ಬರೋಬ್ಬರಿ 26 ಸಿಕ್ಸ್​​; 17 ಭರ್ಜರಿ ಫೋರ್​​​; ಆರ್​​ಸಿಬಿಯಿಂದ ಹೊರಬಿದ್ದ ಬೆನ್ನಲ್ಲೇ ಮ್ಯಾಕ್ಸಿ ಅಬ್ಬರ!

author-image
Ganesh Nachikethu
Updated On
ಇವತ್ತು RCB ಗೆಲ್ಲಲು ಪಾಲಿಸಬೇಕು ಐದು ಸೂತ್ರಗಳು.. ರೆಡ್​ ಆರ್ಮಿಗೆ ಟಫ್ ಚಾಲೆಂಜ್..!
Advertisment
  • 2025ರ ಇಂಡಿಯನ್ ಪ್ರೀಮಿಯರ್ ಲೀಗ್​ ಮೆಗಾ ಹರಾಜು
  • ಆರ್​ಸಿಬಿ ಮಾಜಿ ಆಟಗಾರ ಮ್ಯಾಕ್ಸಿಗೆ ಪಂಜಾಬ್​ ಮಣೆ..!
  • ಬಿಗ್​ಬ್ಯಾಷ್​ ಲೀಗ್​ನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​​ ಸಿಡಿಲಬ್ಬರ

ಆಸ್ಟ್ರೇಲಿಯಾದ ಸ್ಟಾರ್​ ಆಲ್​ರೌಂಡರ್​​ ಗ್ಲೆನ್​ ಮ್ಯಾಕ್ಸ್​ವೆಲ್​​. 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಮೆಗಾ ಹರಾಜಿಗೆ ಮುನ್ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದಿಂದ ಗ್ಲೆನ್​​ ಮ್ಯಾಕ್ಸ್​ವೆಲ್​ ಅವರನ್ನು ಕೈ ಬಿಡಲಾಯ್ತು. ಇದಕ್ಕೆ ಮುಖ್ಯ ಕಾರಣ ಕಳೆದ ಸೀಸನ್​ನಲ್ಲಿ ಮ್ಯಾಕ್ಸಿ ಕಳಪೆ ಪ್ರದರ್ಶನ.

2024ರ ಐಪಿಎಲ್​​ನಲ್ಲಿ ತಾನು ಆಡಿದ 10 ಪಂದ್ಯಗಳಲ್ಲಿ ಮ್ಯಾಕ್ಸಿ ಕೇವಲ 52 ರನ್​ ಚಚ್ಚಿದ್ರು. ಅದರಲ್ಲೂ ಒಂದೇ ಸೀಸನ್​ನಲ್ಲಿ ಬರೋಬ್ಬರಿ 5 ಬಾರಿ ಸೊನ್ನೆ ಸುತ್ತಿದ್ದರು. ಹೀಗಾಗಿ ಆರ್​ಸಿಬಿಯಿಂದ ಮ್ಯಾಕ್ಸಿಗೆ ಗೇಟ್​​​ಪಾಸ್​ ನೀಡಲಾಯ್ತು.

ಮ್ಯಾಕ್ಸಿಯನ್ನು ಖರೀದಿಸಿದ ಪಂಜಾಬ್​

ಆರ್​​ಸಿಬಿಯಿಂದ ಹೊರಬಿದ್ದ ಮ್ಯಾಕ್ಸಿಯನ್ನು ​ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಬರೋಬ್ಬರಿ 4.20 ಕೋಟಿ ರೂ. ಖರೀದಿಸಿದೆ. ಈ ಬೆನ್ನಲ್ಲೇ ಗ್ಲೆನ್ ಮ್ಯಾಕ್ಸ್​ವೆಲ್ ಮತ್ತೆ ಫಾರ್ಮ್​ಗೆ ಬಂದಿದ್ದಾರೆ. ಸದ್ಯ ನಡೆಯುತ್ತಿರೋ ಬಿಗ್​​ಬ್ಯಾಷ್​​ ಲೀಗ್​ನಲ್ಲಿ ಮ್ಯಾಕ್ಸಿ ಸಿಡಿಲಬ್ಬರದ ಬ್ಯಾಟಿಂಗ್ ಮಾಡುತ್ತಿದ್ದಾರೆ.

297 ರನ್​ ಚಚ್ಚಿದ ಮ್ಯಾಕ್ಸಿ

ಬಿಗ್ ಬ್ಯಾಷ್ ಲೀಗ್​ನಲ್ಲಿ ಇದುವರೆಗೂ ತಾನು ಆಡಿರೋ 8 ಪಂದ್ಯಗಳಲ್ಲಿ ಮ್ಯಾಕ್ಸಿ 297 ರನ್​ ಕಲೆ ಹಾಕಿದ್ದಾರೆ. ಅದು ಕೂಡ ಕೇವಲ 153 ಎಸೆತಗಳಲ್ಲಿ ಎಂಬುದು ವಿಶೇಷ. ಇವರು ಬರೋಬ್ಬರಿ ಮ್ಯಾಕ್ಸ್​ವೆಲ್ 194.1 ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ಪೈಕಿ ಸುಮಾರು 26 ಸಿಕ್ಸರ್​​, 17 ಫೋರ್​ ಚಚ್ಚಿದ್ದಾರೆ.

ಉತ್ತಮ ಪ್ರದರ್ಶನ ನೀಡದ ದುಬಾರಿ ಆಟಗಾರರನ್ನೇ ಆರ್​ಸಿಬಿ ಕೈ ಬಿಟ್ಟಿದೆ. ಸ್ಫೋಟಕ ಬ್ಯಾಟರ್ ಗ್ಲೆನ್ ಮ್ಯಾಕ್ಸ್‌ವೆಲ್‌ ಅವರನ್ನು ಆರ್​​ಸಿಬಿ ರಿಲೀಸ್​ ಮಾಡಿತ್ತು. 2021ರ ಹರಾಜಿನಲ್ಲಿ ಮ್ಯಾಕ್ಸ್‌ವೆಲ್‌ ಅವರನ್ನು 14.25 ಕೋಟಿ ರೂಪಾಯಿ ನೀಡಿ ಆರ್​​ಸಿಬಿ ಖರೀದಿ ಮಾಡಿತ್ತು. 2023ರ ಐಪಿಎಲ್‌ನಲ್ಲಿ 400 ರನ್ ಗಳಿಸಿದ್ದ ಮ್ಯಾಕ್ಸಿ ಕಳೆದ ಸೀಸನ್​ 2024ರ ಐಪಿಎಲ್‌ನಲ್ಲಿ ಕೇವಲ 52 ರನ್​ ಗಳಸಿದರು. ಈ ಮೂಲಕ ಆರ್​ಸಿಬಿಗೆ ಮ್ಯಾಕ್ಸ್​ವೆಲ್​ ದೊಡ್ಡ ತಲೆನೋವಾಗಿ ಪರಿಣಮಿಸಿದ್ರು.

2021ರಿಂದ 2023ರವರೆಗೆ ಆರ್​ಸಿಬಿ ಪರ ಮ್ಯಾಕ್ಸಿ ಅದ್ಭುತ ಆಲ್​ರೌಂಡರ್ ಆಟವನ್ನಾಡಿದ್ದರು. 2021ರಲ್ಲಿ ಮ್ಯಾಕ್ಸ್​​ವೆಲ್ 513, 2022ರಲ್ಲಿ 301, 2023ರಕ್ಕು 400 ರನ್​​ ಬಾರಿಸಿದ್ದರು. 2024ರಲ್ಲಿ ಕೇವಲ 52 ರನ್​​ ಮಾತ್ರ ಬಾರಿಸಿದ್ದಾರೆ. ಆಡಿರುವ 10 ಪಂದ್ಯಗಳಲ್ಲೂ ಮ್ಯಾಕ್ಸ್​ವೆಲ್ ಕೆಟ್ಟ ಪ್ರದರ್ಶನ ನೀಡಿ ಆರ್​ಸಿಬಿ ಮ್ಯಾನೇಜ್ಮೆಂಟ್​​ನ ಕೆಂಗಣ್ಣಿಗೆ ಗುರಿಯಾಗಿದ್ರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment