/newsfirstlive-kannada/media/post_attachments/wp-content/uploads/2024/10/numerology-1.jpg)
ಸಂಖ್ಯಾಶಾಸ್ತ್ರ.. ಇದು ಕೇವಲ ಗಣಿತಕ್ಕೆ ಸೀಮಿತವಲ್ಲ. ಅನೇಕರು ತಮ್ಮ ದೈನಂದಿನ ಜೀವನದಲ್ಲಿ ಸಂಖ್ಯಾಶಾಸ್ತ್ರವನ್ನು ಬಲವಾಗಿ ನಂಬ್ತಾರೆ. ಏಕೆಂದರೆ ಸಂಖ್ಯಾಶಾಸ್ತ್ರವು ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ.. ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರು ಐಷಾರಾಮಿ ಜೀವನವನ್ನು ನಡೆಸಲು ಬಯಸುತ್ತಾರೆ ಎಂದು ಪಂಡಿತರು ಹೇಳ್ತಾರೆ.
ಸಂಖ್ಯಾಶಾಸ್ತ್ರದ ಪ್ರಕಾರ 2, 11 ಮತ್ತು 20 ರಂದು ಜನಿಸಿದ ಹುಡುಗಿಯರು ಮಹತ್ವಾಕಾಂಕ್ಷೆಯವರಾಗಿದ್ದಾರೆ. ಇವರಿಗೆ ಐಷಾರಾಮಿ ಜೀವನ ನಡೆಸಲು ಹೆಚ್ಚು ಆಸಕ್ತಿ. ಅದಕ್ಕಾಗಿ ಅವರು ಕಷ್ಟ ಪಡುತ್ತಾರಂತೆ.
ಮಾತ್ರವಲ್ಲ, ಇತರರೊಂದಿಗೆ ಅವರ ಸಂಬಂಧವು ತುಂಬಾ ಪ್ರಾಮಾಣಿಕವಾಗಿರುತ್ತದೆ. 2, 11, 20 ರಂದು ಜನಿಸಿದ ಹುಡುಗಿಯರು ಗಂಡನಿಗೆ ಒಳ್ಳೆಯ ಹೆಂಡತಿ ಕೂಡ ಆಗಿರ್ತಾಳೆ ಎಂದು ಸಂಖ್ಯಾ ಶಾಸ್ತ್ರ ಹೇಳುತ್ತದೆ. ಹಾಗಾಗಿ ಈ ದಿನಾಂಕಗಳಲ್ಲಿ ಜನಿಸಿದ ಹುಡುಗಿಯರನ್ನು ಮದುವೆಯಾಗುವ ಪುರುಷರು ನಿಜವಾಗಿಯೂ ಅದೃಷ್ಟವಂತರಾಗಿರುತ್ತಾರೆ ಎನ್ನುತ್ತಾರೆ.
ಇದನ್ನೂ ಓದಿ:ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ, ನವದಂಪತಿಗೆ ಶುಭ ಸುದ್ದಿ; ಇಲ್ಲಿದೆ ಇಂದಿನ ರಾಶಿ ಭವಿಷ್ಯ!
ಈ ಡೇಟ್ನಲ್ಲಿ ಜನಿಸಿದ ಹೆಣ್ಮಕ್ಕಳು ಯಾವ ಮನೆಗೆ ಸೊಸೆಯಾಗಿ ಹೋಗುತ್ತಾರೋ ಆ ಮನೆಗೆ ಅದೃಷ್ಟ ಖುಲಾಯಿಸಲಿದೆ. ಲಕ್ಷ್ಮಿ ದೇವಿಯ ಆಶೀರ್ವಾದ ಇದ್ದೇ ಇರುತ್ತದೆ. ಅವರು ಶ್ರೀಮಂತರಾಗಿದ್ದರೆ ಇತರರಿಗೆ ಸಹಾಯ ಮಾಡಲು ಮುಂದೆ ಬರುತ್ತಾರೆ ಎನ್ನಲಾಗಿದೆ. ಅಲ್ಲದೇ ಅವರು ತುಂಬಾ ಆಕರ್ಷಕವಾಗಿರುತ್ತಾರೆ. ಒಳ್ಳೆಯ ವ್ಯಕ್ತಿತ್ವವನ್ನೂ ಹೊಂದಿರುತ್ತಾರೆ. ಯಾವಾಗಲೂ ಸಂತೋಷ. ಐಷಾರಾಮಿ ಬದುಕಲು ಇಷ್ಟಪಡುತ್ತಾರೆ. ಜೊತೆಗೆ ಭಾವನಾತ್ಮಕ ವ್ಯಕ್ತಿ ಹೊಂದಿರುತ್ತಾರೆ ಎಂಬ ನಂಬಿಕೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ