ಕಳ್ಳತನದ ನಾಟಕ! 10.77 ಲಕ್ಷದ ಸ್ವತ್ತು ವಶಕ್ಕೆ
Advertisment
  • ಕಿಲಾಡಿ ಲೇಡಿ.. ಸಮಯವ ನೋಡಿ ಸಂಚನು ಮಾಡಿದ ಜೋಡಿ
  • ತಾನಿದ್ದ ಮನೆಯಿಂದ 10.77 ಲಕ್ಷದ ಸ್ವತ್ತು ದೋಚಿದ ಲವ್ವರ್ಸ್​
  • 170 ಗ್ರಾಂ ಬಂಗಾರ, 1.20 ಲಕ್ಷ ಹಣ ಕಳ್ಳತನ ಮಾಡಿದ್ದಾರೆಂದು ನಾಟಕ

ದಾವಣಗೆರೆ: ತನ್ನ ಮನೆಯಲ್ಲಿ ತಾನೇ ಕದ್ದು ಕಳ್ಳತನ ನಾಟಕವಾಡಿದ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಅಗರಬನ್ನಿಹಟ್ಟಿ ಗ್ರಾಮದಲ್ಲಿ ಘಟನೆ ನಡೆದಿದೆ.

ಕಳ್ಳತನದ ನಾಟಕವಾಡಿದ ಯುವತಿಯನ್ನು ಅಗರಬನ್ನಿಹಟ್ಟಿ ಗ್ರಾಮದ ತಸ್ಮೀಯ ಖಾನ್ ಮತ್ತು ಶಿವಮೊಗ್ಗ ಇಲಿಯಾಜ್ ನಗರದ ಮುಜಿಬುಲ್ಲ ಶೇಖ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 10.77 ಲಕ್ಷದ ಸ್ವತ್ತು ವಶಕ್ಕೆ ಪಡೆಯಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇದನ್ನೂ ಓದಿ: ನಾನು 15 ದಿನದ ಬಳಿಕ ಸಾಯ್ತೀನಿ ಎಂದು ಪತ್ರ ಬರೆದಿದ್ದ ಹಿರಿಯ ಕಲಾವಿದ ಇನ್ನಿಲ್ಲ; ಆಗಿದ್ದೇನು?

ತಸ್ಮೀಯ ಖಾನ್ ಅಗರ ಬನ್ನಿಹಟ್ಟಿ ಗ್ರಾಮದಲ್ಲಿ ತನ್ನ ತಂದೆಯ ಜೊತೆ ವಾಸವಿದ್ದಳು. ಸೆಪ್ಟೆಂಬರ್​ 30ರಂದು ತಸ್ಮೀಂ ಖಾನ್ ಒಬ್ಬಳೇ ಮನೆಯಲ್ಲಿದ್ದಾಗ ಪ್ರಜ್ಞೆ ತಪ್ಪಿಸಿ 170 ಗ್ರಾಂ ಬಂಗಾರ, 1.20 ಲಕ್ಷ ಹಣ ಕಳ್ಳತನವಾಗಿರೋ ಬಗ್ಗೆ ದೂರು ನೀಡಿದ್ದಳು.

ಚನ್ನಗಿರಿ ಪೊಲೀಸ್ ಠಾಣೆಗೆ ತೆರಳಿ ತಸ್ಮೀಯ ಖಾನ್ ಸ್ವತ: ದೂರು ನೀಡಿದ್ದಳು. ಈ ಬಗ್ಗೆ ತನಿಖೆಗೆ ಇಳಿದಾಗ ಪೊಲೀಸರಿಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಕೊನೆಗೆ ತಸ್ಮೀಯಳನ್ನ ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾವೇ ಪ್ಲ್ಯಾನ್ ಮಾಡಿ ಕಳ್ಳತನ ಮಾಡಿರೋದಾಗಿ ಹೇಳಿದ್ದಾಳೆ.

ತಸ್ಮೀಯ ಖಾನ್ ಶಿವಮೊಗ್ಗದ ಮುಜಿಬಲ್ಲ ಶೇಖ್​ ಜೊತೆ ಸಂಂಬಂಧ ಹೊಂದಿದ್ದಳು. ಮನೆಯಲ್ಲಿರೋ ಚಿನ್ನಭರಣ, ಹಣ ಇರೋ ಬಗ್ಗೆ ಲವ್ವರ್​ಗೆ ತಿಳಿಸಿದ್ದಳು. ನಂತರ ಇಬ್ಬರ್​ ಪ್ಲಾನ್​ ಹೆಣೆದು ಕಳ್ಳತನದ ಕತೆ ಕಟ್ಟಿದ್ದರು. ಆದರೀಗ ಕೊನೆಗೆ ಇಬ್ಬರು ಸಿಕ್ಕಿಬಿದ್ದಿದ್ದಾರೆ.

ಇದನ್ನೂ ಓದಿ: Mysuru Gram Panchayat: 19 ಲೈಬ್ರರಿ ಮೇಲ್ವಿಚಾರಕರ ಹುದ್ದೆಗಳು ಖಾಲಿ.. ಬೇಗ ಬೇಗ ಅಪ್ಲೈ ಮಾಡಿ

ಪೊಲೀಸರು ಮುಜಿಬುಲ್ಲ ಶೇಖ್​ ನಿಂದ 155 ಗ್ರಾಂ ಬಂಗಾರ ,1.27 ಲಕ್ಷ ಕ್ಯಾಶ್ ವಶಕ್ಕೆ ಪಡೆಯದಿದ್ದಾರೆ. ಇಬ್ಬರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಪ್ರಕರಣ ಪತ್ತೆ ಮಾಡಿದ ಸಿಪಿಐ ಬಾಲಚಂದ್ರ ನಾಯಕ್​ಗೆ ಮತ್ತು ಟೀಂಗೆ ಎಸ್ಪಿ ಉಮಾ ಪ್ರಶಾಂತ ಅಭಿನಂಧನೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment