newsfirstkannada.com

ಹೈದರಾಬಾದ್​​ ವಿರುದ್ಧ ಪಂದ್ಯಕ್ಕೆ ಅಲಭ್ಯ; ಮ್ಯಾಕ್ಸಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಿದ RCB

Share :

Published April 13, 2024 at 10:25pm

Update April 13, 2024 at 10:28pm

    ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​​ನಲ್ಲಿ ಬೆಂಗಳೂರಿಗೆ ಸಾಲು ಸಾಲು ಸೋಲು

    ಮುಂಬೈ ಇಂಡಿಯನ್ಸ್​​ ವಿರುದ್ಧವೂ ಸೋಲು ಕಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರು

    ಸನ್​​ರೈಸರ್ಸ್​​ ವಿರುದ್ಧ ನಡೆಯೋ ಪಂದ್ಯಕ್ಕೆ ಮುನ್ನ ಆರ್​​ಸಿಬಿಗೆ ಮತ್ತೊಂದು ಆಘಾತ!

ಇತ್ತೀಚೆಗೆ ವಾಂಖೆಡೆ ಇಂಟರ್​ ನ್ಯಾಷನಲ್​​ ಸ್ಟೇಡಿಯಮ್​​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​​ ಲೀಗ್​​ ಹೈವೋಲ್ಟೇಜ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯ ಸೋಲು ಕಂಡಿದೆ. ಬ್ಯಾಕ್​ ಟು ಬ್ಯಾಕ್​​ 5 ಪಂದ್ಯ ಸೋತ ಆರ್​​​ಸಿಬಿಗೆ ಮತ್ತೊಂದು ಆಘಾತ ಎದುರಾಗಿದೆ.

ಹೌದು, ಮುಂಬೈ ವಿರುದ್ಧದ ವೇಳೆ ಮ್ಯಾಕ್ಸ್​ವೆಲ್​​ಗೆ ಥಂಬ್​ ಇಂಜೂರಿ ಆಗಿದೆ. ಕೈಗೆ ತೀವ್ರವಾದ ಗಾಯಗಳು ಆದ ಕಾರಣ ಮ್ಯಾಕ್ಸ್​ವೆಲ್​​ ಮುಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಹೀಗಾಗಿ ಏಪ್ರಿಲ್​ 15ನೇ ತಾರೀಕು ನಡೆಯಲಿರೋ ಸನ್​ರೈಸರ್ಸ್​​​​ ಹೈದರಾಬಾದ್​​​ ತಂಡದ ವಿರುದ್ಧ ಪಂದ್ಯದಿಂದ ಮ್ಯಾಕ್ಸಿ ಔಟ್​ ಆಗಲಿದ್ದಾರೆ ಎಂದು ವರದಿಯಾಗಿದೆ. ನಿಜವಾಗಲೂ ಗಾಯ ಆಗಿದೆಯೋ ಅಥವಾ ಉದ್ದೇಶಪೂರ್ವಕವಾಗಿ ಪಂದ್ಯದಿಂದ ತೆಗೆದು ಹಾಕಲಾಗಿದೆಯೇ ಅನ್ನೋ ಚರ್ಚೆ ನಡೆಯುತ್ತಿದೆ.

ಸತತ 5 ಸೋಲಿನಿಂದ ಕಂಗೆಟ್ಟ ಆರ್​​ಸಿಬಿ ಹೈದರಾಬಾದ್​​ ವಿರುದ್ಧ ಪಂದ್ಯಕ್ಕಾಗಿ ತಂಡದಲ್ಲಿ ಭಾರೀ ಬದಲಾವಣೆ ಮಾಡೋ ಸಾಧ್ಯತೆ ಇದೆ. ಕಳೆದ 6 ಪಂದ್ಯದಲ್ಲೂ ಕಳಪೆ ಪ್ರದರ್ಶನ ನೀಡಿರೋ ಕಾರಣ ಸ್ಟಾರ್​ ಆಲ್​ರೌಂಡರ್​ ಮ್ಯಾಕ್ಸಿ ಅವರನ್ನು ಬೆಂಚ್​​ ಕಾಯಿಸಲಾಗುತ್ತಿದೆ. ಇವರ ಬದಲಿಗೆ ಇಂಗ್ಲೆಂಡ್​ ತಂಡದ ಸ್ಟಾರ್​​ ಆಲ್​ರೌಂಡರ್​ ವಿಲ್​ ಚಾಕ್ಸ್​ಗೆ ಅವಕಾಶ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.

ಮ್ಯಾಕ್ಸ್‌ವೆಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಬ್ಯಾಟ್ಸ್‌ಮನ್. ಇವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿಲ್ಲ. ಹೀಗಾಗಿ ಮ್ಯಾಕ್ಸಿ ಬದಲಿಗೆ ಇಂಗ್ಲೆಂಡ್ ಆಲ್​ರೌಂಡರ್ ಆಗಿರುವ ವಿಲ್​ ಜ್ಯಾಕ್ಸ್​ ಆಯ್ಕೆ ಮಾಡಬಹುದು ಎಂದು ವರದಿಯಾಗಿತ್ತು.

ಇದನ್ನೂ ಓದಿ: ಬಿಸಿಸಿಐ ವಿರುದ್ಧ ಸಾರ್ವಜನಿಕವಾಗಿ ಆಕ್ರೋಶ ಹೊರಹಾಕಿದ ಇಶಾನ್​ ಕಿಶನ್​​; ಕಾರಣವೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೈದರಾಬಾದ್​​ ವಿರುದ್ಧ ಪಂದ್ಯಕ್ಕೆ ಅಲಭ್ಯ; ಮ್ಯಾಕ್ಸಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಿದ RCB

https://newsfirstlive.com/wp-content/uploads/2024/04/Maxwell_RCB12.jpg

Load More