ರಜತ್ ಪಡೆಗೆ ಖಡಕ್ ಎಚ್ಚರಿಕೆ ಕೊಟ್ಟ ಆರ್​ಸಿಬಿಯ ಇಬ್ಬರು ಮಾಜಿ ಸ್ಟಾರ್ಸ್​..!

author-image
Ganesh
Updated On
ರಜತ್ ಪಡೆಗೆ ಖಡಕ್ ಎಚ್ಚರಿಕೆ ಕೊಟ್ಟ ಆರ್​ಸಿಬಿಯ ಇಬ್ಬರು ಮಾಜಿ ಸ್ಟಾರ್ಸ್​..!
Advertisment
  • ಚಿನ್ನಸ್ವಾಮಿಯಲ್ಲಿ ಇವತ್ತು ಪಂಜಾಬ್ vs ಆರ್​ಸಿಬಿ
  • ಸಂಜೆ 7.30ಕ್ಕೆ ಪಂದ್ಯ ಆರಂಭ, ಫ್ಯಾನ್ಸ್ ಎಕ್ಸೈಟ್
  • PBKSನಲ್ಲಿ ಇಬ್ಬರು ಆರ್​ಸಿಬಿ ಮಾಜಿ ಸ್ಟಾರ್ಸ್

ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧದ ಇಂದಿನ ಪಂದ್ಯಕ್ಕೆ ಮಾಜಿ ಆರ್​​ಸಿಬಿಯನ್​ಗಳ ಅಭ್ಯಾಸ ಜೋರಾಗಿದೆ. ಚಿನ್ನಸ್ವಾಮಿ ಮೈದಾನದಲ್ಲಿ ಯುಜುವೇಂದ್ರ ಚಹಲ್​, ಗ್ಲೇನ್​ ಮ್ಯಾಕ್ಸ್​ವೆಲ್​ ಭರ್ಜರಿ ಅಭ್ಯಾಸ ನಡೆಸಿದ್ದಾರೆ.

ನೆಟ್ಸ್​ನಲ್ಲಿ ಕಳಪೆ ಫಾರ್ಮ್​ನಲ್ಲಿರೋ ಮ್ಯಾಕ್ಸ್​​ವೆಲ್ ಸುದೀರ್ಘ ಕಾಲ ಬ್ಯಾಟಿಂಗ್​ ಮಾಡಿದ್ದಾರೆ. ಮ್ಯಾಕ್ಸ್​ವೆಲ್​ಗೆ ಯುಜುವೇಂದ್ರ ಚಹಲ್​ ಬೌಲಿಂಗ್​​ ಮಾಡಿದ್ದಾರೆ. ಆ ಮೂಲಕ ಇಬ್ಬರು ಮಾಜಿ ಆರ್​ಸಿಬಿ ಸ್ಟಾರ್ಸ್​ ರಜತ್ ಪಡೆಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಡೋಲೋ 650 ಪ್ರಿಯರೇ ಎಚ್ಚರ ಎಚ್ಚರ.. ನಿಮ್ಮ ಜೀವಕ್ಕೆ ಸಂಚಕಾರ ಬಂದೀತು ಹುಷಾರ್..!

ಇನ್ನು ಇವರಿಬ್ಬರಿಗೂ ಚಿನ್ನಸ್ವಾಮಿ ಮೈದಾನದ ಅಣು ಅಣು ಕೂಡ ಚೆನ್ನಾಗಿ ತಿಳಿದಿರುತ್ತದೆ. ಪಂದ್ಯ ವೇಳೆ ಚಹಲ್ ಹಾಗೂ ಮ್ಯಾಕ್ಸಿ​, ಆರ್​ಸಿಬಿ ಬ್ಯಾಟ್ಸ್​​ಮನ್​​​ಗಳ ಮೇಲೆ ಎರಗಬಹುದು. ಏಕೆಂದರೆ ರಜತ್ ನೇತೃತ್ವದ ಆರ್​ಸಿಬಿ ಬ್ಯಾಟರ್ಸ್​ ಸ್ಪಿನ್ನರ್​ಗಳನ್ನ ಎದುರಿಸುವಲ್ಲಿ ಈಗಾಗಲೇ ಸೋತಿದ್ದಾರೆ. ನಿಧಾನಗತಿ ಬೌಲಿಂಗ್​ಗೆ ಬಾರಿಸುವಾಗ ಎಡವಿದ್ದೇ ಹೆಚ್ಚು. ಇಂದು ರಾತ್ರಿ 7.30ಕ್ಕೆ ಆರ್​ಸಿಬಿ ಪಂದ್ಯ ನಡೆಯಲಿದೆ.

ಇದನ್ನೂ ಓದಿ: RCB vs PBKS: ಪಂಜಾಬ್ ವಿರುದ್ಧದ ಪಂದ್ಯಕ್ಕೂ ಮೊದಲೇ ಶಾಂಕಿಂಗ್ ನ್ಯೂಸ್..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment