/newsfirstlive-kannada/media/post_attachments/wp-content/uploads/2024/12/JAPAN-NEW-POLICY-1-1.jpg)
ಒಂದು ದೇಶಕ್ಕೆ ಜನಸಂಖ್ಯಾ ಸ್ಫೋಟ ಎಷ್ಟು ಸಮಸ್ಯೆಯೋ ಜನಸಂಖ್ಯೆಯ ಕುಸಿತ ಕೂಡ ಅಷ್ಟೇ ದೊಡ್ಡ ಸಮಸ್ಯೆಯನ್ನು ತಂದೊಡ್ಡುತ್ತದೆ. ಜನಸಂಖ್ಯಾ ಕುಸಿತ ದುಡಿಯುವ ಕೈಗಳನ್ನು ಇಲ್ಲದಂತೆ ಮಾಡುತ್ತದೆ. ದೇಶದಲ್ಲಿ ಯುವಕರ ಸಂಖ್ಯೆಯನ್ನು ಭವಿಷ್ಯದಲ್ಲಿ ಇಲ್ಲದ ಹಾಗೆ ಮಾಡಿ ಬರೀ ವಯೋವೃದ್ಧರೆ ದೇಶದಲ್ಲಿ ಉಳಿಯುವಂತೆ ಮಾಡುತ್ತದೆ. ಇಂತಹ ಅಪಾಯವನ್ನು ಸದ್ಯ ಜಪಾನ್ ದೇಶ ಅನುಭವಿಸುತ್ತಿದೆ. ಕಳೆದ ಹಲವು ವರ್ಷಗಳಿಂದ ಅಲ್ಲಿ ಬರ್ತ್ ರೇಟ್ ಪಾತಾಳಕ್ಕೆ ಬಿದ್ದಿದೆ . ಇದನ್ನು ಸುಧಾರಿಸಲು ಅಲ್ಲಿನ ಸರ್ಕಾರ ಹೊಸ ನೀತಿಯೊಂದನ್ನು ಜಾರಿಗೆ ತರಲು ಸಿದ್ಧವಾಗುತ್ತಿದೆ. 2025ರಿಂದ ಈ ಒಂದು ನೀತಿ ಅನುಷ್ಠಾನಕ್ಕೆ ಬರಲಿದೆ.
ಜಪಾನ್ ಎಂದರೆ ಅದು ಶ್ರಮಿಕರ ನಾಡು. ಅವರ ಕೆಲಸದ ನಿಷ್ಠೆಯನ್ನು ಕಂಡು ಜಗತ್ತೇ ವಿಸ್ಮಯಗೊಂಡಿದೆ. ಹೀರೋಶಿಮಾ ನಾಗಾಸಾಕಿ ಮೇಲೆ ಅಣು ಬಾಂಬ್ ಬಿದ್ದಾಗ ಈ ದೇಶ ಮತ್ತೆ ಮೇಲೇಳಲು ನೂರಾರು ವರ್ಷವೇ ಬೇಕು ಎಂದು ಇಡೀ ಜಗತ್ತೇ ಅಂದಾಜು ಮಾಡಿತ್ತು. ಕೆಲವೇ ವರ್ಷಗಳಲ್ಲಿ ಫಿನಿಕ್ಸ್ನಂತೆ ಮೇಲೆದ್ದು ಬಂದಿದ್ದು ಅಲ್ಲಿಯ ನೀತಿಗಳಿಂದ ಹಾಗೂ ಪ್ರಜೆಗಳ ಶ್ರಮದಿಂದ. ಭಾರತದಲ್ಲಿ ವಾರಕ್ಕೆ 78 ಗಂಟೆ ಕೆಲಸ ಮಾಡಬೇಕು ಅನ್ನೋ ಮಾತುಗಳು ಕೇಳಿ ಬರುತ್ತಿದ್ದರೆ, ಜಪಾನ್ನಲ್ಲಿ ವಾರಕ್ಕೆ ನಾಲ್ಕು ದಿನ ಕೆಲಸ ಮಾಡಿ ಸಾಕು ಎನ್ನುತ್ತಿದೆ.
ಇದನ್ನೂ ಓದಿ:ಚಳಿ ತಾಳಲಾರದೇ ಕಂತೆ ಕಂತೆ ನೋಟುಗಳನ್ನು ಬೆಂಕಿಗೆ ಎಸೆದ ಜನಪ್ರಿಯ ಸ್ಟಾರ್..! Video
ಕಾರಣ ಅಲ್ಲಿ ಕುಸಿದು ಬೀಳುತ್ತಿರುವ ಜನಸಂಖ್ಯಾ ಪ್ರಮಾಣ. ಹೀಗಾಗಿ ಮಕ್ಕಳನ್ನು ಹೆಚ್ಚು ಹೆಚ್ಚು ಮಾಡಿಕೊಳ್ಳಿ ಎಂದು ಸರ್ಕಾರ ಹೇಳುತ್ತಿದೆ. . ಯಾರು 1ನೇ ಕ್ಲಾಸ್ನಿಂದ 3ನೇ ಕ್ಲಾಸ್ವರೆಗೂ ಹೋಗುವ ಪಾಲಕರಿಗೆ ವಿಶೇಷ ನೀತಿಯನ್ನು ಜಾರಿಗೆ ತಂದಿದೆ. ಅವರು ಕೂಡ ವಾರಕ್ಕೆ ಮೂರು ದಿನ ರಜೆ ತೆಗೆದುಕೊಳ್ಳಬಹುದು ಆದ್ರೆ ಅವರ ಸಂಬಳದಲ್ಲಿ ಕಡಿತವಾಗಲಿದೆ ಎಂದು ಹೇಳಲಾಗುತ್ತಿದೆ.
ನಾವು ವರ್ಕ್ಸ್ಟೈಲ್ನ್ನು ಹೇಗೆಲ್ಲಾ ಬದಲಾವಣೆ ಮಾಡಬೇಕು ಎನ್ನುವ ಚಿಂತನೆಯಲ್ಲಿದ್ದೇವೆ. ಯಾರು ಕೂಡ ಮಕ್ಕಳನ್ನು ಪಡೆಯುವುದಕ್ಕಾಗಿ ಕೆಲಸ ಹಾಗೂ ಹಣವನ್ನು ಬಿಡಲು ತಯಾರಿರುವುದಿಲ್ಲ ಎಂದು ಟೋಕಿಯೋ ಗವರ್ನರ್ ಯುರಿಕೊ ಕೊಯಿಕಿ ಹೇಳಿದ್ದಾರೆ. ಸದ್ಯ ಟೋಕಿಯೋಗೆ ಅಂತಹದೊಂದು ಸಮಯ ಬಂದಿದೆ. ಜೀವಗಳನ್ನು ಹಾಗೂ ಜೀವನೋಪಾಯಗಳನ್ನು ರಕ್ಷಿಸುವ ಮತ್ತು ವೃದ್ಧಿಸುವ ಸವಾಲುಗಳಿವೆ ಅದರ ಜೊತೆಗೆ ಸಾರ್ವಜನಿಕರ ಆರ್ಥಿಕ ಬಲವನ್ನು ಕೂಡ ಕಾಪಾಡಬೇಕಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಚಿನ್ನದಿಂದ ಸಿದ್ಧವಾಯ್ತು 10 ಅಡಿ ಕ್ರಿಸ್ಮಸ್ ಟ್ರೀ! ಇದಕ್ಕೆ ತಗುಲಿದ ವೆಚ್ಚ ಎಷ್ಟು ಕೋಟಿ ಗೊತ್ತಾ?
ಸದ್ಯ ಜಪಾನ್ನಲ್ಲಿ ಫಲವಂತಿಕೆ ಸಮಸ್ಯೆಯೊಂದು ಭೀಕರವಾಗಿ ಕಾಡುತ್ತಿದೆ. ಬರ್ತ್ ರೇಟ್ ಯಾವ ಪ್ರಮಾಣಕ್ಕೆ ಕುಸಿದಿದೆ ಎಂದರೆ ಸಾಮಾನ್ಯವಾಗಿ ಒಂದು ಮಹಿಳೆಗೆ ಇರಬೇಕಾದ ಬರ್ತ್ರೇಟ್ 2.1 ಆದ್ರೆ ಈಗ ಜಪಾನ್ನಲ್ಲಿ ಅದು 1.2 ರೇಟ್ಗೆ ಕುಸಿದಿದೆ. 2023ರಲ್ಲಿ ಜಪಾನ್ನಲ್ಲಿ ಮಕ್ಕಳ ಜನನದ ಪ್ರಮಾಣ ಕೇವಲ 7 ಲಕ್ಷ 27 ಸಾವಿರದ 277 ರಷ್ಟು ಮಾತ್ರ. ಇದು ತುಂಬಾ ಆತಂಕಕಾರಿ ವಿಷಯ ಹಾಗೂ ಚಿಂತೆ ಮಾಡಬೇಕಾದ ವಿಷಯ ಹೀಗಾಗಿ ಜಪಾನ್ ಸರ್ಕಾರ ಹೊಸ ಹೊಸ ನೀತಿಗಳನ್ನು ತರಲು ಮುಂದಾಗಿದೆ. ಸುದೀರ್ಘ ಕಾಲದ ಕೆಲಸದ ಸಮಯದಲ್ಲಿ ಕಡಿತ. ಪುರುಷರಿಗೆ ಪೆಟರ್ನಿಟಿ ಲೀವ್, ಹೀಗೆ ಹಲವು ಸೌಕರ್ಯಗಳನ್ನು ನೀಡಿ ಜನಸಂಖ್ಯಾ ಜಾಸ್ತಿ ಮಾಡುವ ಕಸರತ್ತು ಮಾಡುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ